ಅಭಿನವ ಬಸವಣ್ಣ ಸಿದ್ದಗಂಗಾ ಶ್ರೀ ಪ್ರಶಸ್ತಿಗೆ ಭಾಜನರಾದ _ ಸಮಾಜ ಸೇವಕ ಎಸ್.ಪಿ ಚಿದಾನಂದ.

ಅಭಿನವ ಬಸವಣ್ಣ ಸಿದ್ದಗಂಗಾ ಶ್ರೀ ಪ್ರಶಸ್ತಿಗೆ ಭಾಜನರಾದ _ ಸಮಾಜ ಸೇವಕ ಎಸ್.ಪಿ ಚಿದಾನಂದ.

 

ಬೆಂಗಳೂರಿನ ಸ್ಪೇಸ್ ಮೀಡಿಯಾ ಹಾಗೂ ಮೈಸೂರು ಸ್ಯಾಂಡಲ್ ವತಿಯಿಂದ ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ನಡೆದ ಮರಳಿ ಸಂಸ್ಕೃತಿಗೆ ಕಾರ್ಯಕ್ರಮದಲ್ಲಿ ತುಮಕೂರಿನ ಸಮಾಜ ಸೇವಕರು ಹಾಗೂ ಸ್ಪೂರ್ತಿ ಡೆವಲಪರ್ಸ ನ ವ್ಯವಸ್ಥಾಪಕ ನಿರ್ದೇಶಕರಾದ ಎಸ್. ಪಿ ಚಿದಾನಂದ್ ರವರು ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾದ ಅಭಿನವ ಬಸವಣ್ಣ ಸಿದ್ದಗಂಗಾ ಶ್ರೀ ಪ್ರಶಸ್ತಿ ಲಭಿಸಿದ್ದು ಬೆಂಗಳೂರಿನಲ್ಲಿ ಆಗಸ್ಟ್ 21ರಂದು ನಡೆದ ಕಾರ್ಯಕ್ರಮದಲ್ಲಿ ತುಮಕೂರಿನ ಸಿದ್ದಗಂಗಾ ಮಠದ ಶ್ರೀಗಳಾದ ಸಿದ್ದಗಂಗಾ ಶ್ರೀಗಳು ಚಿದಾನಂದ ರವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಇನ್ನು ಚಿದಾನಂದ್ ರವರು ಸರಳ ಸ್ನೇಹಜೀವಿ ಹಾಗೂ ಉತ್ತಮ ವಾಗ್ಮಿಗಳಾಗಿದ್ದ ಇವರು ತುಮಕೂರಿನಲ್ಲಿ ಹಲವು ಸಂಘ ಸಂಸ್ಥೆಗಳಲ್ಲಿ ಉತ್ತಮ ಒಡನಾಟ ಹೊಂದಿದ್ದು ಉತ್ತಮ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದರು.

 

 

ಇನ್ನು ಅಭಿನವ ಬಸವಣ್ಣ ಸಿದ್ದಗಂಗಾ ಶ್ರೀ ಪ್ರಶಸ್ತಿ ಲಭಿಸಿದ್ದು ತಮಗೆ ಸಂತೋಷ ತಂದಿದೆ ಎಂದ ಅವರು.ಇನ್ನು ನಡೆದಾಡುವ ದೇವರು ಎಂದೇ ಪ್ರಸಿದ್ಧರಾಗಿರುವ ಶಿವಕುಮಾರ ಶ್ರೀಗಳು ತಮ್ಮ ಜೀವಿತಾವಧಿಯಲ್ಲಿ ತಮ್ಮ ಭಕ್ತರಿಗೆ ಕಷ್ಟ ಬಂದಂತಹ ಸಂದರ್ಭದಲ್ಲಿ ಅವರ ಪಾದಸ್ಪರ್ಶ ಆದರೆ ಸಾಕು ಬಂದ ಕಷ್ಟಗಳೆಲ್ಲ ಹೋಗಲಾಡಿಸುವ ಶಕ್ತಿ ಶಿವಕುಮಾರ ಶ್ರೀಗಳಲ್ಲಿ ಇತ್ತು .

 

ಇನ್ನು ಅಂತಹ ಮಹಾನ್ ಗುರುಗಳ ಹೆಸರಿನಲ್ಲಿ ಪ್ರಶಸ್ತಿ ಲಭಿಸಿರುವುದು ತಮಗೆ ಸಂತೋಷ ತಂದುಕೊಟ್ಟಿದೆ ಹಾಗೂ ಸಮಾಜದಲ್ಲಿ ಮತ್ತಷ್ಟು ಜವಾಬ್ದಾರಿ ಹೆಚ್ಚಾಗುವಂತೆ ಮಾಡಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗುವ ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಪ್ರಶಸ್ತಿ ಲಭಿಸಲು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.

Leave a Reply

Your email address will not be published. Required fields are marked *

You cannot copy content of this page

error: Content is protected !!