ನೂತನ ಶಿಕ್ಷಣ ನೀತಿ ಜಾರಿ ಸಂಬಂಧ ಕರ್ನಾಟಕ ರಾಜ್ಯ ದೇಶಕ್ಕೆ ಮಾದರಿಯಾಗಲಿದೆ -ವಿ.ಪ.ಶಾಸಕ ಚಿದಾನಂದ.ಎಂ.ಗೌಡ.

ನೂತನ ಶಿಕ್ಷಣ ನೀತಿ ಜಾರಿ ಸಂಬಂಧ ಕರ್ನಾಟಕ ರಾಜ್ಯ ದೇಶಕ್ಕೆ ಮಾದರಿಯಾಗಲಿದೆ -ವಿ.ಪ.ಶಾಸಕ ಚಿದಾನಂದ.ಎಂ.ಗೌಡ.

 

ನೂತನ ಶಿಕ್ಷಣ ನೀತಿ_2020ರ ಜಾರಿಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಶಿಕ್ಷಕರು ಎಲ್ಲರೂ ಉತ್ಸುಕರಾಗಿದ್ದಾರೆ ಎಂದು ವಿಧಾನಪರಿಷತ್ ಶಾಸಕ ಚಿದಾನಂದಗೌಡ ರವರು ತಿಳಿಸಿದ್ದಾರೆ.

 

ತುಮಕೂರಿನಲ್ಲಿ ಪ್ರತಿಕ್ರಿಯಿಸಿದ ಅವರು ನೂತನ ಶಿಕ್ಷಣ ನೀತಿ ಹೆಸರಿನಲ್ಲಿ ಯಾವುದೇ ಖಾಸಗೀಕರಣ ನಡೆಯುತ್ತಿಲ್ಲ ಇದರ ಸಂಬಂಧ ಹಲವಾರು ಗೊಂದಲ ಸೃಷ್ಟಿಸುತ್ತಿದ್ದಾರೆ. ಇನ್ನು ನೂತನ ಶಿಕ್ಷಣ ನೀತಿ ಹೆಸರಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುಕೂಲವಾಗುತ್ತೆ ಇದರಲ್ಲಿ ಸರ್ಕಾರಿ ಶಾಲೆಗಳಿಗೆ ಯಾವುದೇ ಅನುಕೂಲವಿಲ್ಲ ಎನ್ನುವುದು ಸತ್ಯಕ್ಕೆ ದೂರವಾದದ್ದು. ಈಗಾಗಲೇ ಖಾಸಗಿ ಶಿಕ್ಷಣ ಸಂಸ್ಥೆಗಳು ನೂತನ ಶಿಕ್ಷಣ ನೀತಿಯನ್ನು ಈಗಾಗಲೇ ಅನುಸರಿಸುತ್ತೇವೆ. ಸರ್ಕಾರಿ ಶಾಲೆಗಳಲ್ಲಿ ಹಾಗೂ ಮೂರರಿಂದ ಹದಿನಾರನೇ ತರಗತಿಯವರೆಗೆ ವಿದ್ಯಾಭ್ಯಾಸ ನೀಡುವ ಸಲುವಾಗಿ ಖಾಸಗಿ ಶಾಲೆಗಳು ಈಗಾಗಲೇ ಕಾರ್ಯೋನ್ಮುಖವಾಗಿವೆ.

 

ಇನ್ನು ಸರ್ಕಾರಿ ಶಾಲೆಗಳಲ್ಲಿ ಈ ವ್ಯವಸ್ಥೆ ಇಲ್ಲ ಇನ್ನು ಸರ್ಕಾರಿ ಶಾಲೆಗಳು ಹಾಗೂ ಗ್ರಾಮಾಂತರ ಭಾಗದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ಸರ್ಕಾರ ನಡೆದುಕೊಳ್ಳುತ್ತಿದೆ, ಸುಮಾರು 37 ವರ್ಷಗಳ ಹಿಂದೆ ಇದ್ದ ಓಬಿರಾಯನ ಕಾಲದ ಮೆಕಾಲೆ ಶಿಕ್ಷಣ ವ್ಯವಸ್ಥೆಯನ್ನು ತೆಗೆದು ನಮಗೆ ಈಗ ಅವಶ್ಯಕತೆ ಇರುವ ಹಾಗೂ ಬದಲಾವಣೆ ಆದಂತಹ ಸಂದರ್ಭದಲ್ಲಿ ಅವಶ್ಯಕವಿರುವ ಅಂತಹ ಶಿಕ್ಷಣ ಬೇಕು ಹಾಗೂ ಮಕ್ಕಳು ಪ್ರಾಯೋಗಿಕವಾಗಿ ಶಿಕ್ಷಣವನ್ನು ಪಡೆಯಬೇಕು ಅದರ ಸಂಬಂಧ ಸರ್ಕಾರ ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ ಎಂದರು.

 

ಇನ್ನು ನೂತನ ಶಿಕ್ಷಣ ನೀತಿ ಜಾರಿ ಸಂಬಂಧ ಹಲವು ಶಿಕ್ಷಣ ತಜ್ಞರು ಶ್ರಮ ಹಾಕಿದ್ದಾರೆ ಅದರಂತೆ ಡಾಕ್ಟರ್ ಕಸ್ತೂರಿರಂಗನ್ ನೇತೃತ್ವದಲ್ಲಿ ಹಾಗೂ ಕೆ ಶ್ರೀಧರ್ ಸೇರಿದಂತೆ ದೇಶಾದ್ಯಂತ ಲಕ್ಷಾಂತರ ಶಿಕ್ಷಣತಜ್ಞರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಅದರ ಸಂಬಂಧ ಕಳೆದ ಸುಮಾರು ಆರು ವರ್ಷಗಳಿಂದ ಸಂಪೂರ್ಣ ಚರ್ಚೆ ನಡೆಸಿ ಬದಲಾವಣೆ ಮಾಡಲಾಗಿದೆ.

 

ಇನ್ನು ನೂತನ ಶಿಕ್ಷಣ ನೀತಿಗೆ ಯಾರು ವಿರೋಧ ಮಾಡುತ್ತಾರೋ ಅವರಿಗೂ ಕೂಡ ಒಳ್ಳೆಯ ಅಭಿಪ್ರಾಯ ಇದೆ ವಿರೋಧಕ್ಕಾಗಿ ವಿರೋಧ ಅಷ್ಟೇ ಬಿಟ್ಟರೆ ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

 

ದೇಶವನ್ನು ಹೊಸ ದಿಕ್ಕಿನೆಡೆಗೆ ಕೊಂಡೊಯ್ಯುವ ಶಿಕ್ಷಣ ವ್ಯವಸ್ಥೆ ಇದರಲ್ಲಿದೆ . ಇನ್ನೂ ಶಿಕ್ಷಣವನ್ನು ಖಾಸಗೀಕರಣ ಕ್ಕೆ ಪೂರಕವಾದ ಯಾವುದೇ ಅಂಶ ನೂತನ ಶಿಕ್ಷಣ ನೀತಿಯಲ್ಲಿ ಇಲ್ಲ ಎಂದರು.

 

ಆರರಿಂದ 14ನೇ ವರ್ಷದವರೆಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ವ್ಯವಸ್ಥೆ ಬದಲಾಗಿ ಮೂರರಿಂದ 16ನೇ ವರ್ಷದವರೆಗೆ ಬರಬಹುದು ಎಂದರು ಇದರ ಮೂಲಕ ಮೂರರಿಂದ 16ನೇ ವರ್ಷದವರೆಗೂ ಕಡ್ಡಾಯ ಶಿಕ್ಷಣ ಜಾರಿ ಆಗಬಹುದು ಎಂದು ತಿಳಿಸಿದ್ದಾರೆ.

 

ಇನ್ನು ನೂತನ ಶಿಕ್ಷಣ ನೀತಿ ಜಾರಿ ಸಂಬಂಧ ಕರ್ನಾಟಕ ಸರ್ಕಾರ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು ಅದರ ಸಂಬಂಧ ಶಿಕ್ಷಣ ಸಚಿವರಾದ ಅಶ್ವಥ್ ನಾರಾಯಣ್ ರವರು ಸಾಕಷ್ಟು ಶ್ರಮ ಹಾಕಿದ್ದಾರೆ ಇದರ ಸಂಬಂಧ ದೇಶದಲ್ಲೇ ಕರ್ನಾಟಕ ರಾಜ್ಯ ನೂತನ ಶಿಕ್ಷಣ ನೀತಿ ಸಂಬಂಧ ಕರ್ನಾಟಕ ರಾಜ್ಯ ದೇಶಕ್ಕೆ ಮಾದರಿಯಾಗಲಿದೆ ಎಂದರು.

Leave a Reply

Your email address will not be published. Required fields are marked *

You cannot copy content of this page

error: Content is protected !!