ಪವಿತ್ರ ಸೋದರ ಸಂಬಂಧದ ಸಂಕೇತ ರಕ್ಷಾಬಂಧನ

ಪವಿತ್ರ ಸೋದರ ಸಂಬಂಧದ ಸಂಕೇತ ರಕ್ಷಾಬಂಧನ

ಭಾರತ ಮೂಲತಃ ಬಹುಸಂಸ್ಕೃತಿಯ ದೇಶ. ಅದರಲ್ಲೂ ಹಬ್ಬಗಳಿಗಂತೂ ಅತ್ಯಂತ ಮಹತ್ವವಿದೆ. ಪ್ರತಿಯೊಂದು ಹಬ್ಬವೂ ಸಹ ತನ್ನದೇ ಆದ ಮಹತ್ವ ಮತ್ರು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದ್ದು, ಅದರ ಮೂಲಕ ದೇಶದ ಸಂಸ್ಕೃತಿಯನ್ನು ಉದಾತ್ತೀಕರಿಸುವ ನಿರಂತರ ಪ್ರಯತ್ನ ಮಾಡುತ್ತಿವೆ‌.

ವಿಶ್ವ ಬ್ರಾತೃತ್ವವನ್ನು ಜಗತ್ತಿಗೆಚಸಾರಿ ಹೇಳುತ್ತಿರುವ ಭಾರತ ದೇಶದಲ್ಲಿ ರಕ್ಷ ಬಂಧನ ತನ್ನದೇ ಆದ ಅತ್ಯಂತ ಮಹತ್ವಪೂರ್ಣ ಪೌರಾಣಿಕ ಮತ್ತು ಸಮಕಾಲೀನ ಇತಿಹಾಸವನ್ನು ಹೊಂದಿದೆ. ಅಂದು ಅಣ್ಣ ತಮ್ಮಂದಿರಿಗೆ ಅಕ್ಕ ತಂಗಿಯರು ರಕ್ಷಾ ಬಂಧನ ಕಟ್ಟಿ ನಮ್ಮ ರಕ್ಷಣೆಯನ್ನು ಮಾಡಬೇಕೆಂದು ಹಾಗೆಯೇ ಅಣ್ಣ ತಮ್ಮಂದಿರು ಅಕ್ಕ ತಂಗಿಯರ ರಕ್ಷಣೆ ತಮ್ಮ ಜವಾಬ್ದಾರಿಯೆಂದು ಸಂಕಲ್ಪಿಸುವ ಗುರುತರವಾದ ದಿನ.

 

ಈ ಹಿನ್ನೆಲೆಯಲ್ಲಿ ನಗರದ ಬೆಳಗುಂಬದ ನಿವಾಸಿ ಉದಯ್ ಕುಮಾರ್ ಎಂಬುವರ ಮನೆಯಲ್ಲಿಯೂ ಸಹ ಪವಿತ್ರ ರಕ್ಷಾಬಂಧನ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಅವರ ಮನೆಯ ಕು. ಸಂಧ್ಯಾಶ್ರೀ ಎಂಬ ಪುಟ್ಟ ಪೋರಿ ತನ್ನ ತಮ್ಮಂದಿರಾದ ಹರ್ಷವರ್ಧನ್ ಹಾಗೂ ಯೋಗವರ್ಧನ್ ಎಂಬುವವರಿಗೆ ಸಾಂಪ್ರದಾಯಿಕವಾಗಿ ಆರತಿ ಎತ್ತಿ, ಹಣೆಗೆ ತಿಲಕವನ್ನಿಟ್ಟು, ರಕ್ಷೆಯನ್ನು ಕಟ್ಟಿದಳು. ಇದೇ ವೇಳೆ ಅಲ್ಲಿಬನೆರೆದಿದ್ದ ಹಿರಿಯರಿಗೆ ಹಾಗೂ ಕಿರಿಯರಿಗೆ ಸಹಿ ವಿತರಣೆ ಮಾಡಲಾಯಿತು.

ಮಕ್ಕಳಿಗೆ ಸಂಸ್ಕೃತಿ ಸಂಸ್ಕಾರಗಳನ್ನು ಹಿರಿಯರು ಚಿಕ್ಕವಯಸ್ಸಿನಿಂದಲೇ ಹೇಳಿಕೊಟ್ಟು, ಮನೆಯಲ್ಲಿ ನಡೆಯುವ ಪ್ರತಿಯೊಂದು ಹಬ್ಬ ಹರಿದಿನಗಳ ಮಹತ್ವ ತಿಳಿಸಿದಾಗ ಅವರಲ್ಲಿ ದೇಶಭಕ್ತಿ, ರಾಷ್ಟ್ರೀಯತೆ, ಧರ್ಮಭಕ್ತಿ, ಹಾಗೂ ಸೋದರತ್ವದ ಭಾವನೆ ಮೂಡಿ ನಮ್ಮ ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡುತ್ತಾರೆ, ಇಲ್ಲವಾದಲ್ಲಿ ಇಂದಿನ ಜಂಜಾಟಮಯ ಆನ್’ಲೈನ್ ಬದುಕಿನಲ್ಲಿ ಎಲ್ಲವೂ ನೇಪಥ್ಯಕ್ಕೆ ಸರಿಯುತ್ತದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!