ಶಾಲೆಗಳನ್ನು ತೆರೆದ ರಾಜ್ಯಗಳ ಮಕ್ಕಳಲ್ಲಿ ಹೆಚ್ಚುತ್ತಿದೆ ಕೊರೋನಾ ವೈರಸ್
ನವದೆಹಲಿ : ಕೊರೊನಾ ವೈರಸ್ ಮೂರನೇ ಅಲೆಯ ಭೀತಿಯ ನಡುವೆ ಹಲವಾರು ರಾಜ್ಯಗಳಲ್ಲಿ ಶಾಲೆಗಳನ್ನು ಆರಂಭ ಮಾಡಲಾಗಿದೆ.
ಇದೀಗ ಶಾಲೆಗಳನ್ನು ತೆರಯುತ್ತಿದ್ದಂತೆ ಹಲವಾರು ರಾಜ್ಯಗಳಲ್ಲಿ ಮಕ್ಕಳಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿದೆ ಎಂದು ವರದಿಯಾಗಿದೆ.
ಗುಜರಾತ್, ಪಂಜಾಬ್, ಬಿಹಾರ, ಮಧ್ಯಪ್ರದೇಶ, ಛತ್ತೀಸ್‌ಗಢ ಹಾಗೂ ಉತ್ತರಾಖಂಡದಲ್ಲಿ ಹೆಚ್ಚಾಗಿ ಮಕ್ಕಳಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಕಾಣಿಸಿಕೊಂಡಿದೆ.
ಜಾರ್ಖಂಡ್ ಹಾಗೂ ಛಂಡೀಗಢದಲ್ಲಿ ಮಕ್ಕಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಕೊರೋನಾ ವೈರಸ್ ದಾಖಲಾಗಿದೆ.
ಬಿಹಾರ, ಮಧ್ಯ ಪ್ರದೇಶ, ಗುಜರಾತ್, ಛತ್ತೀಸ್‌ಗಢ ಮಕ್ಕಳಲ್ಲಿ ಪಾಸಿಟಿವಿಟಿ ಪ್ರಮಾಣವು ಶೇಕಡ 2 ರಿಂದ 3 ರ ನಡುವೆ ಇದೆ. ಗುಜರಾತ್‌ನಲ್ಲಿ ಜುಲೈ 26 ರಿಂದ ಶಾಲೆಗಳನ್ನು ತೆರಯಲಾಗಿದೆ.
ಛಂಡೀಗಢ ಹಾಗೂ ಮಧ್ಯಪ್ರದೇಶದಲ್ಲಿ ಆಗಸ್ಟ್ ಮೊದಲ ವಾರದಲ್ಲಿ , ಬಿಹಾರದಲ್ಲಿ ಆಗಸ್ಟ್ 16 ರಿಂದ, ಉತ್ತರಾಖಂಡದಲ್ಲಿ ಆಗಸ್ಟ್ 2 ರಂದು ಶಾಲೆಗಳನ್ನು ತೆರೆಯಲಾಗಿದೆ.