ಭಾರತ ಲಸಿಕೆ ನೀಡಿಕೆಯಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದನ್ನು ನೋಡಿ “ರಾಜಕೀಯ ಪಕ್ಷಕ್ಕೆ ಜ್ವರ ಬಂದಿದೆ”:ಪ್ರಧಾನಿ ಮೋದಿ

ಭಾರತ ಲಸಿಕೆ ನೀಡಿಕೆಯಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದನ್ನು ನೋಡಿ “ರಾಜಕೀಯ ಪಕ್ಷಕ್ಕೆ ಜ್ವರ ಬಂದಿದೆ”:ಪ್ರಧಾನಿ ಮೋದಿ

ಪಣಜಿ: ನನ್ನ 71 ನೇ ಹುಟ್ಟುಹಬ್ಬದ ದಿನದಂದು ದೇಶದಲ್ಲಿ 2.50 ಕೋಟಿ ಕೋವಿಡ್ -19 ಲಸಿಕೆ ಡೋಸ್‌ಗಳನ್ನು ನೀಡಲಾಗಿದ್ದು, ಇದು ನನಗೆ ಮರೆಯಲಾಗದ ಹಾಗೂ ಭಾವನಾತ್ಮಕ ಕ್ಷಣ. ಭಾರತವು ಲಸಿಕೆ ನೀಡಿಕೆಯಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದನ್ನು ನೋಡಿ “ರಾಜಕೀಯ ಪಕ್ಷಕ್ಕೆ ಜ್ವರ ಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

 

“ನಿಮ್ಮ ಪ್ರಯತ್ನಗಳಿಂದ, ಭಾರತವು ಒಂದೇ ದಿನದಲ್ಲಿ 2.5 ಕೋಟಿಗೂ ಹೆಚ್ಚು ಲಸಿಕೆಗಳನ್ನು ನೀಡಿ ವಿಶ್ವ ದಾಖಲೆಯನ್ನು ಸೃಷ್ಟಿಸಿದೆ, ಈ ಸಾಧನೆಯನ್ನು ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳಿಗೂ ಕೂಡ ಸಾಧಿಸಲು ಸಾಧ್ಯವಾಗಲಿಲ್ಲ” ಎಂದು ಗೋವಾದಲ್ಲಿ ಆರೋಗ್ಯ ಕಾರ್ಯಕರ್ತರು ಹಾಗೂ ಫಲಾನುಭವಿಗಳೊಂದಿಗೆ ವೀಡಿಯೊ ಲಿಂಕ್ ಮೂಲಕ ನಡೆಸಿದ್ದ ಸಂವಾದದಲ್ಲಿ ಪ್ರಧಾನಿ ಮೋದಿ ಹೇಳಿದರು.

 

“ಈ ಪ್ರಯತ್ನಕ್ಕಾಗಿ ದೇಶದ ಎಲ್ಲ ವೈದ್ಯರು, ವೈದ್ಯಕೀಯ ಸಿಬ್ಬಂದಿ ಹಾಗೂ ಆಡಳಿತದಲ್ಲಿರುವ ಜನರನ್ನು ಪ್ರಶಂಸಿಸುತ್ತೇನೆ ಜನ್ಮದಿನಗಳು ಬರುತ್ತವೆ ,ಹೋಗುತ್ತವೆ. ಆದರೆ ನಾನು ಅಂತಹ ವಿಷಯಗಳಿಂದ ದೂರವಾಗಿದ್ದೇನೆ. ಆದರೆ ನಿನ್ನೆ ನನಗೆ ಭಾವನಾತ್ಮಕ ಕ್ಷಣವಾಗಿತ್ತು. ಇದು ನನಗೆ ಮರೆಯಲಾಗದ ಸಂದರ್ಭವಾಗಿತ್ತು” ಎಂದು ಪ್ರಧಾನಿ ಮೋದಿ ಹೇಳಿದರು.

ಯಾವುದೇ ಪಕ್ಷವನ್ನು ಹೆಸರಿಸದ ಮೋದಿಯವರು “ನನ್ನ ಹುಟ್ಟುಹಬ್ಬದಂದು 2.5 ಕೋಟಿಗೂ ಹೆಚ್ಚು ಲಸಿಕೆ ಹಾಕಿದ ನಂತರ “ರಾಜಕೀಯ ಪಕ್ಷ”ಕ್ಕೆ ಜ್ವರ ಬರಲಾರಂಭಿಸಿದೆ. ಜ್ವರವನ್ನು ಲಸಿಕೆಗಳ ಅಡ್ಡ ಪರಿಣಾಮವೆಂದು ಜನರು ಮಾತನಾಡುತ್ತಾರೆ. ಆದರೆ ನನ್ನ ಹುಟ್ಟುಹಬ್ಬದಂದು 2.5 ಕೋಟಿ ಲಸಿಕೆಗಳನ್ನು ನೀಡಿದ ನಂತರ ರಾಜಕೀಯ ಪಕ್ಷಗಳಿಗೆ ಜ್ವರ ಬಂತು ” ಎಂದು ಅವರು ಪ್ರಧಾನಿ ವ್ಯಂಗ್ಯವಾಡಿದರು.

Leave a Reply

Your email address will not be published. Required fields are marked *

You cannot copy content of this page

error: Content is protected !!