ಕುಪ್ಪೂರು ಗದ್ದುಗೆ ಮಠದ ಮುಂದಿನ ಉತ್ತರಾಧಿಕಾರಿಯಾಗಿ ತೇಜಸ್ ಹೆಸರು ಅಧಿಕೃತ ಘೋಷಣೆ.

ಕುಪ್ಪೂರು ಗದ್ದುಗೆ ಮಠದ ಮುಂದಿನ ಉತ್ತರಾಧಿಕಾರಿಯಾಗಿ ತೇಜಸ್ ಹೆಸರು ಅಧಿಕೃತ ಘೋಷಣೆ.

ತುಮಕೂರು.

ಲಿಂಗೈಕ್ಯ ಕುಪ್ಪೂರು ಶ್ರೀ ಶಿವಾಚಾರ್ಯ ಶ್ರೀಗಳು ಲಿಂಗೈಕ್ಯರಾಗಿದ್ದು ಇಂದು ಅವರು ಪಂಚಭೂತಗಳಲ್ಲಿ ಲೀನರಾದರು. ಇದೇ ಸಂದರ್ಭದಲ್ಲಿ ವಿವಿಧ ಮಠಗಳ ಮಠಾಧೀಶರು ಹಾಗೂ ಗಣ್ಯರ ಸಮ್ಮುಖದಲ್ಲಿ ಅಂತಿಮ ವಿಧಿ ವಿಧಾನಗಳು ನಡೆದವು.

 

 

ಇದೇ ಸಂದರ್ಭದಲ್ಲಿ ಕುಪ್ಪೂರು ಮಠಕ್ಕೆ ಉತ್ತರಾಧಿಕಾರಿಯಾಗಿ ತೇಜಸ್ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.

 

ಕುಪ್ಪೂರು ಗದ್ದಿಗೆ ಮಠದ ಯತೀಶ್ವರ ಶಿವಾಚಾರ್ಯ ಶ್ರೀಗಳ ಲಿಂಗೈಕ್ಯ ಹಿನ್ನೆಲೆಯಲ್ಲಿ ಕುಪ್ಪೂರು ಗದ್ದುಗೆ ಮಠದ ಉತ್ತರಾಧಿಕಾರಿ ಹೆಸರು ಘೋಷಣೆ ಮಾಡಲಾಗಿದ್ದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕುಪ್ಪೂರು ಮಠದ ಉತ್ತರಾಧಿಕಾರಿಯಾಗಿ ಯಡಿಯೂರಿನ ರೇಣುಕಾ ಶಿವಾಚಾರ್ಯ ಶ್ರೀಗಳು ತೇಜಸ್ ಹೆಸರು ಘೋಷಿಸಿದ್ದಾರೆ.

ವಿವಿಧ ಮಠಾಧೀಶರ ಸಮ್ಮುಖದಲ್ಲಿ ಯಡಿಯೂರಿನ ರೇಣುಕಾ ಶಿವಾಚಾರ್ಯ ಶ್ರೀಗಳು ಕುಪ್ಪೂರು ಮಠದ ಉತ್ತರಾಧಿಕಾರಿಯಾಗಿ ಯತೀಶ್ವರ ಶಿವಾಚಾರ್ಯ ಶ್ರೀಗಳ ಸಹೋದರನ ಮಗ ತೇಜಸ್ ಹೆಸರನ್ನು ಘೋಷಿಸಿದ್ದಾರೆ.

 

ಕುಪ್ಪೂರು ಮಠದ ಮುಂದಿನ ಉತ್ತರಾಧಿಕಾರಿಯಾಗಿ ತೇಜಸ್ ಹೆಸರು ಘೋಷಣೆಯಾಗುತ್ತಿದ್ದಂತೆ ತೇಜಸ್ ಪೋಷಕರು ಮಗನನ್ನ ತಬ್ಬಿ ಕಣ್ಣೀರು ಹಾಕಿದ್ದಾರೆ ತಾಯಿ ಕಾಂತಾಮಣಿ ತಂದೆ ಮಹೇಶ್ ಮತ್ತು ಕುಟುಂಬಸ್ಥರು ಯತೀಶ್ವರ ಶಿವಾಚಾರ್ಯ ಶ್ರೀ ರವರನ್ನು ನೆನೆದು ಕಣ್ಣೀರು ಹಾಕಿದ್ದಾರೆ.

ಕುಪ್ಪೂರು ಗದ್ದುಗೆ ಮಠದ ಮುಂದಿನ ಉತ್ತರಾಧಿಕಾರಿ ತೇಜಸ್ ಅವರು ಎಂಟನೇ ತರಗತಿಯಲ್ಲಿ ಓದುತ್ತಿದ್ದಾರೆ ಹೆಚ್ಚಿನ ಅಧ್ಯಯನಕ್ಕೆ ಸುತ್ತೂರಿಗೆ ಕಳುಹಿಸಲು ಕುಟುಂಬ ಹಾಗೂ ಸ್ವಾಮೀಜಿಗಳು ನಿರ್ಧಾರ ಮಾಡಿದ್ದಾರೆ ಕುಪ್ಪೂರು ಗದ್ದುಗೆ ಮಠ ವಂಶಪಾರಂಪರ್ಯವಾಗಿ ಉತ್ತರಾಧಿಕಾರಿಗಳ ನೇಮಕ ಮಾಡಿಕೊಂಡು ಬಂದಿರುವ ಹಿನ್ನೆಲೆಯಲ್ಲಿ ಲಿಂಗೈಕ್ಯರಾದ ಯತೀಶ್ವರ ಶಿವಾಚಾರ್ಯ ಶ್ರೀಗಳ ಸಹೋದರನ ಮಗನನ್ನು ನೇಮಿಸಲಾಗಿದೆ.

 

ಉತ್ತರಾಧಿಕಾರಿ ಘೋಷಣೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಚಿಕ್ಕನಾಯಕನಹಳ್ಳಿ ಶಾಸಕರಾದ ಮಾಧುಸ್ವಾಮಿ ಸೇರಿದಂತೆ ವಿವಿಧ ಮಠಾಧೀಶರು ಹಾಜರಿದ್ದರು.

 

ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವ ಮಾಧುಸ್ವಾಮಿ ರವರು ಲಿಂಗೈಕ್ಯ ಶ್ರೀಗಳ ಇಚ್ಛೆಯಂತೆ ಅವರ ಪೂರ್ವಾಶ್ರಮದ ಸಹೋದರ ಮಗನನ್ನು ಉತ್ತರಾಧಿಕಾರಿ ಎಂದು ಘೋಷಣೆ ಮಾಡಲಾಗಿದೆ ಗುರುಹಿರಿಯರು ಅವರ ಕುಟುಂಬದವರು ನೆನ್ನೆ ರಾತ್ರಿ ಚರ್ಚೆಮಾಡಿ ತೇಜಸ್ ರವರನ್ನು ಒಪ್ಪಿಸಿ ಉತ್ತರಾಧಿಕಾರಿಯನ್ನಾಗಿ ಮಾಡಿದ್ದಾರೆ ಅಂತ್ಯಸಂಸ್ಕಾರದ ವಿಧಿವಿಧಾನಗಳು ನಡೆಯಲು ಉತ್ತರಾಧಿಕಾರಿಯ ಅವಶ್ಯಕತೆ ಇದೆ ಹಾಗಾಗಿ ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಿದ್ದೇವೆ ಮುಂದೆ ಶಾಸ್ತ್ರಬದ್ಧವಾಗಿ ಕಾರ್ಯಕ್ರಮ ಮಾಡಿ ಪೀಠಾರೋಹಣ ಮಾಡಿಸಲಾಗುವುದು ಎಂದು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ

Leave a Reply

Your email address will not be published. Required fields are marked *

You cannot copy content of this page

error: Content is protected !!