ದೇಶದ ಸ್ವಾತಂತ್ರ್ಯ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ; ಜೆ.ಸಿ. ಮಾಧುಸ್ವಾಮಿ
ತುಮಕೂರು : ದಾಸ್ಯದ ಸಂಕೋಲೆಯ ಬದುಕು ಮುಗಿದು ೭೪ ವರ್ಷ ಪೂರ್ಣಗೊಂಡಿರುವ ದೇಶದ ಸ್ವಾತಂತ್ರö್ಯ ರಕ್ಷಣೆ ನಮ್ಮೆಲ್ಲರ ಮೇಲಿದೆ ಎಂದು ಕಾನೂನು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿಂದು ಜರುಗಿದ ೭೫ನೇ ಸ್ವಾತಂತ್ರ÷್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ, ತುಕಡಿಗಳ ಪರಿವೀಕ್ಷಣೆ ಮಾಡಿದ ನಂತರ ಮಾತನಾಡಿದ ಅವರು, ಸ್ವಾತಂತ್ರö್ಯ ಭಾರತದ ನಿರ್ಮಾಣದ ನಡಿಗೆ ಅಷ್ಟೊಂದು ಸುಲಭವಾಗಿರಲಿಲ್ಲ. ನಮ್ಮಲ್ಲಿದ್ದ ಸ್ವತ್ತೆಲ್ಲ ಪರಕೀಯರ ಪಾಲಾಗಿತ್ತು. ಶತಮಾನಗಳ ಕಾಲ ಹೋರಾಡಿದ ನಂತರ ದೇಶಕ್ಕೆ ಸ್ವಾತಂತ್ರö್ಯ ದೊರಕಿತು. ಸುಮಾರು ೫೬೦ ಪ್ರಾಂತ್ಯಗಳನ್ನು ಸೇರಿಸಿ ೯ ರಾಜ್ಯಗಳನ್ನಾಗಿ ಮಾಡಿ ಭಾಷೆ, ಸಂಸ್ಕೃತಿ, ಧರ್ಮಗಳನ್ನು ಒಟ್ಟುಗೂಡಿಸಿ ಭಾರತೀಯರೆಂದು ಮನಸ್ಸುಗಳನ್ನು ಸೃಷ್ಠಿ ಮಾಡಿ ಹೋರಾಟಕ್ಕೆ ಅಣಿ ಮಾಡಿದ ದಿನಗಳನ್ನು ನಾವು ಮರೆಯಬಾರದು. ಸ್ವಾತಂತ್ರö್ಯದ ಹಕ್ಕನ್ನು ನಿರ್ಮಿಸಲು ಹೋರಾಟ ಮಾಡಿದವರನ್ನು ನಾವೆಂದು ಮರೆಯಬಾರದು ಎಂದರು.
ಬ್ರಿಟೀಷರ ವಿರುದ್ಧ ದೇಶದ ಹೋರಾಟಗಾರರು ನೂರಾರು ವರ್ಷ ಮಹಾ ಸಮರವನ್ನು ಸಾರಿ ಸ್ವಾತಂತ್ರö್ಯದ ಈ ಸುದಿನವನ್ನು ನಿರ್ಮಾಣ ಮಾಡಿದ್ದಾರೆ. ಅವರನ್ನೆಲ್ಲ ಸ್ಮರಣೆ ಮಾಡಬೇಕಾದ್ದು ಈ ದಿನದ ವಿಶೇಷವಾಗಿದೆ. ಸ್ವಾತಂತ್ರö್ಯ ಹೋರಾಟಗಾರರು ನಿರ್ಮಿಸಿದ ಸ್ವತಂತ್ರö ಭಾರತದ ಆಚಾರ, ವಿಚಾರ, ಸಂಸ್ಕೃತಿ, ಭಾಷೆ, ನೆಲ, ಜಲವನ್ನೆಲ್ಲ ನಾವೇ ಸಂರಕ್ಷಣೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಸ್ವಾಭಿಮಾನವನ್ನು ಕಳೆದುಕೊಂಡು ಅನೇಕ ಶತಮಾನಗಳ ಕಾಲ ಪರಕೀಯರ ಅಧೀನದಲ್ಲಿ ದಾಸ್ಯದ ಬದುಕಲ್ಲಿ ಬಾಳುತ್ತಿದ್ದ ಕಾಲ ಮುಗಿದು ನಾವು ಸ್ವತಂತ್ರöರಾಗಿ ೭೪ ವರ್ಷ ಪೂರ್ಣಗೊಂಡಿದೆ. ಸ್ವಾತಂತ್ರö್ಯ ದೊರೆತ ಅನೇಕ ವರ್ಷ ಜಲ, ನೆಲ, ಆಹಾರ ಉತ್ಪಾದನೆ ಸಮಸ್ಯೆಯನ್ನು ಎದುರಿಸಬೇಕಾಯಿತು. ಆದರೆ, ಪ್ರಸ್ತುತ ಭಾರತವು ಜಾಗತಿಕ ಮಟ್ಟದಲ್ಲಿ ತನ್ನದೇ ಆದ ವಿಶೇಷ ಸ್ಥಾನ ಗಳಿಸಿಕೊಂಡಿದೆ. ವಿಶ್ವದಲ್ಲೇ ಅತಿ ಹೆಚ್ಚು ಆಹಾರ ದಾಸ್ತಾನು ಇಟ್ಟುಕೊಂಡ ದೇಶವಾಗಿದೆ. ಕೃಷಿ ಅಭಿವೃದ್ಧಿ, ಆಹಾರಧಾನ್ಯ ಉತ್ಪಾದನೆ ಮತ್ತು ಸಂಗ್ರಹ, ರಾಷ್ಟç ಕಾಯುತ್ತಿರುವ ಸೈನಿಕರು ಹಾಗೂ ದೇಶದ ಸ್ವಾತಂತ್ರö್ಯಕ್ಕಾಗಿ ದುಡಿದವರನ್ನು ನಾವು ಮರೆಯುವಂತಿಲ್ಲ ಎಂದು ಹೇಳಿದರು.
ಇಡೀ ವಿಶ್ವದಲ್ಲಿ ಭಾರತ ದೇಶವು ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಇತ್ತಿಚೆಗೆ ಒಲಿಂಪಿಕ್ ಕ್ರೀಡೆಯಲ್ಲಿ ಚಿನ್ನದ ಪದಕ ಪಡೆದ ನಮ್ಮ ದೇಶ ಕ್ರೀಡಾ ಕ್ಷೇತ್ರದಲ್ಲಿಯೂ ಮುಂದಿದೆ ಎಂಬುದು ಹೆಮ್ಮೆಯ ಸಂಗತಿಯಾಗಿದೆ. ಪ್ರಕೃತಿ ಒಡ್ಡಿರುವ ಅತೀವೃಷ್ಟಿ, ಅನಾವೃಷ್ಟಿ, ಕೋವಿಡ್ ಸೋಂಕಿನoತಹ ವಿಕೋಪಗಳ ಅಡ್ಡಿಯ ನಡುವೆ ದೇಶ ಮತ್ತಷ್ಟು ಅಭಿವೃದ್ಧಿಯತ್ತ ಸಾಗಬೇಕಾಗಿದೆ. ಪ್ರಾಕೃತಿಕ, ನೈಸರ್ಗಿಕ ವಿಕೋಪಗಳು ಎದುರಾದಾಗ ದೇಶವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸಲು ನಾವೆಲ್ಲರೂ ಮುಂದಾಗಬೇಕು. ಸಂಕಷ್ಟಗಳನ್ನು ಬದಿಗೊತ್ತಿ ದೇಶವನ್ನು ಅಭಿವೃದ್ಧಿಪಡಿಸಲು ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆಗಳನ್ನು ಮಾಡಲು ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನಕ್ಕೆ ಆದ್ಯತೆ ನೀಡಲಾಗಿದೆ. ಅಲ್ಲದೆ ಸಂಶೋಧನೆಗಳಿಗೂ ಹೆಚ್ಚಿನ ಪ್ರೋತ್ಸಾಹ ನೀಡಲಾಗಿದೆ ಎಂದು ಹೇಳಿದರು.
ಬ್ರಿಟೀಷರ ದಾಸ್ಯದಿಂದ ಮುಕ್ತರಾಗಿ ಸ್ವತಂತ್ರöರಾದ ನಮಗೆಲ್ಲರಿಗೂ ಸುಸ್ಥಿರ ಬದುಕು ಅತ್ಯವಶ್ಯಕ. ಪ್ರತಿಯೊಬ್ಬರೂ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರವು ಹಲವು ಯೋಜನೆಗಳನ್ನು ರೂಪಿಸುತ್ತಿದೆ. ಆ ಮೂಲಕ ನಾವೆಲ್ಲರೂ ಅಭಿವೃದ್ಧಿ ಪಥದಲ್ಲಿ ನಡೆಯಬೇಕು ಎಂದರು.
ಗ್ರಾಮಗಳ ಮುನ್ನೋಟ:-
ಪ್ರತೀ ಹಳ್ಳಿಯೂ ಒಂದು ರಾಜ್ಯವಾಗಬೇಕೆಂಬ ಗಾಂಧಿಜಿಯವರ ಗ್ರಾಮ ಸ್ವರಾಜ್ಯದ ಬೃಹತ್ ಕಲ್ಪನೆಯನ್ನು ಸಾಕಾರಗೊಳಿಸಲು ಇನ್ನಷ್ಟು ದೂರ ಸಾಗಬೇಕು. ಈ ನಿಟ್ಟಿನಲ್ಲಿ ಪ್ರಸಕ್ತ ವರ್ಷ ರಾಜ್ಯ ಸರ್ಕಾರದಲ್ಲಿ ಗ್ರಾಮಗಳ ಮುನ್ನೋಟ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮ ಯಶಸ್ವಿಯಾದರೆ ಗ್ರಾಮಗಳೂ ಪಟ್ಟಣಗಳಂತೆ ಅಭಿವೃದ್ಧಿ ಕಾಣಲು ಸಾಧ್ಯವೆಂದರು.
ಕಲ್ಪತರು ನಾಡು ನೀರಾವರಿಯಲ್ಲಿ ಸಮೃದ್ಧ ಜಿಲ್ಲೆ:
ಹೇಮಾವತಿ, ಎತ್ತಿನಹೊಳೆ, ತುಂಗಾಭದ್ರಾ ಮೇಲ್ದಂಡೆ ನೀರಾವರಿ ಯೋಜನೆಗಳಿಂದ ನೀರಾವರಿ ಕ್ಷೇತ್ರದಲ್ಲಿ ಕಲ್ಪತರು ನಾಡು ರಾಜ್ಯದಲ್ಲಿಯೇ ಎಲ್ಲಾ ಜಿಲ್ಲೆಗಳಿಗಿಂತ ಸಮೃದ್ಧ ಜಿಲ್ಲೆಯಾಗಲಿದೆ. ಈ ಮೂರು ನೀರಾವರಿ ಯೋಜನೆಗಳಿಂದ ಜಿಲ್ಲೆಯ ಎಲ್ಲಾ ಕೆರೆಗಳನ್ನು ಕೆರೆಗಳ ಸಾಮರ್ಥ್ಯದ ಶೇ.೫೦ರಷ್ಟು ನೀರನ್ನು ತುಂಬಿಸಲು ವಿಸ್ಕೃತ ಯೋಜನಾ ವರದಿ ತಯಾರಿಸಲಾಗಿದ್ದು, ಯೋಜನೆಗಳು ಪೂರ್ಣಗೊಂಡರೆ ಜಿಲ್ಲೆ ಅಂತರ್ಜಲ ಮಟ್ಟ ಹೆಚ್ಚಲಿದೆ. ಪ್ರಗತಿ ಹಂತದಲ್ಲಿರುವ ಈ ಯೋಜನೆಗಳ ಕಾಮಗಾರಿಗಳು ಶೀಘ್ರದಲ್ಲೇ ಪೂರ್ಣಗೊಳ್ಳಲಿವೆ ಎಂದು ತಿಳಿಸಿದರು.
ಹೇಮಾವತಿ ನಾಲೆಯಿಂದ ಹರಿಯುವ ನೀರನ್ನು ಸಮರ್ಪಕವಾಗಿ ಸದುಪಯೋಗ ಪಡಿಸಿಕೊಂಡಿರುವುದರಿoದ ಕಳೆದ ಎರಡ್ಮೂರು ವರ್ಷಗಳಲ್ಲಿ ನಗರ ಸೇರಿದಂತೆ ಜಿಲ್ಲೆಯಲ್ಲಿ ನೀರಿನ ಹಾಹಾಕಾರ ಉಂಟಾಗಿಲ್ಲ. ಹೇಮಾವತಿ ನೀರನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಲು ಹಾಗೂ ಹೇಮಾವತಿ ನಾಲಾ ನೀರಿನ ಹರಿವು ಹೆಚ್ಚಿಸುವ ನಿಟ್ಟಿನಲ್ಲಿ ೪೫೦ ಕೋಟಿ ರೂ. ವೆಚ್ಚದಲ್ಲಿ ನಾಲಾ ಆಧುನೀಕರಣ ಮಾಡಲಾಗಿದೆ. ಬೆಂಗಳೂರಿನ ವೃಷಭಾವತಿ ನದಿಯಿಂದ ಶುದ್ಧೀಕರಿಸಿದ ನೀರನ್ನು ನೆಲಮಂಗಲ, ದೊಡ್ಡಬಳ್ಳಾಪುರ, ಹಳೆ ನಿಜಗಲ್ ಮಾರ್ಗವಾಗಿ ಜಿಲ್ಲೆಯ ತುಮಕೂರು ಗ್ರಾಮಾಂತರದ ೧೨ ಕೆರೆಗಳನ್ನು ತುಂಬಿಸುವ ಯೋಜನೆಯನ್ನೂ ರೂಪಿಸಲಾಗಿದೆ. ಈ ಯೋಜನೆಯಿಂದ ತುಮಕೂರು ಗ್ರಾಮಾಂತರ ಭಾಗದ ಅಂತರ್ಜಲ ಮಟ್ಟ ಹೆಚ್ಚಲಿದೆ. ಜಿಲ್ಲೆಯಲ್ಲಿ ನೀರಿನ ಮಟ್ಟ ಹೆಚ್ಚಾದರೆ ಕೃಷಿ-ತೋಟಗಾರಿಕಾ ಕ್ಷೇತ್ರದಲ್ಲಿ ಜಿಲ್ಲೆಯು ಹೆಚ್ಚು ಪ್ರಗತಿ ಹೊಂದಲಿದೆ ಎಂದು ತಿಳಿಸಿದರು.
ಜಲಜೀವನ್ ಮಿಷನ್ ಯೋಜನೆಯಿಂದ ಗ್ರಾಮಗಳಿಗೆ ಕುಡಿಯುವ ನೀರು:-
ಜಾತಿರಹಿತ ಸಮಾಜವನ್ನು ಸೃಷ್ಟಿ ಮಾಡಬೇಕೆ ಹೊರತು ನಗರ/ಗ್ರಾಮವೆಂದು ವರ್ಗ ಸಮಾಜವನ್ನು ಸೃಷ್ಟಿ ಮಾಡಬಾರದು. ಗ್ರಾಮೀಣ ಪ್ರದೇಶದವರನ್ನು ಎರಡನೇ ದರ್ಜೆಯೆಂಬ ಭಾವನೆ ಸೃಷ್ಟಿಯಾಗುತ್ತಿದೆ. ಇಂತಹ ಭಾವನೆಯನ್ನು ಹೊರಹಾಕಲು ಗ್ರಾಮೀಣ ಪ್ರದೇಶಗಳು ಸಹ ನಗರಪ್ರದೇಶಗಳಂತೆ ಅಭಿವೃದ್ಧಿಪಡಿಸುವ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮುಂಬರುವ ೨೦೨೩ನೇ ಸಾಲಿಗೆ ಗ್ರಾಮೀಣ ಪ್ರದೇಶದ ಪ್ರತೀ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ಜಲಜೀವನವನ್ ಮಿಷನ್ ಯೋಜನೆಯನ್ನು ಜಾರಿಗೊಳಿಸಿದ್ದಾರೆ. ಈ ಯೋಜನೆಯಡಿ ತುಮಕೂರು ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ೪೦ ಕೋಟಿ ರೂ. ಖರ್ಚು ಮಾಡಿ ಮನೆಗಳಿಗೆ ನೀರು ಕೊಡುವ ಕಾರ್ಯ ಪ್ರಗತಿಯಲ್ಲಿದೆ. ಎರಡನೇ ಹಂತಲ್ಲಿ ಓವರ್ ಹೆಡ್ ಟ್ಯಾಂಕ್ ಇಲ್ಲದಿರುವ ಗ್ರಾಮಗಳಿಗೆ ಓವರ್ ಹೆಡ್ ಟ್ಯಾಂಕ್ ನಿರ್ಮಾಣದ ಕಾರ್ಯವನ್ನು ಅನುಷ್ಠಾನ ಮಾಡಲಾಗುವುದು. ಇದಕ್ಕಾಗಿ ವಿವಿಧ ನೀರಿನ ಮೂಲಗಳಿಂದ ದೊರೆಯುವ ನೀರನ್ನು ಒಗ್ಗೂಡಿಸಿ ಬಹು ಗ್ರಾಮ/ಒಂದೇ ಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಕೈಗೊಳ್ಳಬೇಕೆಂದು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಸ್ಮಾರ್ಟ್ಸಿಟಿ ಅಭಿವೃದ್ಧಿಗಾಗಿ ೪೫೫ ಕೋಟಿ ಖರ್ಚು:
ನಗರ ಪ್ರದೇಶದ ಅಭಿವೃದ್ಧಿಗಾಗಿ ತುಮಕೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಬಿಡುಗಡೆಯಾದ ೮೦೦ ಕೋಟಿ ರೂ.ಗಳ ಪೈಕಿ ಸುಮಾರು ೪೫೫ ಕೋಟಿ ರೂ. ಖರ್ಚು ಮಾಡಿ ನಗರವನ್ನು ಅಭಿವೃದ್ಧಿಪಡಿಸಲಾಗಿದೆ. ಮೊದಲ ಹಂತದಲ್ಲಿ ನಗರದ ರಿಂಗ್ ರಸ್ತೆ ಅಭಿವೃದ್ಧಿ, ಕ್ರೀಡಾಂಗಣ ನಿರ್ಮಾಣ, ಗ್ರಂಥಾಲಯ, ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಆದ್ಯತೆ ನೀಡುವುದರೊಂದಿಗೆ ಕಾನೂನು ಸುವ್ಯವಸ್ಥೆ ಸಮಸ್ಯೆ ನಿಭಾಯಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಎಣ್ಣೆಕಾಳುಗಳ ಬೆಳೆಗಳಿಗೆ ಆದ್ಯತೆ:-
ಪ್ರಧಾನಿ ನರೇಂದ್ರ ಮೋದಿ ಅವರು ಎಣ್ಣೆಕಾಳು ಬೆಳೆಗಳ ಉತ್ಪಾದನೆಗೆ ಹೆಚ್ಚು ಆದ್ಯತೆ ನೀಡಿದ್ದು, ಆ ನಿಟ್ಟಿನಲ್ಲಿ ಜಿಲ್ಲೆಯಲ್ಲಿಯೂ ಎಣ್ಣೆ ಕಾಳುಗಳ ಬೆಳೆಗಳನ್ನು ಹೆಚ್ಚಾಗಿ ಬೆಳೆಯಲು ರೈತರನ್ನು ಪ್ರೋತ್ಸಾಹಿಸಲಾಗುತ್ತಿದೆ. ಇದಲ್ಲದೆ, ರೈತರು ತಾವು ಬೆಳೆದ ಬೆಳೆಯನ್ನು ತಾವೇ ಸಮೀಕ್ಷೆ ಮಾಡಲು ಬೆಳೆ ಸಮೀಕ್ಷೆ ಆ್ಯಪ್ ಬಿಡುಗಡೆ ಮಾಡಲಾಗಿದೆ. ಬೆಳೆ ಸಮೀಕ್ಷೆ ಮಾಡಿಕೊಂಡ ರೈತರಿಗೆ ಸರ್ಕಾರಿದಿಂದ ಕೃಷಿ ಕ್ಷೇತ್ರಕ್ಕೆ ಸಂಬAಧಿಸಿದ ಎಲ್ಲಾ ಸೌಲಭ್ಯಗಳು ಸಮರ್ಪಕವಾಗಿ ದೊರಕಲು ಸಹಕಾರಿಯಾಗಲಿದೆ ಎಂದು ಹೇಳಿದರು.
ರೈತ ಸೇತು ಆ್ಯಪ್:-
ಮಧ್ಯವರ್ತಿಗಳ ಹಾವಳಿಯಿಲ್ಲದೆ ರೈತರು ನೇರವಾಗಿ ಮಾರುಕಟ್ಟೆ ಸೃಷ್ಟಿಸಿಕೊಳ್ಳಲು ತೋಟಗಾರಿಕೆ ಇಲಾಖೆಯು ರೈತು ಸೇತು ಆ್ಯಪ್ ಅಭಿವೃದ್ಧಿಗೊಳಿಸಿದೆ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಆ್ಯಪ್ ಅನ್ನು ರಾಜ್ಯದಲ್ಲಿಯೇ ಪ್ರಥಮವಾಗಿ ತುಮಕೂರು ತೋಟಗಾರಿಕೆ ಇಲಾಖೆ ಅಭಿವೃದ್ಧಿಪಡಿಸಿದೆ. ಈರುಳ್ಳಿ ಬೆಳೆಯನ್ನು ಧೀರ್ಘ ಕಾಲದವರೆಗೆ ಶೇಖರಣೆ ಮಾಡಲು ಅನುಕೂಲವಾಗುವಂತೆ ಈರುಳ್ಳಿ ಸಂಸ್ಕರಣಾ ಘಟಕ, ತರಕಾರಿ ಮತ್ತು ಹಣ್ಣುಗಳನ್ನು ಸಂಗ್ರಹಿಸಿಡಲು ಶಿರಾ, ಗುಬ್ಬಿ ತಾಲೂಕಿನಲ್ಲಿ ಶೀತಲ ಮತ್ತು ಹಣ್ಣು ಮಾಗಿಸುವ ಘಟಕಗಳನ್ನು ಸ್ಥಾಪಿಸಲಾಗಿದೆ. ಹೂವಿನ ಬೆಳೆಗಾರರು ಪಾರದರ್ಶಕವಾಗಿ ಹೂ ಮಾರಾಟ ಮಾಡಲು ಶಿರಾ ತಾಲೂಕಿನಲ್ಲಿ ಹೂ ಹರಾಜು ಕೇಂದ್ರ ಸ್ಥಾಪಿಸಲಾಗಿದ್ದು, ಡ್ರಾಗನ್ ಮತ್ತು ಮೂಸಂಬಿ ಬೆಳೆಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಆಯ್ಕೆಯಾಗಿರುವ ತೆಂಗು ಬೆಳೆಗೆ ಹೆಚ್ಚು ಆದ್ಯತೆ ನೀಡುವ ನಿಟ್ಟಿನಲ್ಲಿ ತೆಂಗು ಸಂಬAಧಿತ ಉತ್ಪನ್ನಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ತೆಂಗು ಅಭಿವೃದ್ಧಿ ಪಾರ್ಕ್ ಅಭಿವೃದ್ಧಿಗೊಳಿಸಲು ಕಾರ್ಯಕ್ರಮ ರೂಪಿಸಲಾಗಿದೆ. ಕೊಬ್ಬರಿ ಎಣ್ಣೆ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ತೆಂಗು ಬೆಳೆಗಾರರು ಕೊಬ್ಬರಿ ಎಣ್ಣೆ ಘಟಕಗಳ ಸ್ಥಾಪನೆಗೆ ಮುಂದಾಗಬೇಕು ಎಂದು ಹೇಳಿದರು.
ಆರೋಗ್ಯ ಕ್ಷೇತ್ರದಲ್ಲಿ ತುಮಕೂರಿನದ್ದು ದೊಡ್ಡ ಸಾಧನೆ:-
ಕೋವಿಡ್ ೨ನೇ ಅಲೆ ಜಿಲ್ಲೆಯನ್ನು ಸಂಕಷ್ಟಕ್ಕೆ ದೂಡಿತ್ತು. ಪ್ರತಿನಿತ್ಯ ೨ ರಿಂದ ೨.೫ಸಾವಿರ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿದ್ದವು. ಬೆಂಗಳೂರು-ತುಮಕೂರು ರೈಲ್ವೆ ಪ್ರಯಾಣ ಹಾಗೂ ತುಮಕೂರು ಬೆಂಗಳೂರಿಗೆ ಸಮೀಪವಿರುವ ಕಾರಣ ಜಿಲ್ಲೆಯಲ್ಲಿ ಕೋವಿಡ್ ಹೆಚ್ಚಳಕ್ಕೆ ಕಾರಣವಾಗಿತ್ತು. ಜಿಲ್ಲಾಡಳಿತ ಸೇರಿದಂತೆ ಎಲ್ಲರ ನೆರವಿನ ಮೂಲಕ ಜಿಲ್ಲೆಯಲ್ಲಿ ಕೋವಿಡ್ ಹತೋಟಿಗೆ ತರಲು ಸಾಧ್ಯವಾಯಿತು. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ವೈದ್ಯರು, ಶುಶ್ರೂಷಕಿಯರು ಕೋವಿಡ್ ನಿರ್ವಹಣೆಯಲ್ಲಿ ಶ್ರಮಿಸಿದ್ದಾರೆ ಅವರೆಲ್ಲರಿಗೂ ಅಭಿನಂದನೆ. ಅಂತೆಯೇ ಸ್ವಯಂ ಸೇವಕರ ಹಾಗೂ ನಾಗರಿಕರ ನೆರವಿನಿಂದಲೂ ಕೋವಿಡ್ ನಿಯಂತ್ರಣ ಸಾಧ್ಯವಾಯಿತು. ಅವರೆಲ್ಲರ ಶ್ರಮಕ್ಕೂ ಜಿಲ್ಲಾಡಳಿತದ ಪರವಾಗಿ ಶ್ಲಾಘನೀಯ ಸಲ್ಲಿಸುತ್ತೇನೆ. ಆಮ್ಲಜನಕದ ಕೊರತೆ ಉಂಟಾದಾಗ ದಾನಿಗಳು ಆಮ್ಲಜನಕ ಸಾಂದ್ರಕಗಳನ್ನು ನೀಡುವ ಮೂಲಕ ಜಿಲ್ಲೆಯ ಆಮ್ಲಜನಕದ ಕೊರತೆಯನ್ನು ಸರಿದೂಗಿಸಿದರು. ಅದಲ್ಲದೇ, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಆಮ್ಲಜನಕ ಜನರೇಟರ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದರಿಂದ ಭವಿಷ್ಯದಲ್ಲಿ ಆಮ್ಲಜನಕ ಕೊರತೆ ಜಿಲ್ಲೆಯಲ್ಲಿ ಉಂಟಾಗುವುದಿಲ್ಲ. ಈ ಮಹಾತ್ಕಾರ್ಯ ಮಾಡಿಕೊಟ್ಟ ಎಲ್ಲಾ ದಾನಿಗಳಿಗೂ ನನ್ನ ತುಂಬು ಹೃದಯದ ಅಭಿನಂದನೆ ಎಂದರು.
ಆರೋಗ್ಯ ಕ್ಷೇತ್ರದಲ್ಲಿ ತುಮಕೂರು ದೊಡ್ಡ ಸಾಧನೆ ಮಾಡಿದೆ. ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚಾದ ಸಂದರ್ಭಗಳಲ್ಲಿ ಹೊರ ಜಿಲ್ಲೆಯಿಂದ ನಮ್ಮ ಜಿಲ್ಲೆಗೆ ಬಂದು ಸೋಂಕಿತರು ಚಿಕಿತ್ಸೆ ಪಡೆದಿದ್ದಾರೆ. ಇದಕ್ಕೆ ಖಾಸಗಿ ಆಸ್ಪತ್ರೆಗಳ ನೆರವೂ ಸಾಕಷ್ಟಿದೆ ಎಂದು ಹೇಳಿದರು.
ಶಿಕ್ಷಣ ಕ್ಷೇತ್ರದಲ್ಲಿ ಶೈಕ್ಷಣಿಕ ಜಿಲ್ಲೆಯಾಗಿ ಮುನ್ನಡೆಯುತ್ತಿದೆ ತುಮಕೂರು:-
ಶಿಕ್ಷಣ ಕ್ರಾಂತಿಯಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದ್ದು, ಜಿಲ್ಲೆಯೂ ಶೈಕ್ಷಣಿಕ ಪ್ರಗತಿಯಲ್ಲಿ ಶೈಕ್ಷಣಿಕ ಜಿಲ್ಲೆಯಾಗಿ ಮುನ್ನಡೆಯುತ್ತಿದೆ. ಈ ಶೈಕ್ಷಣಿಕ ಪ್ರಗತಿಗೆ ಮಠ ಹಾಗೂ ಶೈಕ್ಷಣಿಕ ಸಂಸ್ಥೆಗಳ ಶ್ರಮ ಸಾಕಷ್ಟಿದೆ. ಅದರಲ್ಲೂ ಮುಖ್ಯವಾಗಿ ಸಿದ್ಧಗಂಗಾ ಮಠ ಹಾಗೂ ಶ್ರೀ ಸಿದ್ಧಾರ್ಥ ಸಂಸ್ಥೆ ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ನೀಡಿರುವ ಕೊಡುಗೆಯನ್ನು ಮರೆಯುವಂತಿಲ್ಲ ಎಂದರು.
ಮಕ್ಕಳಿಗೆ ಕೇವಲ ಶಿಕ್ಷಣ ಕಲಿಸುವುದೊಂದೇ ಶೈಕ್ಷಣಿಕ ಕ್ರಾಂತಿಯಲ್ಲ. ಶಿಕ್ಷಣದ ಜೊತೆ ಜೊತೆಗೆ ದೇಶ, ತಂದೆ-ತಾಯಿ ಬಗ್ಗೆ ಗೌರವ ಕೊಡುವ ಮಾನವೀಯ ಮೌಲ್ಯವುಳ್ಳ ಶಿಕ್ಷಣ ನೀಡಲು ಆದ್ಯತೆ ಕೊಡಬೇಕಾಗಿದೆ ಎಂದು ಹೇಳಿದರು.
ಜಿಲ್ಲಾ ಸಶಸ್ತç ಮೀಸಲು ಪಡೆ, ಸಶಸ್ತç ಮೀಸಲು ಪೊಲೀಸ್ ಪಡೆ, ನಾಗರಿಕ ಪೊಲೀಸ್ ತಂಡ, ಬ್ಯಾಂಡ್ ಸೆಟ್ ತಂಡ, ಗೃಹ ರಕ್ಷಕ ದಳ, ಅರಣ್ಯ ರಕ್ಷಕರ ತಂಡ, ಕಲ್ಪತರು ಮಹಿಳಾ ಪೊಲೀಸ್ ತಂಡ, ಮಾಜಿ ಸೈನಿಕರ ತಂಡದ ತುಕಡಿಗಳು ಗೌರವ ವಂದನೆ ಸಲ್ಲಿಸಿದವು. ಸರ್ಕಾರಿ ಎಂಪ್ರೆಸ್ ಕಾಲೇಜಿನ ಲಾವಣ್ಯ ಮತ್ತು ತಂಡದವರು ನಾಡಗೀತೆ ಹಾಡಿದರು.
ಈ ಸಂದರ್ಭದಲ್ಲಿ ಕೋವಿಡ್ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸಿದ್ದ ಪಾವಗಡ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಕಿರಣ್, ಕೊರಟಗೆರೆ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಪ್ರಕಾಶ್. ಎನ್.ಎ., ತುರುವೇಕೆರೆ ತಾಲೂಕು ಆರೋಗ್ಯಾಧಿಕಾರಿ ಡಾ. ಸುಪ್ರಿಯಾ, ಗುಬ್ಬಿ ಸಾರ್ವಜನಿಕ ಆಸ್ಪತ್ರೆ ಫಿಜಿûÃಷಿಯನ್ ಡಾ. ರಾಮಕೃಷ್ಣ, ತಿಪಟೂರು ತಾಲೂಕು ಬಿಳಿಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರ ಶುಶ್ರೂಷಕಿ ಮಂಜುಳಾ. ಎಂ.ಜಿ., ಮಧುಗಿರಿ ಸಾರ್ವಜನಿಕ ಆಸ್ಪತ್ರೆ ಶುಶ್ರೂಷಕಿ ತ್ರಿವೇಣಿ, ಚಿ.ನಾ. ಹಳ್ಳಿ ಸಾರ್ವಜನಿಕ ಆಸ್ಪತ್ರೆ ಶುಶ್ರೂಷಕ ತುಂಗೇಶ್, ಶಿರಾ ಸಾರ್ವಜನಿಕ ಆಸ್ಪತ್ರೆ ಶುಶ್ರೂಷಕ ಬುಡೇನ್ ಅಲಿ, ಮಧುಗಿರಿ ತಾಲೂಕಿನ ನೇರಳೆಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಪ್ರಯೋಗಶಾಲಾ ತಂತ್ರಜ್ಞೆ ಭಾರತಿ, ಜಿಲ್ಲಾಸ್ಪತ್ರೆ ಆಂಬ್ಯುಲೆನ್ಸ್ ವಾಹನ ಚಾಲಕ ಆಕಾಶ್, ಕುಣಿಗಲ್‌ನ ಸಾರ್ವಜನಿಕ ಆಸ್ಪತ್ರೆ ಗ್ರೂಪ್-ಡಿ ಸಿಬ್ಬಂದಿ ಶಾರದಮ್ಮ, ಪೊಲೀಸ್ ಇಲಾಖೆಯ ಹೆಡ್ ಕಾನ್ಸಟೇಬಲ್(ನಿಸ್ತಂತು) ಸತೀಶ ಕೆ. ಹಾಗೂ ಸಿಎಚ್‌ಸಿ ಕರೀಂ ಸಾಬ್, ಪೌರ ಕಾರ್ಮಿಕರಾದ ಇಂದ್ರಮ್ಮ, ರಂಗಯ್ಯ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸದ ಜಿ ಎಸ್ ಬಸವರಾಜು, ನಗರದ ಶಾಸಕ ಜಿ.ಬಿ. ಜ್ಯೋತಿ ಗಣೇಶ್, ವಿಧಾನ ಪರಿಷತ್ ಸದಸ್ಯ ಚಿದಾನಂದ್ ಗೌಡ, ಮಹಾನಗರ ಪಾಲಿಕೆಯ ಮೇಯರ್ ಬಿ.ಜಿ. ಕೃಷ್ಣಪ್ಪ, ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರ ವಾಡ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ..ಕೆ. ವಿದ್ಯಾ ಕುಮಾರಿ, ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ ಮತ್ತಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.