ಮೈಸೂರು ಅತ್ಯಾಚಾರ ಪ್ರಕರಣದ ತನಿಖಾ ವಿಧಾನಕ್ಕೆ ಆಕ್ಷೇಪ
ಮೈಸೂರು: ಪ್ರಕರಣವನ್ನು ಪೊಲೀಸರು ನಿರ್ವಹಿಸಿದ ರೀತಿಗೆ ಆಕ್ಷೇಪ ವ್ಯಕ್ತವಾಗಿದೆ. ದೆಹಲಿ ಪ್ರಕರಣದಷ್ಟು ಗಂಭೀರವಾಗಿ ನಿರ್ವಹಿಸಿಲ್ಲ ಎಂಬ ಅಸಮಾಧಾನ ಕೇಳಿಬಂದಿದೆ.
ತನಿಖೆ ಪೂರ್ಣಗೊಳ್ಳುವ ಮುನ್ನವೇ ಆರೋಪಿಗಳ ಭಾವಚಿತ್ರ, ಮತ್ತು ಹೆಸರುಗಳು ಬಹಿರಂಗಗೊಂಡಿರುವುದು ವರ್ಮಾ ಆಯೋಗದ ವರದಿಗೆ ವಿರುದ್ಧ’ ಎಂದು ವಕೀಲರಾದ ಮಂಜುಳಾ ಮಾನಸ ಆಕ್ಷೇಪಿಸಿದ್ದಾರೆ.
ಬೆಂಗಳೂರಿನ ವಕೀಲ ಕೆ.ವಿ.ಧನಂಜಯ್ ಅವರೂ ಟ್ವಿಟರ್ನಲ್ಲಿ ಆಕ್ಷೇಪಿಸಿದ್ದಾರೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ಸೂದ್ ಅವರು ಸುದ್ದಿಗೋಷ್ಠಿಯಲ್ಲಿ ಆರೋಪಿಗಳ ಹೆಸರು, ಚಿತ್ರ ಬಹಿರಂಗಪಡಿಸಲು ನಿರಾಕರಿಸಿದ್ದರು. ಸಂತ್ರಸ್ತೆಯ ಇರುವಿಕೆ, ಪ್ರಯಾಣದ ವಿವರಗಳನ್ನು ಗೋಪ್ಯವಾಗಿಡಲು ಮನವಿ ಮಾಡಿದ್ದರೂ ವಿವರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗಗೊಂಡಿವೆ.