ಮನುಷ್ಯನಿಗೆ ನಗುವೇ ಬಹುದೊಡ್ಡ ಆಸ್ತಿ ಅದರ ಬಳಕೆ ಅತ್ಯಮೂಲ್ಯ- ನಟ ಮೈಸೂರು ರಮಾನಂದ.
ತುಮಕೂರು
ಕಲ್ಪತರು ನಾಡು ಕಲೆಯ ತವರೂರು. ಗುಬ್ಬಿವೀರಣ್ಣ ,ಹಿರಿಯ ನಟ ನರಸಿಂಹರಾಜು ಸೇರಿದಂತೆ ಹಲವು ಮಹನೀಯರ ಕೊಡುಗೆ ಅಪಾರವಾದದ್ದು. ರಂಗಭೂಮಿ ಕಲಾವಿದರಿಗೆ ತುಮಕೂರು ತವರೂರು ಎಂದು ಹಿರಿಯ ನಟ ರಮಾನಂದ ಅವರು ತಿಳಿಸಿದ್ದಾರೆ.
ತುಮಕೂರು ನಗರದ ಕಲ್ಪತರು ಅಭಿನಯ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳಿಗೆ ಅಭಿನಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಗುಬ್ಬಿ ವೀರಣ್ಣ ಅವರಂತಹ ಮಹಾನ್ ಕಲಾವಿದರನ್ನು ಕೊಡುಗೆಯಾಗಿ ನೀಡಿರುವ ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಕಲಾವಿದರು ಬೆಳೆಯಬೇಕು ಬೆಳೆಸಬೇಕು ಎಂದು ಆಶಿಸಿದರು. ಪ್ರತಿಯೊಬ್ಬ ಕಲಾವಿದರಿಗೂ ಭಾಷೆಯ ಮೇಲೆ ಹಿಡಿತವಿರಬೇಕು ಶ್ರದ್ಧೆ ಧೈರ್ಯ ಬಹುಮುಖ್ಯ. ಹಾಗೂ ಅವುಗಳ ಬಳಕೆ ಬಹು ಮುಖ್ಯ. ಪ್ರತಿಯೊಬ್ಬ ಮನುಷ್ಯನಿಗೂ ನಗು ಅತ್ಯಮೂಲ್ಯ ವಾಗಿರುತ್ತದೆ. ನಗು ಎಂಬುದು ಪ್ರತಿ ಮನುಷ್ಯನ ಮನಸ್ಸಿನ ಮನೆಯಾಗಿದ್ದು ಸಹನೆ,ತಾಳ್ಮೆಯಿಂದ ಅದನ್ನ ಪೋಷಿಸಬೇಕು. ಅಪಾರಜ್ಞಾನ ಜ್ಞಾನ ವಿಧವನ್ನು ಮಾತ್ರ ಅದ್ಭುತ ನಟನಾಗುತ್ತಾನೆ ಎಂದರು.
ಕಾರ್ಯಕ್ರಮದಲ್ಲಿ ಕಲ್ಪತರು ಅಭಿನಯ ಶಾಲೆಯ ಸಂಸ್ಥಾಪಕರಾದ ಆನಂದ್ ರವರು ಮಾತನಾಡಿ ಕಲಾಕ್ಷೇತ್ರ ಮಹತ್ವದ ಕ್ಷೇತ್ರವಾಗಿದ್ದು ಕಲಾವಿದರನ್ನು ರೂಪಿಸುವುದು ಸುಲಭದ ಮಾತಲ್ಲ ಕಲಿಕಾರ್ಥಿಗಳಿಗೆ ಕಲಿಕೆಯನ್ನು ಶ್ರದ್ಧೆಯನ್ನು ಮೈಗೂಡಿಸಿಕೊಂಡಿದ್ದರೆ ಮಾತ್ರ ಉತ್ತಮ ಕಲಾವಿದರ ಆಗುತ್ತಾರೆ ಎಂದರು.ಇನ್ನು ಅಭಿನಯ ಶಾಲೆಯಿಂದ ಅನೇಕ ಕಲಾವಿದರು ಸಿನಿಮಾ ಧಾರವಾಹಿ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಇನ್ನೂ ಹೆಚ್ಚು ಕಲಾವಿದರನ್ನು ಗುರುತಿಸಿ ಮುಖ್ಯವಾಹಿನಿಗೆ ತಂದು ಅವರ ಕಲೆಯನ್ನು ಜಗತ್ತಿಗೆ ತೋರಿಸಬೇಕು ಎಂಬುದು ನಮ್ಮ ಸಂಸ್ಥೆಯ ಆಶಯವಾಗಿದ್ದು ಇದುವರೆಗೂ ನಮ್ಮ ಸಂಸ್ಥೆಯಲ್ಲಿ 150ಕ್ಕೂ ಹೆಚ್ಚು ಶಿಬಿರಾರ್ಥಿಗಳು ಪಾಲ್ಗೊಂಡು ಕಾರ್ಯಗಾರಗಳನ್ನು ಮುಗಿಸಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಕಲಾವಿದರನ್ನು ಮುಖ್ಯವಾಹಿನಿಗೆ ತರಲಿದ್ದೇವೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಆನಂದರವರು ತಿಳಿಸಿದ್ದಾರೆ.ಇನ್ನು ಅಭಿನಯ ಕಾರ್ಯಗಾರದಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ವಿವಿಧ ಅಭಿನಯ ಹೇಳಿ ಕೊಡಲಾಯಿತು. ಸಮಾರಂಭದಲ್ಲಿ ನಿರ್ದೇಶಕ ರಾಜ್, ಕಲಾವಿದ ಓಂಕಾರಮೂರ್ತಿ, ಅನುಪ್ ,ಸುದೀಪ್, ನಂದಿನಿ ,ಪುಟ್ಟ ತಿಮ್ಮಯ್ಯ ಸೇರಿದಂತೆ ಇತರರು ಭಾಗವಹಿಸಿದ್ದರು.