ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ “ಲಂಚ ಮುಕ್ತ ಅಭಿಯಾನ”

ತುಮಕೂರು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ “ಲಂಚ ಮುಕ್ತ ಅಭಿಯಾನ” ನಡೆಸಲಾಯಿತು. 

ಜಿಲ್ಲಾಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಕಳಿಸುವ ಕೆಲವೊಂದು ಪ್ರಕರಣ, ಆಸ್ಪತ್ರೆ ಆವರಣದಲ್ಲಿ ಶುಚಿತ್ವ ಕಾಪಾಡದೆ ಇರುವುದು, ಆವರಣದ ಸಹಾಯವಾಣಿ ಕೇಂದ್ರ ಸ್ಥಗಿತವಾಗಿರುವುದು, ಕುಡಿಯುವ ನೀರು ವ್ಯವಸ್ಥೆ ಸ್ಥಗಿತಗೊಂಡಿರುವುದು, ಐ.ಸಿ.ಯು ನಲ್ಲಿ ಮೇಲ್ವಿಚಾರಕ ಡಾಕ್ಟರ್ ಮತ್ತು ಹಾಸಿಗೆ ಲಭ್ಯತೆ ಬಗ್ಗೆ ಮಾಹಿತಿ ಪ್ರತಿದಿನ ಹಾಕದೇ  ಇರುವುದು, ಹಲವಾರು ಕಡೆ ಕಟ್ಟಡದ ಮೇಲ್ಛಾವಣಿಯಿಂದ ನೀರು ಸೋರುತ್ತಿರುವುದು, ಶೌಚಾಲಯಗಳ ಅತೀ ಕೆಟ್ಟ ನಿರ್ವಹಣೆ, ಹಲವಾರು ಸಿಬ್ಬಂದಿಗಳು ಐ.ಡಿ. ಕಾರ್ಡ್ ಹಾಕದೇ ಇರುವುದು, ಸ್ಕಾನಿಂಕ್ ಇದ್ದರೂ ಖಾಸಗಿ ಸೆಂಟರ್ ಗಳಿಗೆ ಕಳಿಸುತ್ತಿರುವುದು, ಪಕ್ಷದ ಅಭಿಯಾನದ ಸಂದರ್ಭದಲ್ಲಿ ಕಂಡುಬಂದ ಸಮಸ್ಯೆಗಳನ್ನು ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ವೀರಭದ್ರಯ್ಯ ರವರಿಗೆ ಲಿಖಿತ ಪತ್ರದ ಮೂಲಕ ತಿಳಿಸಿ , ಸಮಸ್ಯೆಗಳನ್ನು ಸರಿಪಡಿಸುವಂತೆ ಕೋರಲಾಯಿತು. ಇದಕ್ಕೆ ಸೂಕ್ತವಾಗಿ ಸ್ಪಂದಿಸಿದ ಡಾ.ವೀರಭದ್ರಯ್ಯನವರು ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ತಿಳಿಸಿದರು. 

ಈ ಅಭಿಯಾನದಲ್ಲಿ ಕೆ.ಆರ್.ಎಸ್. ಪಕ್ಷದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜನ್ ಭಟ್ಟರಹಳ್ಳಿ, ರಾಜ್ಯ ಎಸ್ಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷರಾದ ಓಬಳೇಶಪ್ಪ, ನಿವೃತ್ತ ಡಿ.ಎಚ್.ಓ. ಯಲ್ಲಪ್ಪ, ಜಿಲ್ಲಾಧ್ಯಕ್ಷರಾದ ಗಜೇಂದ್ರ ಕುಮಾರ್, ಜಿಲ್ಲಾ ಕಾರ್ಯದರ್ಶಿ ಕಾರ್ತಿಕ್, ಜಿಲ್ಲಾ ಆಟೋ ಘಟಕದ ಅಧ್ಯಕ್ಷರಾದ ರವಿ ಕಿರಣ್, ಜಿಲ್ಲಾ ಜಂಟಿ ಕಾರ್ಯದರ್ಶಿ ಗುರುಪ್ರಸಾದ್, ನಗರ ಯುವ ಘಟಕದ ಅಧ್ಯಕ್ಷರಾದ ಕಿರಣ್,  ವಿವಿಧ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!