ಅಸ್ಸಾಂ: ಶಂಕಿತ ಉಗ್ರರ ದಾಳಿಯಲ್ಲಿ ಐವರು ಮೃತ್ಯು
ಗುವಾಹಟಿ: ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯಲ್ಲಿ ಡಿಮಾಸಾ ನ್ಯಾಷನಲ್ ಲಿಬರೇಶನ್ ಆರ್ಮಿ (ಡಿಎನ್ಎಲ್ಎ) ಸೇರಿದವರು ಎನ್ನಲಾದ ಉಗ್ರರ ಗುಂಪು ಟ್ರಕ್‌ಗಳ ಮೇಲೆ ಗುರುವಾರ ರಾತ್ರಿ ದಾಳಿ ಮಾಡಿ ಬೆಂಕಿ ಹಚ್ಚಿ ಐವರನ್ನು ಕೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ನಾವು ಐದು ಸುಟ್ಟ ಸ್ಥಿತಿಯಲ್ಲಿದ್ದ ಮೃತದೇಹಗಳನ್ನು ಮರಳಿ ಪಡೆದುಕೊಂಡಿದ್ದೇವೆ . ಎಲ್ಲರೂ ಟ್ರಕ್ ಚಾಲಕರು ಹಾಗೂ ಕೆಲಸಗಾರರಾದ್ದಾರೆ. ಗುರುತಿಸುವಿಕೆ ಇನ್ನೂ ಮುಂದುವರಿದಿದೆ ”ಎಂದು ದಿಮಾ ಹಸಾವೊ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಜಯಂತ್ ಸಿಂಗ್ ಹೇಳಿದರು.
ಗುಪ್ತಚರ ಮಾಹಿತಿ ಪ್ರಕಾರ, ಉಗ್ರ ಸಂಘಟನೆ ಡಿಮಾಸಾ ನ್ಯಾಷನಲ್ ಲಿಬರೇಶನ್ ಆರ್ಮಿ ದಾಳಿಯ ಹಿಂದೆ ಇದೆ ಎಂದು ಅವರು ಹೇಳಿದ್ದಾರೆ.
2019 ರಲ್ಲಿ ರೂಪುಗೊಂಡ ಡಿಮಾಸಾ ನ್ಯಾಷನಲ್ ಲಿಬರೇಶನ್ ಆರ್ಮಿ ಅಸ್ಸಾಂನ ಬ್ರಹ್ಮಪುತ್ರ ಕಣಿವೆಯ ಆದಿವಾಸಿಗಳಲ್ಲಿ ಒಬ್ಬರಾಗಿರುವ ದಿಮಾಸಾ ಬುಡಕಟ್ಟಿನ “ಸಾರ್ವಭೌಮ ಹಾಗೂ ಸ್ವತಂತ್ರ ರಾಷ್ಟ್ರ” ವನ್ನು ರೂಪಿಸಲು ಪ್ರಯತ್ನಿಸುತ್ತದೆ. ದಿಮಾಸಗಳು ಪ್ರಸ್ತುತ ಅಸ್ಸಾಂನ ದಿಮಾ ಹಸಾವೊ, ಕಾರ್ಬಿ ಆಂಗ್ಲಾಂಗ್, ಕ್ಯಾಚಾರ್ ಹಾಗೂ ನಾಗಾಂವ್ ಜಿಲ್ಲೆಗಳಲ್ಲಿ ಹಾಗೂ ನಾಗಾಲ್ಯಾಂಡ್‌ನ ಕೆಲವು ಭಾಗಗಳಲ್ಲಿ ವಾಸಿಸುತ್ತಿದ್ದಾರೆ.