ಸಿಂದಗಿ_ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಬಿ ಕೇರ್ ಫುಲ್ – ಸಿದ್ದರಾಮಯ್ಯ
ಬೆಲೆ ಏರಿಕೆ ನೀತಿಯಿಂದ ಜನ ಬೇಸತ್ತಿದ್ದಾರೆ. ಹೀಗಾಗಿ ಬಿಜೆಪಿಗೆ ತಕ್ಕ ಪಾಠ ಕಲಿಸಲು ಸಜ್ಜಾಗಿದ್ದು, ಸಾರ್ವತ್ರಿಕ ಚುನಾವಣೆ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದಾರೆ. ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಬಿ ಕೇರ್ ಫುಲ್ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಶುಕ್ರವಾರ ಸಿಂದಗಿ ಉಪ ಚುನಾವಣೆ ಹಿನ್ನೆಲೆ ಪಕ್ಷದ ಅಭ್ಯರ್ಥಿ ಅಶೋಕ ಮನಗೂಳಿ ನಾಮಪತ್ರ ಸಲ್ಲಿಕೆ ಬಳಿಕ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಜನತಾದಳದಲ್ಲಿ ಇದ್ದಾಗ ಇದೆ ವೇದಿಕೆಯಲ್ಲಿ ಎಂ ಸಿ ಮನಗುಳಿಯವರ ಪರ ಮತಯಾಚನೆ ಮಾಡಿದ್ದೇ ಇಂದು ಅವರ ಪುತ್ರ ಅಶೋಕ ಮನಗೂಳಿ ಪರ ಮತಯಾಚನೆ ಮಾಡುತ್ತಿದ್ದೇನೆ .
ಈ ಉಪ ಚುನಾವಣೆ ಯಲ್ಲಿ ನಮ್ಮ ಪಕ್ಷ ೨೫ ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತದೆ . ನಾನು 13 ಬಜೆಟ್ ಮಂಡಿಸಿದ್ದೇನೆ. ಆದರೆ, ಇಂಥ ಆರ್ಥಿಕ ದುಃಸ್ಥಿತಿ ಎಂದೂ ಎದುರಾಗಿರಲಿಲ್ಲ ಎಂದರು.
ಜೆಡಿಎಸ್ ಉದ್ದೇಶ ಜನರಿಗೆ ಗೊತ್ತಿದೆ. ಸೋಲುವ ಅಭ್ಯರ್ಥಿಗೆ ಜನ ಮತ ಹಾಕುವುದಿಲ್ಲ. ಧಾರವಾಡ-ಹುಬ್ಬಳ್ಳಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಏನಾಯಿತು ಎಂಬುದು ಗೊತ್ತಿದೆಯಲ್ಲ? ಎಂದರು.
ದಿ.ಎಂ.ಸಿ. ಮನಗೂಳಿ ಅವರ ಆಶಯದಂತೆ ಅಶೋಕಗೆ ಪಕ್ಷಕ್ಕೆ ಬರಮಾಡಿಕೊಳ್ಳಲಾಗಿದೆ. ಎಲ್ಲರ ಒಪ್ಪಿಗೆ ಪಡೆದು, ವಿಶ್ವಾಸಕ್ಕೆ ತೆಗೆದುಕೊಂಡು ಅಶೋಕಗೆ ಟಿಕೆಟ್ ನೀಡಲಾಗಿದೆ. ಸಿಂದಗಿ ಉಪ ಚುನಾವಣೆಯಲ್ಲಿ ಅಶೋಕ ಮನಗೂಳಿ ಗೆಲುವು ಸಾಧಿಸಲಿದ್ದಾರೆ. ನಾನು ಜನರ ನಾಡಿ ಮಿಡಿತ ಅರಿತಿದ್ದೇನೆ.
ಈ ಬಾರಿ ಅಶೋಕ ಗೆಲ್ಲುವುದು ನಿಶ್ಚಿತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ನಾವೆಲ್ಲ ಸೇರಿ ಎಂ.ಸಿ.ಮನಗೂಳಿ ಸಾಯುವ 15 ದಿನಗಳ ಮುಂಚೆ ಅವರ ಮಗನನ್ನು ನಿಮ್ಮ ಕೈಗೆ ಕೊಡುತ್ತಿದ್ದೇನೆ ಎಂದಿದ್ದರು. ಅದರಂತೆ ಅಶೋಕಗೆ ಪಕ್ಷಕ್ಕೆ ಬರಮಾಡಿಕೊಳ್ಳಲಾಗಿದೆ. ಇಲ್ಲಿ ಸೇರಿದ ಜನ ಸಾಗರ ಪಕ್ಷದ ಪರ ಅಲೆಗೆ ಸಾಕ್ಷಿಯಾಗಿದೆ.
ಹಾನಗಲ್ ಹಾಗೂ ಸಿಂದಗಿ ಕ್ಷೇತ್ರದ ಚುನಾವಣೆ ಜನರು ತಮ್ಮ ಭಾವನೆ ಹೇಳಿಕೊಳ್ಳಲು ಇರುವ ಅವಕಾಶ. ಎರಡೂ ಕಡೆ 25 ಸಾವಿರ ಮತಗಳಿಂದ ಗೆಲುವಿನ ವಿಶ್ವಾಸ ಇದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಶಿವಾನಂದ ಪಾಟೀಲ , ಆನಂದ ನಾಮ ಗೊಂಡ್ , ಎಸ್ ಆರ್ ಪಾಟೀಲ್ , ಮಾಜಿ ಸಚಿವ ಎಂ ಬಿ ಪಾಟೀಲ್ , ಸೇರಿದಂತೆ ಹಲವರು ಉಪಸ್ತಿತಿರಿದ್ದರು .