ಗುತ್ತಿಗೆದಾರರ ಸಮಸ್ಯೆಗಳ ಪರಿಹಾರಕ್ಕೆ ಜನವರಿ 29 ರಂದು ಸಭೆ: ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಕೃಷ್ಣಾರೆಡ್ಡಿ

 

*ಗುತ್ತಿಗೆದಾರರ ಸಮಸ್ಯೆಗಳ ಪರಿಹಾರಕ್ಕೆ ಜನವರಿ 29 ರಂದು ಸಭೆ: ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಕೃಷ್ಣಾರೆಡ್ಡಿ*

 

 

*

-ಕರ್ನಾಟಕ ರಾಜ್ಯ ಗುತ್ತಿಗೆದಾರ ಸಂಘದಿಂದ ನೂತನ ಕಾರ್ಯದರ್ಶಿ ಅವರಿಗೆ ಸನ್ಮಾನ*

 

*ಬೆಂಗಳೂರು ಜನವರಿ 24*: ಕರ್ನಾಟಕ ರಾಜ್ಯದ ಗುತ್ತಿಗೆದಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವ ಉದ್ದೇಶದಿಂದ ಜನವರಿ 29 ರಂದು ಸಭೆಯನ್ನು ಆಯೋಜಿಸಿರುವುದಾಗಿ *ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಡಾ ಕೃಷ್ಣಾರೆಡ್ಡಿ* ಹೇಳಿದರು.

 

ಬೆಂಗಳೂರು ನಗರದಲ್ಲಿ ಕರ್ನಾಟಕ ಗುತ್ತಿಗೆದಾರರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸಾರ್ವಜನಿಕರಿಗೆ ಅನುಕೂಲವಾಗುವಂತಹ ಕೆಲಸಗಳನ್ನು ಅನುಷ್ಠಾನಗೊಳಿಸಲು ಇವರಿಬ್ಬರ ಸೇವೆಯೂ ಅತ್ಯಗತ್ಯ. ಸರಕಾರಿ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ಬದಲಾವಣೆ ತರುವುದು ಸುಲಭವಲ್ಲ. ಅದಕ್ಕೆ ಬೇಕಾದ ಸೂಕ್ತ ದಾಖಲೆಗಳನ್ನು ಒದಗಿಸಬೇಕು. ಈ ನಿಟ್ಟಿನಲ್ಲಿ ಗುತ್ತಿಗೆದಾರರ ಸಂಘ ಕಾರ್ಯಪ್ರವೃತ್ತರಾಗಬೇಕಾಗಿದೆ. ಎಸ್‌ ಆರ್‌ ರೇಟುಗಳು ಹೆಚ್ಚು ಮಾಡಿ ಎನ್ನುವುದು ಬಹುತೇಕು ಗುತ್ತಿಗೆದಾರರ ಸಂಘಟನೆಗಳ ಬೇಡಿಕೆಯಾಗಿದೆ. ಅಲ್ಲದೆ, ಸ್ಟಾರ್‌ ರೇಟ್‌ಗಳನ್ನಾಗಿ ಸೀಮೆಂಟು ಹಾಗೂ ಸ್ಟೀಲ್‌ ದರಗಳನ್ನು ಪರಿಗಣಿಸುವಂತೆಯೂ ಮನವಿ ಮಾಡುತ್ತಿದ್ದಾರೆ. ಕೇವಲ ಮನವಿಪತ್ರದಿಂದ ಇದನ್ನು ಸಾಧಿಸಲು ಸಾಧ್ಯವಿಲ್ಲ ಎಂದರು.

 

ಈ ಬೇಡಿಕೆಗಳು ಸುಲಭವಾಗಿ ಈಡೇರಬೇಕಾದರೆ ಅದಕ್ಕೆ ಬೇಕಾಗಿರುವಂತಹ ವರದಿಗಳನ್ನು ನಿಮ್ಮ ಕಡೆಯಿಂದ ನೀಡುವುದು ಸೂಕ್ತ. ಖಾಸಗಿ ಸಮಾಲೋಚನಾಕಾರರ ಸೇವೆಯನ್ನು ಪಡೆದುಕೊಂಡು ಎಸ್‌ ಆರ್‌ ರೇಟುಗಳು ಹಾಗೂ ವರ್ಕ್‌ ಸ್ಟಡಿ ಮಾಡಿಸಿ ಅದನ್ನು ದಾಖಲೆಯಾಗಿ ಇಲಾಖೆಗೆ ಸಲ್ಲಿಸುವುದು ಸೂಕ್ತವಾಗಿದೆ. ಇದರಿಂದ ರಾಜ್ಯ ಸರಕಾರ ತನ್ನ ನಿಯಮಾವಳಿಗಳಲ್ಲಿ ಬದಲಾವಣೆಯ ಬಗ್ಗೆ ಚಿಂತನೆ ನಡೆಸಲು ಅನುಕೂಲವಾಗಲಿದೆ ಎಂದು ಹೇಳಿದರು.

 

ಗುತ್ತಿಗೆದಾರರ ಬೆನೋವಲೆಂಟ್‌ ಫಂಡ್‌ ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ಈಗಾಗಲೇ ರಾಜ್ಯ ಗುತ್ತಿಗೆದಾರರ ಸಂಘ ರಾಜ್ಯ ಸರಕಾರದ ಗಮನ ಸೆಳೆದಿದೆ. ಈ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವ ಉದ್ದೇಶದಿಂದ ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳೊಂದಿಗೆ ಜನವರಿ 29 ರಂದು ಸಭೆಯನ್ನು ಆಯೋಜಿಸಿದ್ದೇವೆ ಎಂದು ಹೇಳಿದರು.

 

*ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು, ಸಂಘದ ಪ್ರಧಾನ ಕಾರ್ಯದರ್ಶಿ ಜಿ ಎಂ ರವೀಂದ್ರ, ಉಪಾಧ್ಯಕ್ಷರಾದ ಅಂಬಿಕಾಪತಿ, ದಿನೇಶ್‌, ಖಚಾಂಚಿ ನಟರಾಜ್, ಜಂಟಿ ಕಾರ್ಯದರ್ಶಿ ರಮೇಶ್‌ ಅವರು ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳ ಪದಾಧಿಕಾರಿಗಳ ಕಡೆಯಿಂದ ಸನ್ಮಾನ ನಡೆಸಲಾಯಿತು*.

Leave a Reply

Your email address will not be published. Required fields are marked *

You cannot copy content of this page

error: Content is protected !!