ನಾನು ಚಡ್ಡಿ ಹಾಕಿಕೊಳ್ಳುವಾಗ ಪೆಟ್ರೋಲ್, ಇತರೆ ಬೆಲೆ ಕಮ್ಮಿ ಇತ್ತು, ಇವಾಗ ಪ್ಯಾಂಟ್ ಹಾಕಿಕೊಳ್ಳುತ್ತಿದ್ದೇನೆ ಎಲ್ಲವು ಜಾಸ್ತಿ ಆಗಿದೆ: ಸಂಸದ ಜಿಎಂ ಸಿದ್ದೇಶ್ವರ್.
ದಾವಣಗೆರೆ:- ನಾನು ಚಣ್ಣಾ ಹಾಕಿಕೊಳ್ಳುವಾಗ ಪೆಟ್ರೋಲ್ ಹಾಗೂ ಬೇರೆ ವಸ್ತುಗಳ ಬೆಲೆ ಕಮ್ಮಿ ಇತ್ತು, ಅದ್ರೇ ಇದೀಗ ಪ್ಯಾಂಟ್ ಹಾಕಿಕೊಳ್ಳುತ್ತಿದ್ದೇನೆ ಎಲ್ಲಾ ವಸ್ತುಗಳ ಬೆಲೆ ಜಾಸ್ತಿ ಆಗಿದೆ, ಅದು ವಾತಾವರಣ ಹೇಗಿರುತ್ತೇ ಹಾಗೆ ಹೋಗ್ತಾ ಇರುತ್ತೇ ಎಂದು ಬೆಲೆ ಏರಿಕೆ ಕುರಿತು ಸಂಸದ ಸಿದ್ದೇಶ್ವರ್ ಮತ್ತೇ ಉಡಾಫೆ ಉತ್ತರ ನೀಡಿದರು. ದಾವಣಗೆರೆಯಲ್ಲಿ ಮಾತನಾಡಿದ ಅವರು ದಿನ ಕಳೆದಂತೆ ಎಲ್ಲ ವಸ್ತುಗಳ ಬೆಲೆ ಹೆಚ್ಚಾಗುತ್ತೆ ಎಂದು ಉಡಾಫೆ ಉತ್ತರ ನೀಡಿದ ಅವರು ಟ್ಯಾಕ್ಸ್ ಜಾಸ್ತಿ ಆಗಿದೆ ಎನ್ನುವ ಪ್ರಶ್ನೆಗೆ ಕೈ ಮುಗಿದು ಹೊರಟ ಹೋದರು.
ಬಂದ್ ಕೈ ಬಿಟ್ಟರೆ ಸೂಕ್ತ…
ಎಲ್ಲವು ರೈತರ ಅನುಕೂಲವಾಗುವ ಕಾಯ್ದೆಗಳನ್ನು ಕೇಂದ್ರ ಸರ್ಕಾರ ನೀಡಿದ್ದು, ರೈತರು ಯಾರು ಅ ಕಾಯ್ದೆಯನ್ನು ವಿರೋಧಿಸುತ್ತಿಲ್ಲ, ಸಂಘಟನೆಯವರು ಮಾತ್ರ ವಿರೋಧಿಸುತ್ತಿದ್ದಾರೆ ಎಂದರು. ಇನ್ನು ಕೊರೊನಾ ನಿಂದ ಜನ ಬೇಸತ್ತಿದ್ದಾರೆ, ಹೋರಾಟಗಾರರು ಬಂದ್ ಕೈ ಬಿಟ್ಟರೆ ಸೂಕ್ತ ಎಂದು ಸಲಹೆ ನೀಡಿದರು.