ಓಂ ನಮಃ ಶಿವಾಯ ಆಲಾರಮ್ ನಲ್ಲಿ ಇತ್ತು ಲಾಡ್ಜ್ ರಹಸ್ಯ.

ಓಂ ನಮಃ ಶಿವಾಯ ಆಲಾರಮ್ ನಲ್ಲಿ ಇತ್ತು ಲಾಡ್ಜ್ ರಹಸ್ಯ.

 

ತುಮಕೂರಿನ ಕ್ಯಾತ್ಸಂದ್ರದ ಬಳಿಯ ನಂದಿ ಲಾಡ್ಜಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆದ ಬೆನ್ನಲ್ಲೇ ಒಂದೊಂದಾಗಿ ಮಾಂಸ ದಂಡೆಯ ಕರಾಳ ಮುಖಗಳು ಆಚೆ ಬರುತ್ತಿದೆ.

 

ತುಮಕೂರಿನಲ್ಲಿ ಸೋಮವಾರ ಸಂಜೆ 6.30 ರ ವೇಳೆಯಲ್ಲಿ ಮೈಸೂರಿನ ಒಡನಾಡಿ ಸಂಸ್ಥೆ , ಸ್ಥಳೀಯ ಪೊಲೀಸರು ಹಾಗೂ ಮಹಿಳಾ ರಕ್ಷಣಾ ಘಟಕದ ಅಧಿಕಾರಿಗಳ ನೇತೃತ್ವದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ತುಮಕೂರಿನ ಕ್ಯಾತ್ಸಂದ್ರದ ಬಳಿಯ ನಂದಿ ಲಾಡ್ಜ್ ನಲ್ಲಿ ಅಕ್ರಮ ವೇಶ್ಯಾವಾಟಿಕೆ ನಡೆಯುತ್ತಿರುವ ಖಚಿತ ಮಾಹಿತಿ ಮೇಲೆ ದಾಳಿ ನಡೆಸಲಾಗಿತ್ತು.

 

ಸೆಪ್ಟೆಂಬರ್ 9ರಂದು ವಿಜಯ್ ಭಾರತ ಡಿಜಿಟಲ್ ಮೀಡಿಯಾ ತುಮಕೂರಿನ ಕ್ಯಾತ್ಸಂದ್ರ ಬಳಿಯ ಫ್ಲೈವರ್ ಮೇಲೆ ಕಿಲೋಮೀಟರುಗಟ್ಟಲೆ ರಾಶಿರಾಶಿ ಕಾಂಡೋಂಗಳು ಬಿದ್ದ ಬಗ್ಗೆ ವರದಿ ಪ್ರಸಾರಮಾಡಿತ್ತು ಇದರ ಬೆನ್ನುಹತ್ತಿದ್ದ ಮೈಸೂರಿನ ಒಡನಾಡಿ ಸಂಸ್ಥೆಯ ಮುಖ್ಯಸ್ಥರು ತುಮಕೂರಿನಲ್ಲಿ ಹತ್ತು ದಿನಗಳಿಂದ ಕಾರ್ಯಾಚರಣೆ ನಡೆಸಿ ಕೊನೆಗೆ ಪೊಲೀಸರ ಸಹಕಾರದೊಂದಿಗೆ ಹೈಟೆಕ್ ವೇಶ್ಯಾವಾಟಿಕೆ ಜಾಲವನ್ನು ಹಿಡಿಯುವಲ್ಲಿ ಸಫಲರಾಗಿದ್ದಾರೆ.

 

ಲಾಡ್ಜ್ ನಲ್ಲಿ ಕಂಡುಬಂದ ರಕ್ತ ತಪಾಸಣಾ ವರದಿಗಳು

ವಿಜಯ ಭಾರತ ಡಿಜಿಟಲ್ ಮೀಡಿಯಾ ಸುದ್ದಿ ಮಾಡುವ ಸಂದರ್ಭದಲ್ಲಿ ಸಾಕಷ್ಟು ಅನುಮಾನಗಳು ವ್ಯಕ್ತವಾಗಿತ್ತು ಅದಕ್ಕೆ ಪುಷ್ಟಿ ನೀಡುವಂತೆ ಕೂಗಳತೆಯ ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇದ್ದ ನಂದಿ ಲಾಡ್ಜ್ ನಲ್ಲಿ ಇಂತಹದೊಂದು ಕರಾಳ ದಂದೆಯ ಅನಾವರಣವಾಗಿದೆ .

 

ಇನ್ನು ಮೈಸೂರಿನ ಒಡನಾಡಿಯ ಸಂಸ್ಥೆಯ ಮುಖ್ಯಸ್ಥರಾದ ಸ್ಟ್ಯಾನ್ಲಿ ಹಾಗೂ ಪರಶುರಾಮ್ ರವರ ನೇತೃತ್ವದಲ್ಲಿ ಒಡನಾಡಿ ಸಂಸ್ಥೆಯ ಸುಮಾರು 12ಕ್ಕೂ ಹೆಚ್ಚು ಪದಾಧಿಕಾರಿಗಳು ತುಮಕೂರಿನಲ್ಲಿ ತನ್ನ ಕಾರ್ಯಾಚರಣೆಯನ್ನು ಆರಂಭಿಸಿದರು.

 

 

ಮೈಸೂರಿನ ಒಡನಾಡಿ ಸ್ವಯಂಸೇವಾ ಸಂಸ್ಥೆ ಕಳೆದ ಮೂವತ್ತು ವರ್ಷಗಳಿಂದ ಮಹಿಳೆಯರ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು ರಾಜ್ಯದ್ಯಂತ ಇದುವರೆಗೂ ಸಾಕಷ್ಟು ಅಕ್ರಮ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿ ಮಹಿಳೆಯರ ರಕ್ಷಣೆಯಲ್ಲಿ ಮುಂಚೂಣಿಯಲ್ಲಿದೆ ಇದರ ಸಂಬಂಧಿಸಿದಂತೆ ತುಮಕೂರಿನಲ್ಲಿ ನಡೆಯುತಿದ್ದ ಅಕ್ರಮ ವೇಶ್ಯಾವಾಟಿಕೆ ಅಡ್ಡೆ ಸುಳಿವು ಸಂಸ್ಥೆಗೆ ಸಿಕ್ಕಿತ್ತು.

 

ಆನ್ಲೈನ್ ಮೂಲಕ ವ್ಯವಹಾರ ತುಮಕೂರಿನ ನಂದಿ ಲಾಡ್ಜಿನ ಮಾಂಸ ದಂಧೆ ಕೋರರು ಆನ್ಲೈನ್ ಮೂಲಕ ತಮ್ಮ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವುದು ಕಂಡುಬಂದಿದೆ ಇದಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆಗಿಳಿದ ಮೈಸೂರಿನ ಒಡನಾಡಿ ಸಂಸ್ಥೆಗೆ ಸಿಕ್ಕಿದ್ದು ಆನ್ ಲೈನ್ ಕಾಂಟಾಕ್ಟ್ ಗಳು ಇದನ್ನ ಬೆನ್ನುಹತ್ತಿದ ಸಂಸ್ತೆಗೆ ಸಿಕ್ಕಿದ ತಲೆಹಿಡುಕ ನೊಬ್ಬ ತುಮಕೂರಿನ ನಾನಾ ಭಾಗದಲ್ಲಿ ಓಡಾಡಿಸಿ ಕೊನೆಗೆ ನಂದಿ ಲಾಡ್ಜಿನ ಬಾಗಿಲು ತೋರಿಸಿದ.

 

ಇದರ ಸುಳಿವು ಸಿಕ್ಕಕೂಡಲೇ ಒಡನಾಡಿ ಸಂಸ್ಥೆ ಮಹಿಳಾ ರಕ್ಷಣಾ ಘಟಕ ಹಾಗೂ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಹಕಾರದೊಂದಿಗೆ ಉತ್ತಮ ತಂಡವನ್ನು ರಚಿಸಿ ಕಾರ್ಯಾಚರಣೆಗೆ ಇಳಿದರು.

 

ಕಾರ್ಯಾಚರಣೆಗೆ ಹಿಲಿಯುತ್ತಿದ್ದಂತೆ ಮಾಂಸ ದಂಧೆಯಲ್ಲಿ ತೊಡಗಿದ್ದ ವ್ಯಕ್ತಿಗಳು ತಪ್ಪಿಸಿಕೊಳ್ಳುವ ಸಲುವಾಗಿ ಲಾಡ್ಜ್ನ ಮೊದಲನೇ ಮಹಡಿಯಿಂದ ಮೂರನೇ ಮಹಡಿಗೆ ಸಿಗ್ನಲ್ ಒಂದು ತಲುಪಿತ್ತು ……. ಆ ಸಿಗ್ನಲ್ ಬೇರೆ ಯಾವುದೂ ಅಲ್ಲ ಓಂ ನಮಃ ಶಿವಾಯ ಎನ್ನುವ ಅಲಾರಂ ಬಡಿದುಕೊಳ್ಳುತ್ತದೆ ಕೂಡಲೇ ದಂದೆಯಲ್ಲಿ ತೊಡಗಿದ್ದ ಪಿಶಾಚಿಗಳು ತಪ್ಪಿಸಿಕೊಳ್ಳುವ ಸಲುವಾಗಿ ಮೂರನೇ ಮಹಡಿಗೆ ಬಂದು ಅಡಗುತಾಣಗಳ ಬಚ್ಚಿಟ್ಟುಕೊಂಡಿದ್ದು ಒಡನಾಡಿ ಸಂಸ್ಥಗೆ ಕಂಡುಬಂದಿತ್ತು ಅದನ್ನು ಅರಿತು ಮೂರನೇ ಮಹಡಿಯ ಕೊನೆಗೆ ಎಂಟ್ರಿ ಕೊಟ್ಟಾಗ ಪುಟ್ಟ ಡ್ರೆಸ್ಸಿಂಗ್ ಟೇಬಲ್ ಹಿಂಭಾಗದಲ್ಲಿ ಪುಟ್ಟ ಕಿಂಡಿಯನ್ನು ಮಾಡಿ ಒಳಗೆ ರಹಸ್ಯ ಕೋಣೆಯೊಂದನ್ನು ನಿರ್ಮಿಸಿ ಅದರಲ್ಲಿ ಅಡಗಿಕೊಂಡಿದ್ದ ಯುವತಿಯರು ಹಾಗೂ ಕೆಲ ಯುವಕರನ್ನು ಹಿಡಿದುಕೊಳ್ಳುವ ಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಇದರ ಮೂಲಕ ಒಡನಾಡಿ ಸಂಸ್ಥೆ ಯಶಸ್ವಿಯಾಗಿ ರೋಚಕ ಕಾರ್ಯಾಚರಣೆಗೆ ಅಂಕುಶ ಹಾಕಿದೆ.

 

 

ತುಮಕೂರು ಬೆಂಗಳೂರಿಗೆ ಪರ್ಯಾಯ ಕೇಂದ್ರವಾಗಿತ್ತಾ……?

 

ಕ್ಯಾಸಂದ್ರ ಬಳಿಯ ನಂದಿ ಲಾಡ್ಜಿನಲ್ಲಿ ಅಕ್ರಮವಾಗಿ ಪಡೆಯುತ್ತಿದ್ದ ಮಾಂಸದಂಧೆಗೆ ಬಯಲಿಗೆ ಬಂದ ಬೆನ್ನಲ್ಲೇ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿವೆ. ವ್ಯವಸ್ಥಿತವಾಗಿ ಕಾಣದ ಕೈಗಳ ಪೋಷಣೆ ಯಿಂದಲೇ ಇಂತಹದೊಂದು ಅಕ್ರಮ ಚಟುವಟಿಕೆ ನಡೆಯುತ್ತಿರುವ ಅನುಮಾನ ಮೂಡುತ್ತಿದೆ. ಕೂಗಳತೆಯ ದೂರದಲ್ಲಿ ಪೊಲೀಸ್ ಠಾಣೆ ಇದ್ದರೂ ಕೂಡ ಯಾರಿಗೂ ಅನುಮಾನ ಬರದಂತೆ ಸಾಕಷ್ಟು ಗೌಪ್ಯತೆಗಳನ್ನು ಕಾಪಾಡಿಕೊಂಡಿದ್ದರು. ತುಮಕೂರು ಬೆಂಗಳೂರು ಮಂಗಳೂರು ಹಾಗೂ ಮೈಸೂರು ಭಾಗಕ್ಕೆ ಅಕ್ರಮ ದಂಧೆಗೆ ಪರ್ಯಾಯ ಕೇಂದ್ರವಾಗಿತ್ತಾ ಅನ್ನುವ ಅನುಮಾನಗಳು ಸಾಕಷ್ಟು ಕಾಡತೊಡಗಿವೆ.

 

 

 

 

 

 

ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ವಿಜಯ ಭಾರತ ಡಿಜಿಟಲ್ ಮೀಡಿಯಾ ಅಭಿನಂದಿಸಿದ ಒಡನಾಡಿ ಸಂಸ್ಥೆ.

 

ವಿಜಯ್ ಭಾರತ ಸೆಪ್ಟೆಂಬರ್ 9ರಂದು ವರದಿ ಮಾಡಿದ ಸುದ್ದಿ ಸಂಬಂಧಿಸಿದಂತೆ ಬೆನ್ನುಹತ್ತಿದ ಒಡನಾಡಿ ಸಂಸ್ಥೆ ಅದೊಂದು ಅದ್ಭುತ ಸುದ್ದಿ ನಮಗೆ ಈ ಕಾರ್ಯಾಚರಣೆಗೆ ಹಿಡಿಯಲು ಮೂಲ ಪ್ರೇರಣೆಯಾಗಿದೆ ಹಾಗೂ ಈ ಕಾರ್ಯಾಚರಣೆ ಕೊನೆ ಹಂತಕ್ಕೆ ಬಂದಾಗ ಸಹಕಾರ ನೀಡಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ತಂಡ ಈ ಎರಡು ಪ್ರಮುಖ ಸಹಕಾರಗಳು ನಮಗೆ ಇಂದು ಇಂತಹದೊಂದು ಮಾಂಸ ದಂದೆಯ ಕರಾಳಮುಖ ಹಿಡಿಯಲು ಸಾಧ್ಯವಾಯಿತು ಹಾಗಾಗಿ ಇದಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದ ಮೈಸೂರಿನ ಒಡನಾಡಿ ಸಂಸ್ಥೆಯ ಮುಖ್ಯಸ್ಥರಾದ ಸ್ಟ್ಯಾನ್ಲೆ .

Leave a Reply

Your email address will not be published. Required fields are marked *

You cannot copy content of this page

error: Content is protected !!