ಗಡಿಯಲ್ಲಿನ ಯೋಧರಿಗಾಗಿ ಮುಂಬೈಯಿಂದ ಕಳುಹಿಸಿಕೊಡಲಾಗಿದೆ ಗಣೇಶಮೂರ್ತಿ
ನವದೆಹಲಿ: ದೇಶವ್ಯಾಪಿಯಾಗಿ ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಆಚರಿಸಲ್ಪಡುವ ಗಣೇಶ ಹಬ್ಬ ಆಗಮಿಸುತ್ತಿದೆ. ಈ ಬಾರಿ ದೇಶದ ಗಡಿಯಲ್ಲೂ ಗಣೇಶೋತ್ಸವ ಸಮಾರಂಭ ಜರುಗಲಿದೆ. ಗಡಿಯಲ್ಲಿ ನಿಂತು ದೇಶದ ರಕ್ಷಣೆ ಮಾಡುತ್ತಿರುವ ವೀರ ಯೋಧರಿಗೆ ಮುಂಬೈಯಿಂದ ಸುಂದರವಾದ ಗಣೇಶನ ಮೂರ್ತಿಯನ್ನು ಕಳುಹಿಸಿಕೊಡಲಾಗಿದೆ.
ಅತ್ಯಂತ ವಿಭಿನ್ನ ರೀತಿಯಲ್ಲಿ ಗಣೇಶನ ಮೂರ್ತಿಯನ್ನು ರಚಿಸಲಾಗಿದ್ದು ಸುತ್ತಲೂ ಅಪ್ಘಾನಿಸ್ಥಾನ ಮತ್ತು ಭಾರತದಲ್ಲಿನ ವಿದ್ಯಾಮಾನಗಳನ್ನು ಒಳಗೊಂಡ ಗಡಿ ಭೂ ದೃಶ್ಯವನ್ನು ಬಿಂಬಿಸಲಾಗಿದೆ.
ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿ ಕೆಲವೊಂದು ಮಿತಿಗಳ ನಡುವೆ ಗಣೇಶೋತ್ಸವ ಸಮಾರಂಭ ನಡೆಯುತ್ತಿದೆ. ಅತ್ಯಂತ ವಿಜೃಂಭಣೆಯಿಂದ ಗಣೇಶೋತ್ಸವ ನಡೆಯುವ ಮಹಾರಾಷ್ಟ್ರದಲ್ಲಿ ಹೆಚ್ಚಿನ ಭದ್ರತೆಯನ್ನು ನಿಯೋಜಿಸಲಾಗಿದ್ದು, ಮಾಸ್ಕ್ ಧರಿಸದೆ ಬೀದಿಗಿಳಿಯುವ ಜನರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಸಜ್ಜಾಗಿದ್ದಾರೆ.