11 ಕೋಟಿ ಮೌಲ್ಯದ ಕೊಕೇನ್  ಕ್ಯಾಪ್ಸುಲ್  ನುಂಗಿ  ಕೆಐಎಎಲ್ ಬಂದ ವ್ಯಕ್ತಿಯ ಬಂಧನ

11 ಕೋಟಿ ಮೌಲ್ಯದ ಕೊಕೇನ್  ಕ್ಯಾಪ್ಸುಲ್  ನುಂಗಿ  ಕೆಐಎಎಲ್ ಬಂದ ವ್ಯಕ್ತಿಯ ಬಂಧನ

ದೇವನಹಳ್ಳಿ  : ದುಬೈನಿಂದ  ದೇವನಹಳ್ಳಿ  ಕೆಂಪೇಗೌಡ  ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಆಫ್ರಿಕಾ ದೇಶದ ವ್ಯಕ್ತಿಯನ್ನ  ಡಿಆರ್ ಐ ಅಧಿಕಾರಿಗಳು ಬಂಧಿಸಿದ್ದಾರೆ, ಸ್ಕ್ಯಾನಿಂಗ್ ಮಾಡಿದ್ದಾಗ ಆತನ ಹೊಟ್ಟೆಯಲ್ಲಿ 11 ಕೋಟಿ ಮೌಲ್ಯದ 1.25 ಕೆಜಿ ತೂಕದ ಕೊಕೇನ್ ಕ್ಯಾಪ್ಸುಲ್  ಇರುವುದು ಪತ್ತೆಯಾಗಿದೆ.

 

ಆಗಸ್ಟ್  19 ರಂದು ಜೋಹನ್ಸ್ ಬರ್ಗ್ ನಿಂದ  ದುಬೈ  ಮೂಲಕ  ದೇವನಹಳ್ಳಿ ಕೆಂಪೇಗೌಡ  ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಫ್ರಿಕಾ ದೇಶದ ವ್ಯಕ್ತಿ  ಬಂದಿದ್ದಾನೆ, ಈತ ತನ್ನ ಏರ್ ಟಿಕೇಟ್ ಪ್ಯಾಕೇಜ್  ನಲ್ಲಿ ಕೊಡಲಾಗುವ  ಉಚಿತ ಆಹಾರ ನೀರು ಮತ್ತು ತಂಪು ಪಾನೀಯ  ಸ್ವೀಕರಿಸದೆ ನಿರಕರಿಸಿದ, ಪ್ರಯಾಣಿಕರ ಬಗ್ಗೆ  ಗಮನ ಇಟ್ಟಿದ್ದ ಆರ್ಥಿಕ ಗುಪ್ತಚಾರ  ಇಲಾಖೆ ( ಡಿಆರ್ ಐ) ಅಧಿಕಾರಿಗಳಿಗೆ ಈತನ ವರ್ತನೆ ಸಂಶಯಕ್ಕೆ  ಕಾರಣವಾಗಿತ್ತು, ಕೆಐಎಎಲ್ ಗೆ ಬಂದ ಈತನನ್ನು  ವಶಕ್ಕೆ  ಪಡೆದ ಅಧಿಕಾರಿಗಳು ತಪಾಸಣೆ  ನಡೆಸಿದ್ದಾಗ ಮಾದಕ ದ್ರವ್ಯ  ಪತ್ತೆಯಾಗಿಲ್ಲ,  ಸ್ಕ್ಯಾನಿಂಗ್  ಮಾಡಿದ್ದಾಗ ಆತನ ಹೊಟ್ಟೆಯಲ್ಲಿ ಅನುಮಾನಸ್ಪದ ವಸ್ತುಗಳು ಇರುವುದು ಪತ್ತೆಯಾಗಿದೆ, ವಿಕ್ಟೋರಿಯಾ  ಆಸ್ಪತ್ರೆ ಕಳುಹಿಸಿ ವೈದ್ಯರ ಸಹಾಯದಿಂದ  ಆತನ ಹೊಟ್ಟೆಯಲ್ಲಿದ್ದ ವಸ್ತುಗಳನ್ನ ಹೊರ ತೆಗೆದ್ದಾಗ ಕೊಕೇನ್  ಕ್ಯಾಪ್ಸುಲ್  ಪತ್ತೆಯಾಗಿದೆ, ಇದು 1.25 ಕೆಜಿ ತೂಕದ 11 ಕೋಟಿ ಮೌಲ್ಯದ ಮಾದಕ ವಸ್ತುವಾಗಿದೆ.

ದಕ್ಷಿಣ ಆಫ್ರಿಕದಲ್ಲಿ ಅಪರಿಚಿತ ವ್ಯಕ್ತಿ ಕೊಕೇನ್ ಒಳಗೊಂಡ ಕ್ಯಾಪ್ಸುಲ್ ಗಳನ್ನ  ನುಂಗಿಸಿ ದುಬೈ ಮಾರ್ಗವಾಗಿ ಬೆಂಗಳೂರಿಗೆ ಕಳುಹಿಸಿದ. ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‍ನಲ್ಲಿ ರೂಮ್ ಬುಕ್ ಮಾಡಿದ್ದು  ಅಲ್ಲಿ ಉಳಿದುಕೊಳ್ಳಬೇಕು. ಆ ರೂಮ್‍ಗೆ ಅಪರಿಚಿತ ವ್ಯಕ್ತಿ ಬಂದು ಮೊಬೈಲ್ ಫೋನ್  ಕೊಡುತ್ತಾನೆ, ಅದರಲ್ಲಿ ಬರುವ ಸೂಚನೆ ಪಾಲನೆ ಮಾಡಿದ್ದಾರೆ  ಹೊಟ್ಟೆಯಲ್ಲಿರುವ  ಕ್ಯಾಪ್ಸುಲ್  ಹೊರ ತೆಗೆದು ಹಣ ನೀಡಲಾಗುತ್ತೆ, ಪ್ರಯಾಣದ ಸಂಪೂರ್ಣ ವೆಚ್ಚವನ್ನ ಅವರೇ ನೋಡಿಕೊಂಡಿದ್ದರೆಂದು ಪ್ಲೆಡರ್ ಅಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾನೆ.

 

ಗುರುಮೂರ್ತಿ ಬೂದಿಗೆರೆ

8861100990

Leave a Reply

Your email address will not be published. Required fields are marked *

You cannot copy content of this page

error: Content is protected !!