ಕೋಮು ದ್ವೇಷ ಭಾಷಣದ ನಡುವೆಯೂ ಮಾನವಿಯತೆ ಎತ್ತಿ ಹಿಡಿದ ಕಣ್ಣೂರು ಜಮಾಹತ್ ಭಾಂಧವರು

ಕೋಮು ದ್ವೇಷ ಭಾಷಣದ ನಡುವೆಯೂ ಮಾನವಿಯತೆ ಎತ್ತಿ ಹಿಡಿದ ಕಣ್ಣೂರು ಜಮಾಹತ್ ಭಾಂಧವರು

 

ಸಾಮಾಜಿಕ ಜಾಲ ತಾಣದಲ್ಲಿ ದಿನನಿತ್ಯ ಹಿಂದುತ್ವದ ಅಮಲೇರಿದ ಪುಡಿ ನಾಯಕ/ಕಿ ಯವರ ಹೊಡಿ ಬಡಿ ದ್ವೇಷ ಭಾಷಣ ಹಾಗೂ ದರ್ಮಾಧರಿತ ಕಲಹದ ನಡೆಯುವೆಯೂ ಕಣ್ಣೂರಿನ ಮುಸ್ಲಿಂ ಬಾಂಧವರು ಸಹಾಯಯಾಚಿಸಿ ಬಂದ ಹಿಂದೂ ಕುಟುಂಬಕ್ಕೆ ಆಸರೆಯಾಗಿದ್ದಾರೆ.

 

ಉತ್ತರ ಭಾರತದಿಂದ ದೇವಾಲಯಗಳ ಸಂದರ್ಶನಕ್ಕಾಗಿ ಮಂಗಳೂರಿಗೆ ಬಂದ ಹಿಂದೂ ಕುಟುಂಬವೊಂದು ತಮ್ಮ ಅತ್ಯಮೂಲ್ಯ ವಸ್ತುಗಳನ್ನು ಹಾಗೂ ಹಣದ ಪರ್ಸನ್ನು ಮಂಗಳೂರಿನ ರೈಲ್ವೆ ಸ್ಟೇಶನ್ ನಲ್ಲಿ ಕಳೆದುಕೊಂಡಿತ್ತು. ಇದರಿಂದ ಕಂಗಾಲಾದ ಕುಟುಂಬವು ಮಂಗಳೂರಿನಲ್ಲಿ ಯಾಚಿಸುತ್ತಾ ಕಂಗೆಟ್ಟಿದ್ದರು. 

 

ಇಂದು ಜುಮಾ ನಮಾಝಿನ ಸಮಯದಲ್ಲಿ ಕಣ್ಣೂರಿಗೆ ಬಂದ ಹಿಂದೂ ಕುಟುಂಬವು ಮುಸ್ಲಿಂ ಬಾಂದವರ ಬಳಿ ಯಾಚಿಸಿದಾಗ ಕಣ್ಣೂರು ಮಸ್ಜಿದ್ ನ ಖತೀಬರು ಜುಮಾ ನಂತರ ಇವರಿಗೆ ಸಹಾಯ ಮಾಡಲು ನಿರ್ಧರಿಸಿದ್ದು  ಮಸೀದಿಯಲ್ಲಿ ಕಲೆಕ್ಷನ್ ಮಾಡಿ ಒಟ್ಟು 7,400 ರೂಪಾಯಿಯನ್ನು ಸಂಗ್ರಹಿಸಿ ಕುಟುಂಬದವರ ಸಂಪೂರ್ಣ ಖರ್ಚು ವಹಿಸಿ ಅವರಿಗೆ ಆಹಾರದ ವ್ಯವಸ್ಥೆ ಹಾಗೂ ಊರಿಗೆ ಮರಳಿ ಹೋಗಲು ಎಲ್ಲಾ ಸದಸ್ಯರಿಗೆ ಟ್ರೈನಿನ ಟಿಕೆಟ್ ಕಾಯ್ದಿರಿಸಿ ಅವರನ್ನು ರೈಲ್ವೆ ನಿಲ್ದಾಣದವರೆಗೆ ಬಿಟ್ಟು ಮಾನವೀಯತೆ ಮೆರೆದರು. 

 

ಎಲ್ಲರ ರಕ್ಷಣೆ ನಮ್ಮಿಂದಲೆ ಅಂತಾ ಪುಂಖಾನು ಪುಂಖ ಬಿಡುವ ನಾಯಕರು ಯಾರು ಈ ಕುಟುಂಬಕ್ಕೆ ಆಸರೆಯಾಗದ್ದು ದುರಂತ.!!!

 

Leave a Reply

Your email address will not be published. Required fields are marked *