ಗ್ರಾಮ ಸಭೆಗೆ ಅಧಿಕಾರಿಗಳು ಗೈರು ಜನರ ಆಕ್ರೋಶ

ಗ್ರಾಮ ಸಭೆಗೆ ಅಧಿಕಾರಿಗಳು ಗೈರು ಜನರ ಆಕ್ರೋಶ

5

ದೇವನಹಳ್ಳಿ: ಗ್ರಾಮಸಭೆಯ ಮೂಲ ಉದ್ದೇಶವನ್ನು ಗ್ರಾಪಂ ಆಡಳಿತಮಂಡಳಿ ಮತ್ತು ಸದಸ್ಯರು ಬುಡಮೇಲುಗೊಂಡು, ಗಾಂಧಿಕನಸು ನುಚ್ಚುನೂರಾದ ಘಟನೆ ದೇವನಹಳ್ಳಿ ತಾಲೂಕಿನ ಕುಂದಾಣ ಗ್ರಾಪಂಯ ಗ್ರಾಮ ಸಭೆಯಲ್ಲಿ ನಡೆದಿದೆ. ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗಾಗಿ ಸರಕಾರದ ಬರುವಂತಹ ಎಲ್ಲಾ ಯೋಜನೆಗಳನ್ನು ಜನರಿಗೆ ತಲುಪಿಸಿ ಮನವರಿಕೆ ಮಾಡಿಕೊಟ್ಟು, ಹಳ್ಳಿಗಳ ಅಭಿವೃದ್ಧಿಗೆ ಏನೆಲ್ಲಾ ಕ್ರಿಯಾಯೋಜನೆಗಳನ್ನು ತಯಾರಿಸಬೇಕು ಎಂಬುವುದನ್ನು ಗ್ರಾಮ ಸಭೆಗಳಲ್ಲಿ ಚರ್ಚಿಸಿ ಮಾಡುವಂತಹದ್ದು, ಆದರೆ, ಇಲ್ಲಿನ ಗ್ರಾಮಸಭೆಯಲ್ಲಿ ಸಾರ್ವಜನಿಕರ ಪ್ರಶ್ನೋತ್ತರಗಳಿಗೆ ಸರಿಯಾದ ಅವಕಾಶ ಕೊಡಲಿಲ್ಲ. ಅಧಿಕಾರಿಗಳು ಇಲಾಖೆ ಮಾಹಿತಿ ಕೊಡಲು ಜನರು ಇರಲಿಲ್ಲ. ಕೇವಲ ಶಾಸಕರ ಭಾಷಣಕ್ಕೆ ಮಾತ್ರ ಗ್ರಾಮಸಭೆ ಸೀಮಿತಗೊಂಡಿತ್ತು.

ಸಮಸ್ಯೆಗಳ ಜಾಡು: ಗ್ರಾಪಂ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ಚರಂಡಿ, ಬೀದಿದೀಪ ಸೇರಿದಂತೆ ಹಲವು ಮೂಲ ಸೌಕರ್ಯಗಳ ಜೊತೆಗೆ ಕುಂದಾಣ ಬೆಟ್ಟದ ಸರಕಾರಿ ಜಾಗದಲ್ಲಿ ಅಕ್ರಮ ಮನೆಗಳನ್ನು ಕಟ್ಟಿಕೊಂಡಿರುವುದು, ಕುಂದಾಣ ನಾಡಕಚೇರಿ ಪ್ರಾರಂಭಿಸದಿರುವುದು, ಎಂಎಸ್‌ಐಎಲ್ ಸುಮಾರು 3-4 ವರ್ಷಗಳಿಂದ ಗ್ರಾಪಂ ಅನುಮತಿ ಇಲ್ಲದೆ ಸ್ಥಳೀಯವಾಗಿ ನಡೆಯುತ್ತಿರುವುದು. ಗ್ರಾಮಸಭೆಗೆ ಗೈರಾದ ಅಧಿಕಾರಿಗಳು ಹೀಗೆ ಹಲವು ಸಮಸ್ಯೆಗಳನ್ನು ಒಳಗೊಂಡಂತೆ ಗ್ರಾಮಸ್ಥರು ಮತ್ತು ರೈತರು ಧ್ವನಿಯೆತ್ತಿದರು.

ಸಮಸ್ಯೆಗಳ ಪರಿಹಾರಕ್ಕೆ ಶಾಸಕರ ಉತ್ತರ: ಶಾಸಕ ಎಲ್.ಎನ್.ನಾರಾಯಣಸ್ವಾಮಿ ಮಾತನಾಡಿ, 298 ಹಳ್ಳಿ ಪುರಸಭಾ 46 ವಾರ್ಡುಗಳ ಪ್ರತಿ ಹಳ್ಳಿಯ ಜನರ ಸಮಸ್ಯೆಯನ್ನು ನೆನಪಿಟ್ಟುಕೊಳ್ಳಲು ಸಾಧ್ಯವಿಲ್ಲ. ಏನೇ ಸಮಸ್ಯೆಗಳು ಇದ್ದರೂ ನನ್ನೊಂದಿಗೆ ಮುಕ್ತವಾಗಿ ಚರ್ಚಿಸಿ, ಪ್ರತಿ ಗುರುವಾರ ಶಾಸಕರ ಕಚೇರಿಯಲ್ಲಿ ನಾನು ಸಿಗುತ್ತೇನೆ. ಲಿಖಿತ ರೂಪದಲ್ಲಿ ನನಗೆ ನೀಡಿದರೆ ಸಮಸ್ಯೆಯನ್ನು ಬಗೆಹರಿಸಲಾಗುತ್ತದೆ. ಕುಂದಾಣ ಗ್ರಾಮದಲ್ಲಿ ಎಂಎಸ್‌ಐಎಲ್ ಮೂಲಕ ಸಾರಾಯಿ ಅಂಗಡಿ ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ. ಇಲ್ಲಿನ ಗ್ರಾಪಂನವರು ಸಹ ಅನುಮತಿ ನೀಡಿಲ್ಲ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಸಾರಾಯಿ ನಿಷೇಧ ಮಾಡಲಾಗಿತ್ತು. ಜನಪ್ರತಿನಿಧಿಗಳ ಆಯ್ಕೆ ಮತ್ತು ಸರಕಾರ ರಚನೆ ನಿಮ್ಮ ಕೈಯಲ್ಲಿರುತ್ತದೆ. ಕುಮಾರಸ್ವಾಮಿ ಮತ್ತೇ ಮುಖ್ಯಮಂತ್ರಿಯಾದರೆ ಖಂಡಿತವಾಗಿಯೂ ಸಾರಾಯಿ ನಿಷೇಧದ ಬಗ್ಗೆ ಚರ್ಚೆ ನಡೆಸುತ್ತೇನೆ. ಅಧಿಕಾರಿಗಳು ಒಂದು ಕಡೆ ಇರುವುದಿಲ್ಲ. ಬದಲಾಗುತ್ತಿರುತ್ತಾರೆ. ನಾನು-ನೀವು ಬದಲಾದರೇ ಸಾಲದು, ಇಡೀ ವ್ಯವಸ್ಥೆಯ ಬದಲಾವಣೆಯಾಗಬೇಕು. ರಾಜ್ಯ ಸರಕಾರ ಆಯ್ಕೆ ಮಾಡುವ ಸಂದರ್ಭದಲ್ಲಿ ರೈತರ, ಜನರ ಪರ ಕಾಳಜಿ ತೋರುವ ವ್ಯಕ್ತಿಗಳನ್ನು ಗೆಲ್ಲಿಸಿಕೊಳ್ಳಬೇಕು. ೭೫ ವರ್ಷದ ಇತಿಹಾಸದಲ್ಲಿ ಬಡವರು ಬಡವರಾಗಿಯೇ ಇದ್ದಾರೆ. ಶ್ರೀಮಂತರು ಶ್ರೀಮಂತರಾಗುತ್ತಲೇ ಇದ್ದಾರೆ. ಕುಂದಾಣಕ್ಕೆ ಎಲ್ಲಾ ರೀತಿಯ ಸಮಸ್ಯೆಗಳಿಗೆ ಸ್ಪಂಧಿಸುತ್ತೇನೆ. ಈಗಾಗಲೇ 2ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಮಾಡಿಸಲಾಗಿದೆ. ಗ್ರಾಮಸಭೆಗೆ ಗೈರು ಹಾಗಿರುವ ಅಧಿಕಾರಿಗಳ ಪಟ್ಟಿ ಪಡೆದು ಶಿಸ್ತುಕ್ರಮಕ್ಕೆ ಸೂಚಿಸಲಾಗುತ್ತದೆ. ಈಗಾಗಲೇ ಕುಂದಾಣ ನಾಡಕಚೇರಿಗೆ ಸಂಬಂಧಿಸಿದಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನಾನು ನಿಮ್ಮೊಂದಿಗೆ ಒಬ್ಬನಾಗಿದ್ದೇನೆ. ಪ್ರತಿ ಗ್ರಾಮದಲ್ಲಿ ಒಬ್ಬೊಬ್ಬ ಶಾಸಕ ಇರುವಂತಾಗಬೇಕು ಆಗ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಅಪೂರ್ಣಗೊಂಡ ಗ್ರಾಮಸಭೆ: ಬೆಳಿಗ್ಗೆ 11ಗಂಟೆಗೆ ಪ್ರಾರಂಭವಾದ ಗ್ರಾಮಸಭೆ ಶಾಸಕರು ಬಂದು ಉದ್ಘಾಟಿಸುವವರೆಗೂ ಆರಂಭಗೊಂಡಿರಲಿಲ್ಲ. ಶಾಸಕರು ಬಂದು ಭಾಷಣ ಮಾಡಿ, ಬೇರೆಕಡೆ ತೆರಳಿದಾಗ ಇಡೀ ಅಧಿಕಾರಿವರ್ಗ, ಜನಪ್ರತಿನಿಧಿಗಳು ವೇದಿಕೆಯಿಂದ ಇಳಿದರು. ರೈತರು, ಸಾರ್ವಜನಿಕರು ಅಧಿಕಾರಿಗಳ ನಿರ್ಲಕ್ಷ್ಯತನ ಮತ್ತು ಜನಪ್ರತಿನಿಧಿಗಳ ನಡೆದುಕೊಂಡ ರೀತಿಗೆ ಚೀಮಾರಿ ಹಾಕಿ ಗ್ರಾಮ ಸಭೆಯನ್ನು ಭಹಿಷ್ಕರಿಸಿ ಇಡೀ ವೇದಿಕೆ ಮುಂಭಾಗದಲ್ಲಿ ಜನರು ಇಲ್ಲದೆ ಬಿಕೋ ಎನ್ನುವ ಮೂಲಕ ಗ್ರಾಮಸಭೆ ಅಪೂರ್ಣಗೊಂಡಿತು.

______________

ಗ್ರಾಪಂ ಮುಂಭಾಗದಲ್ಲಿ ಹಾರಾಡದ ರಾಷ್ಟ್ರಧ್ವಜ

ಕುಂದಾಣ ಗ್ರಾಪಂ ಮುಂಭಾಗದಲ್ಲಿ ಗ್ರಾಮಸಭೆ ಇದ್ದರೂ ಸಹ ಮೇಲಾಧಿಕಾರಿಗಳು, ಶಾಸಕರು ಹಾಗೂ ಜನಪ್ರತಿನಿಧಿಗಳು ಬರುತ್ತಾರೆಂಬುವುದನ್ನು ಅರಿತಿದ್ದರೂ ಹಾಗೂ ಪ್ರತಿ ಗ್ರಾಪಂಯಲ್ಲಿ ರಾಷ್ಟ್ರಧ್ವಜ ಹಾರಿಸಬೇಕೆಂದು ಆದೇಶವಿದ್ದರೂ ಸಹ ಕುಂದಾಣ ಗ್ರಾಪಂನಲ್ಲಿ ರಾಷ್ಟ್ರಧ್ವಜವನ್ನು ಹಾರಿಸದೆ ಅಪಮಾನವನ್ನು ಮಾಡಿರುತ್ತಾರೆ. ಪಿಡಿಒ, ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರುಗಳು ಇದನ್ನು ಗಮನಿಸದಿರುವುದು ಬೇಸರದ ಸಂಗತಿಯಾಗಿದೆ. ಪಿಡಿಒಗೆ ಈ ಬಗ್ಗೆ ಪ್ರಶ್ನಿಸಿದರೆ ಹರಕೆ ಉತ್ತರ ನೀಡಿ ಜಾರಿಕೊಂಡರು.

______________

ಈ ವೇಳೆಯಲ್ಲಿ ಗ್ರಾಪಂ ಅಧ್ಯಕ್ಷ ವಿ.ನಾರಾಯಣಸ್ವಾಮಿ, ಉಪಾಧ್ಯಕ್ಷೆ ವೀಣಾರಾಣಿ.ಎ, ನೋಡಲ್ ಅಧಿಕಾರಿ ಎಂ.ಪುಷ್ಪಾ, ಎಇಇ ಎನ್.ಸೋಮಶೇಖರ್, ಗ್ರಾಪಂ ಸದಸ್ಯರು, ಪಿಡಿಒ ಚೈತ್ರಾ.ಸಿ, ಕಾರ್ಯದರ್ಶಿ ಅರುಣಾಗೋಪಿ, ಸಿಬ್ಬಂದಿ ಹಾಗೂ ವಿವಿಧ 9 ಇಲಾಖೆಯ ಅಧಿಕಾರಿಗಳು, ಗ್ರಾಮಸ್ಥರು ಇದ್ದರು.

 

ಮಂಜು ಬೂದಿಗೆರೆ

9113813926

Leave a Reply

Your email address will not be published. Required fields are marked *

You cannot copy content of this page

error: Content is protected !!