ದೊಡ್ಡಬಳ್ಳಾಪುರ  ನಗರಸಭೆ  ಚುನಾವಣೆ  ಸನಿಹ..ಪೈಪೋಟಿಗೆ ಬಿದ್ದು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಮತ್ತು  ಬಿಜೆಪಿ 

ದೊಡ್ಡಬಳ್ಳಾಪುರ  ನಗರಸಭೆ  ಚುನಾವಣೆ  ಸನಿಹ..ಪೈಪೋಟಿಗೆ ಬಿದ್ದು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಮತ್ತು  ಬಿಜೆಪಿ

 

ಶಿಷ್ಟಾಚಾರ ಪಾಲಸದಿದ್ದಕ್ಕೆ ಬಿಜೆಪಿ..ಅನುದಾನ ತಡೆಹಿಡಿದಿದ್ದಕ್ಕೆ ಕಾಂಗ್ರೆಸ್  ಕಾರ್ಯಕರ್ತರ  ಪ್ರತಿಭಟನೆ.

 

ದೊಡ್ಡಬಳ್ಳಾಪುರ  :  ಕೆಲವೇ ದಿನಗಳಲ್ಲಿ  ನಗರಸಭೆ ಚುನಾವಣೆ  ಘೋಷಣೆಯಾಗಲಿದ್ದು, ರಾಜಕೀಯ  ಕೆಸರೆರಚಾಟ  ಈಗಾಗಲೇ  ಶುರುವಾಗಿದೆ, ಏಕಕಾಲದಲ್ಲಿ  ನಗರಸಭೆಯ  ಎರಡು ಬದಿಯಲ್ಲಿ ಕಾಂಗ್ರೆಸ್  ಮತ್ತು ಬಿಜೆಪಿ  ಕಾರ್ಯಕರ್ತರು ಪ್ರತಿಭಟನೆ  ನಡೆಸುವ ಮೂಲಕ  ಪ್ರತಿಭಟನೆಯಲ್ಲೂ ಪೈಪೋಟಿ  ನಡೆಸಿದರು.

 

 

ದೊಡ್ಡಬಳ್ಳಾಪುರ  ನಗರಸಭೆ  ಚುನಾವಣೆಯ ದಿನಾಂಕ   ಕೆಲವೇ ದಿನಗಳಲ್ಲಿ  ಘೋಷಣೆಯಾಗಲಿದೆ,  ನಗರಸಭೆಯ ಆಡಳಿತ  ಹಿಡಿಯಲು  ಕಣ್ಣಿಟ್ಟಿರು  ಕಾಂಗ್ರೆಸ್  ಮತ್ತು ಬಿಜೆಪಿ  ಪಕ್ಷಗಳು ರಾಜಕೀಯ  ಕೆಸರೆರಚಾಟ  ಆರಂಭಿಸಿದ್ದಾರೆ, ದೊಡ್ಡಬಳ್ಳಾಪುರ  ಶಾಸಕರಾದ ಟಿ.ವೆಂಕಟರಮಣಯ್ಯ  ನಗರ ವ್ಯಾಪ್ತಿಯಲ್ಲಿ  ಕಾಮಾಗಾರಿಗಳ ಶಂಕುಸ್ಥಾಪನೆ  ಆರಂಭಿಸಿದ್ದಾರೆ, ಏಕಪಕ್ಷೀಯವಾಗಿ ಕೇವಲ  ಕಾಂಗ್ರೆಸ್ ಕಾರ್ಯಕರ್ತರ ಸಮ್ಮುಖದಲ್ಲಿ  ಕಾಮಾಗಾರಿ ಶಂಕುಸ್ಥಾಪನೆ  ಆರಂಭಿಸಿದ್ದಾರೆ. ಕಾರ್ಯಕ್ರಮದ  ಶಿಷ್ಟಾಚಾರವನ್ನು  ಗಾಳಿಗೆ ಜಿಲ್ಲಾ ಉಸ್ತುವಾರಿ  ಸಚಿವ ಆರ್ ಅಶೋಕ್,  ಸಂಸದ ಬಚ್ಚೇಗೌಡ ಮತ್ತು  ಬಿಜೆಪಿಯ ವಿಧಾನ ಪರಿಷತ್  ಸದಸ್ಯರಿಗೂ ಆಹ್ವಾನ  ಕೊಡದೆ ಕೇವಲ ಕಾಂಗ್ರೆಸ್  ಕಾರ್ಯಕರ್ತರ ಸಮ್ಮುಖದಲ್ಲಿ  ಕಾಮಾಗಾರಿಗಳ ಶಂಕುಸ್ಥಾಪನೆ ಮಾಡುತ್ತಿದ್ದಾರೆ, ಕೊರೊನಾ ಸಮಯದಲ್ಲಿ ಮನೆಯಲ್ಲಿದ್ದ  ಶಾಸಕರು ನಗರಸಭೆಯ ಚುನಾವಣೆ  ಸನಿಹ ಇರುವ  ಕಾರಣಕ್ಕೆ  ನಾಗರೀಕರ  ಕೊಂದು ಕೊರತೆಯ ಸಭೆ ಮತ್ತು ಕಾಮಾಗಾರಿಗಳ ಶಂಕುಸ್ಥಾಪನೆ  ಮಾಡುತ್ತಿದ್ದಾರೆ ಎನ್ನುವುದು  ಬಿಜೆಪಿ ಕಾರ್ಯಕರ್ತರ ವಾದ, ಶಾಸಕರ ವರ್ತನೆ ಖಂಡಿಸಿ ಬಿಜೆಪಿ  ಕಾರ್ಯಕರ್ತರು ನಗರಸಭೆಯ ಮುಂದೆ  ಪ್ರತಿಭಟನೆ  ನಡೆಸಿದರು.

 

ಬಿಜೆಪಿ  ಕಾರ್ಯಕರ್ತರು ಪ್ರತಿಭಟನೆಗೆ ಪೈಪೋಟಿ  ನೀಡಲು ಕಾಂಗ್ರೆಸ್  ಕಾರ್ಯಕರ್ತರು ಸಹ ನಗರಸಭೆಯ ಮತ್ತೊಂದು  ಬದಿಯಲ್ಲಿ  ಪ್ರತಿಭಟನೆ  ನಡೆಸಿದರು. ದೊಡ್ಡಬಳ್ಳಾಪುರ  ವಿಧಾನಸಭಾಗೆ ಬಿಡುಗಡೆಯಾದ ಅನುದಾನ ತಡೆಹಿಯುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ  ಬಿಜೆಪಿ  ಪಕ್ಷ ಕಾರಣವಾಗಿದೆ  ಎಂದು ಕಾಂಗ್ರೆಸ್  ಕಾರ್ಯಕರ್ತರು ಪ್ರತಿಭಟನೆ ನಡೆಷಿದ್ಧರು, ಪ್ರತಿಭಟನನಿರತ ಕಾರ್ಯಕರ್ತರನ್ನ ಉದ್ದೇಶಿಸಿ  ಮಾತನಾಡಿದ  ಶಾಸಕ ಟಿ ವೆಂಕಟರಮಣಯ್ಯ  ಕಾರ್ಯಕ್ರಮದ ಶಿಷ್ಟಾಚಾರ ಮಾಡೋದು ಅಧಿಕಾರಿಗಳು  ಇದರಲ್ಲಿ ನನ್ನ  ಪಾತ್ರವೇನು  ಇಲ್ಲ, ಕೊರೊನಾ ಹಿನ್ನಲೆ  ಸಿಮೀತ ಜನರ ನಡುವೆ ಕಾರ್ಯಕ್ರಮ  ಮಾಡುವುದರಿಂದ ಕೆಲವೇ ಜನರ ಸಮ್ಮುಖದಲ್ಲಿದಲ್ಲಿ ಕಾಮಾಗಾರಿಗಳ ಶಂಕುಸ್ಥಾಪನೆ  ಮಾಡಲಾಗಿದೆ, ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಬರದೆಂದು  ಶಾಸಕರು ಬಿಜೆಪಿ ಕಾರ್ಯಕ್ರಮದಲ್ಲಿ ಮನವಿ ಮಾಡಿದರು.

 

ಗುರುಮೂರ್ತಿ ಬೂದಿಗೆರೆ

Leave a Reply

Your email address will not be published. Required fields are marked *

You cannot copy content of this page

error: Content is protected !!