ಶಿಕ್ಷಕರ ವರ್ಗಾವಣೆ ಸಂಬಂಧ ಗೊಂದಲಗಳು ಬಗೆಹರಿಯಲಿದೆ _ಸಚಿವ ಬಿಸಿ ನಾಗೇಶ್.
ಇನ್ನು ರಾಜ್ಯದಲ್ಲಿರುವ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ಸಾಕಷ್ಟು ಗೊಂದಲಗಳು ಇವೆ ಕಳೆದ ಮೂರು ವರ್ಷಗಳಿಂದ ಶಿಕ್ಷಕರ ವರ್ಗಾವಣೆಗಳು ನಡೆದಿಲ್ಲ. ಈ ಹೊತ್ತಿಗೆ ಅರ್ಧದಷ್ಟು ವರ್ಗಾವಣೆ ಪ್ರಕ್ರಿಯೆ ಮುಗಿಯಬೇಕಿತ್ತು ಆದರೆ ಕೆಲವರು ಪದೇ ಪದೇ ತಡೆಯಾಜ್ಞೆ ತಂದ ಕಾರಣ ಅದರ ಸಂಬಂಧ ಇದುವರೆಗೂ ಶಿಕ್ಷಕರ ವರ್ಗಾವಣೆ ಗಳು ಆಗಿರಲಿಲ್ಲ ಹಾಗಾಗಿ ಸಾಕಷ್ಟು ಬಾರಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಮುಂದೆ ಹೋಗಿದ್ದವು. ಆದರೆ ಈಗ ಹೊಸ ಕಾಯ್ದೆ ಬಂದಿದ್ದು ಅದರ ಪ್ರಕಾರ ಹೊಸ ನೋಟಿಫಿಕೇಶನ್ ಹೊರಡಿಸಲಾಗುವುದು ಎಂದರು.
ಶಾಲೆ ಆರಂಭ ಕುರಿತು ಸ್ಪಷ್ಟನೆ ನೀಡಿದ ಸಚಿವರು.
ಒಂದರಿಂದ ಐದನೆ ತರಗತಿ ವರೆಗೆ ದಸರಾ ಹಬ್ಬದ ನಂತರ ಶಾಲೆ ತೆರೆಯುವ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿ ಕ್ರಮಕೈಗೊಳ್ಳಲಾಗುವುದು ಎಂದರು.
ಶಿಕ್ಷಕರ ಹಿಂಬಡ್ತಿ ಕುರಿತು ಪ್ರತಿಕ್ರಿಯಿಸಿದ ಸಚಿವರು ಒಂದರಿಂದ ಏಳನೇ ತರಗತಿಯವರೆಗೆ ತರಗತಿಗಳು ತೆಗೆದುಕೊಳ್ಳುತ್ತಿದ್ದ ಶಿಕ್ಷಕರಿಗೆ ಹಿಂಬಡ್ತಿ ಆಗುತ್ತಿದೆ ಇದರ ಸಂಬಂಧ ಪ್ರತಿಕ್ರಿಯಿಸಿದ ಅವರು ನೂತನ ಶಿಕ್ಷಣ ನೀತಿ ಇಂದ ಯಾವುದೇ ಗೊಂದಲಗಳು ಇಲ್ಲ ಇನ್ನೂ ಕೆಲ ಶಿಕ್ಷಕರು ನೂತನ ಶಿಕ್ಷಣ ನೀತಿ ಜಾರಿಯಾಗಿದ್ದು ಅದರ ಮೂಲಕ ಕೆಲ ಶಿಕ್ಷಕರಿಗೆ ಹಿಂಬಡ್ತಿ ಆಗುತ್ತಿದೆ ಎಂದು ಅರ್ಥೈಸಿರುವುದು ತಪ್ಪು ನಿರ್ಧಾರ ನೂತನ ಶಿಕ್ಷಣ ನೀತಿಯಿಂದ ಯಾವುದೇ ಶಿಕ್ಷಕರಿಗೆ ಹಿಂಬಡ್ತಿ ಆಗುವುದಿಲ್ಲ ಆದೇಶದ ಪ್ರಕಾರ 6ರಿಂದ 8ನೇ ತರಗತಿ ಪಾಠ ನಿರ್ವಹಿಸಲು ಪದವಿ ಶಿಕ್ಷಕರ ಅಗತ್ಯವಿದ್ದು ಅದರ ಅನುಸಾರ ಪದವಿ ಮುಗಿಸಿರುವ ಶಿಕ್ಷಕರನ್ನು ತೆಗೆದುಕೊಳ್ಳಲಾಗುತ್ತಿದೆ ಎಂದರು . ಇನ್ನು ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಮುಂಬಡ್ತಿ ಪ್ರಕ್ರಿಯೆಯಲ್ಲಿ ಯಾವುದೇ ಗೊಂದಲ ಇಲ್ಲ.
ಇನ್ನು 6ರಿಂದ 8ನೇ ತರಗತಿಯ ಶಿಕ್ಷಕರಿಗೆ ನಿಯಮನುಸಾರ ಮುಂಬಡ್ತಿ ಆಗುತೆ ಅದಕ್ಕೆ ಸಂಬಂಧಿಸಿದಂತೆ ಕೆಲ ಸಂಘಟನೆಗಳು ಇಲಾಖೆ ನಡೆಸಬೇಕಿದ್ದ ಪರೀಕ್ಷೆಯನ್ನು ಬೇಡ ಎಂದು ಕೆಲ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದವು ಯಾರು ಪರೀಕ್ಷೆಯಲ್ಲಿ ತೆಗೆದುಕೊಳ್ಳುತ್ತಾರೋ ಅಂತ ಶಿಕ್ಷಕರಿಗೆ ಮುಂಬಡ್ತಿ ಪ್ರಕ್ರಿಯೆಯಲ್ಲಿ ಯಾವುದೇ ತೊಂದರೆ ಆಗುವುದಿಲ್ಲ ಎಂದರು.
ಶಾಲಾ ಶುಲ್ಕ ಸಂಬಂಧ ದೂರು ಬಂದರೆ ಇಲಾಖೆ ಸ್ಪಂದಿಸಲಿದೆ.
ಈಗಾಗಲೇ ಶಾಲೆಗಳು ಆರಂಭವಾಗಿದ್ದು ರಾಜ್ಯಾದ್ಯಂತ ಸರ್ಕಾರಿ ಹಾಗೂ ಖಾಸಗಿ ಶಾಲೆಗಳು ಕರ್ತವ್ಯ ನಿರ್ವಹಿಸುತ್ತಿದ್ದು ಶಾಲೆಗಳ ಶುಲ್ಕ ಸಂಬಂಧ ಯಾವುದೇ ಗೊಂದಲ ಇಲ್ಲ ಇನ್ನು ಸರ್ಕಾರ ಶೇಕಡಾ ಮೂವತ್ತರಷ್ಟು ವಿನಯಿತಿ ಕೇಳಿದ್ದು ಆದರೆ ಕೋರ್ಟ್ ಶೇಕಡಾ 15 ರಷ್ಟು ವಿನಾಯಿತಿ ನೀಡಿದೆ.
ಇನ್ನು ಶಾಲಾ ಶುಲ್ಕಕ್ಕೆ ಸಂಬಂಧಿಸಿದಂತೆ ದೂರುಗಳು ಬಂದರೆ ಅದಕ್ಕೆ ಸಂಬಂಧಿಸಿದಂತೆ ನಮ್ಮ ಇಲಾಖೆಗಳು ಸ್ಪಂದಿಸಲಿ ಇದುವರೆಗೂ ಬೆಂಗಳೂರು ಹಾಗೂ ತುಮಕೂರಿನoತ ಮಹಾನಗರಗಳಲ್ಲಿ ಶಾಲಾ ಶುಲ್ಕ ಗೊಂದಲಗಳಿವೆ ಅದಕ್ಕೆ ಪೂರಕವಾಗಿ ದೂರು ಬಂದರೆ ಇಲಾಖೆ ಸ್ಪಂದಿಸಲಿದೆ ಎಂದು ಸ್ಪಷ್ಟಪಡಿಸಿದರು.
ಕರಿಕೆರೆ ವಿದ್ಯುತ್ ಅವಘಡದಿಂದ ಮೃತಪಟ್ಟ ಬಾಲಕನಿಗೆ ಸರ್ಕಾರದಿಂದ ಬರಬೇಕಾಗಿರುವ ಹಣವನ್ನು ತಲುಪಿಸುವಲ್ಲಿ ನಾವು ಪ್ರಾಮಾಣಿಕ ಪ್ರಯತ್ನ ಮಾಡಲಿದ್ದೇವೆ ಎಂದರು.