ರೈತರನ್ನು ಎದುರು ಹಾಕಿಕೊಂಡು ರಾಜಕಾರಣ ಅಸಾಧ್ಯ: ದೇವೇಗೌಡ

ರೈತರನ್ನು ಎದುರು ಹಾಕಿಕೊಂಡು ರಾಜಕಾರಣ ಅಸಾಧ್ಯ: ದೇವೇಗೌಡ

ಹಾಸನ ತಾಲೂಕು ಕಟ್ಟಾಯ ಹೋಬಳಿ ಗೊರೂರು ಸಮೀಪದ ಉಡುವಾರೆ ಗ್ರಾಮದಲ್ಲಿ ಶುಕ್ರವಾರ ನಡೆದ ದೇವಾಲಯಗಳ ಉದ್ಘಾಟನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ದಿಲ್ಲಿಯ ಗಡಿಯಲ್ಲಿ ಪಂಜಾಬ್‌ ಮತ್ತು ಹರಿಯಾಣದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ.

 

ಹೋರಾಟ ನಿರತ ರೈತರಿಗೆ ದೇಶದ ವಿವಿಧ ರಾಜ್ಯಗಳ ರೈತರು, ರೈತ ಸಂಘಟನೆಗಳ ಬೆಂಬಲವೂ ಇದೆ. ಹಾಗಾಗಿಯೇ ಹಲವು ತಿಂಗಳು ಕಳೆದರೂ ರೈತರ ಪ್ರತಿಭಟನೆ ನಿಂತಿಲ್ಲ ಎಂದರು.

ದೇಶದಲ್ಲಿ ರೈತರು, ವಿದ್ಯಾರ್ಥಿಗಳನ್ನು ಎದುರು ಹಾಕಿಕೊಂಡು ರಾಜಕಾರಣ ಮಾಡು ವುದು ಕಷ್ಟ ಎಂದು ಪ್ರಧಾನಿ ಮೋದಿಗೂ ಹೇಳಿದ್ದೆ. ರೈತರೊಂದಿಗೆ ಚರ್ಚೆ ಮಾಡಿ, ನಾನೂ ಪಾಲ್ಗೊಳ್ಳುತ್ತೇನೆ. ರೈತರ ಪ್ರತಿಭಟನೆ ಹೆಚ್ಚು ದಿನ ಮುಂದುವರಿ ಯಲು ಅವಕಾಶ ಕೊಡಬೇಡಿ ಎಂದು ಸಲಹೆ ನೀಡಿದ್ದೆ. ಆದರೆ ಪ್ರಧಾನಿಯವರು ಈವರೆಗೂ ಸ್ಪಂದಿಸಿಲ್ಲ ಎಂದು ವಿಷಾದಿಸಿದರು.

 

ದೇಶದಲ್ಲಿ ಬಡತನ:

 

ಶ್ರೀಮಂತಿಕೆಯ ನಡುವಿನ ಅಂತರ ಹೆಚ್ಚುತ್ತಲೇ ಹೋಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಬಡವರ ಸಂಖ್ಯೆ ಹೆಚ್ಚಿದ್ದರೆ, ಸಿರಿವಂತರ ಸಂಖ್ಯೆ ಕಡಿಮೆ ಇದೆ. ಆದರೆ ನಗರ ಪ್ರದೇಶಗಳು ಶ್ರೀಮಂತರಿಗೆ ಸೀಮಿತವಾಗಿವೆ ಎಂಬ ಪರಿಸ್ಥಿತಿ ಇದೆ ಎಂದರು.

 

ರೈತರು ಮತ್ತು ಗ್ರಾಮೀಣ ಪ್ರದೇಶದ ಜನರ ಪರವಾದ ನಿಲುವು ಹೊಂದಿರುವ ಜೆಡಿಎಸ್‌ ಪ್ರಾದೇಶಿಕ ಪಕ್ಷ. ಈ ಪಕ್ಷದಿಂದ ನಮಗೆ ಅಡಚಣೆ ಇದೆ ಎಂದು ಎರಡು ರಾಷ್ಟ್ರೀಯ ಪಕ್ಷಗಳು ಭಾವಿಸಿವೆ. ಜೆಡಿಎಸ್‌ ಈ ರಾಜ್ಯದಲ್ಲಿ ಇರಬಾರದು ಎಂಬ ಮನೋಭಾವನೆಯಿಂದ ಎರಡು ರಾಷ್ಟ್ರೀಯ ಪಕ್ಷಗಳೂ ರಾಜಕಾರಣ ಮಾಡಿಕೊಂಡು ಬರುತ್ತಿವೆ. ಆದರೆ ಈ ರಾಜ್ಯದ ರೈತರು ಜೆಡಿಎಸ್‌ ಅನ್ನು ಬಿಡುವುದಿಲ್ಲ ಎಂಬ ನಂಬಿಕೆ ಇದೆ. ಪಕ್ಷ ಸಂಘಟನೆಗಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪ್ರವಾಸ ಹಮ್ಮಿಕೊಳ್ಳುತ್ತೇನೆ ಎಂದು ಹೇಳಿದರು.

 

Leave a Reply

Your email address will not be published. Required fields are marked *

You cannot copy content of this page

error: Content is protected !!