ಕೊರಟಗೆರೆ – ( ಸಿ.ಎನ್ ದುರ್ಗಾ ಹೋಬಳಿ ). ವಾಟರ್ ಟ್ಯಾಂಕ್ ಸ್ವಚ್ಛತೆ ವಾಟರ ಮ್ಯಾನ್ ಸಾವು.
ಕೊರಟಗೆರೆ- ನೀರಿನ ಟ್ಯಾಂಕ್ ಸ್ವಚ್ಚತೆ ಮಾಡುತ್ತಿದ್ದ ವೇಳೆ ಏಣಿಯ ಕಾಲು ಮುರಿದು ಟ್ಯಾಂಕಿನ ಮೇಲಿಂದ ಬಿದ್ದು ವಾಟರ್ ಮ್ಯಾನ್ ಸಾವನ್ನಪ್ಪಿರುವ ಘಟನೆ ನಡೆದಿದೆ. ಕೊರಟಗೆರೆ ತಾಲ್ಲೂಕಿನ ಸಿ.ಎನ್ ದುರ್ಗಾ ಹೋಬಳಿ ತೋವಿನಕೆರೆ ಗ್ರಾ.ಪಂ ವ್ಯಾಪ್ತಿಯ ಬೋರಪ್ಪನಹಳ್ಳಿ ಗ್ರಾಮದ ನೀರಿನ ವಾಟರ್ ಮ್ಯಾನ್ ಪ್ರಕಾಶ್ (43) ಮೃತ ಪಟ್ಟ ದುರ್ದೈವಿಯಾಗಿದ್ದು.ಇವರು ಸಂಕ್ರಾಂತಿ ಹಬ್ಬದ ದಿನ ನೀರಿನ ಟ್ಯಾಂಕ್ ತೊಳೆಯುವ ವೇಳೆ ಈ ದುರ್ಘಟನೆ ನಡೆದಿದೆ.ಟ್ಯಾಂಕ್ ತೊಳೆಯುವ ವೇಳೆ ಏಣಿಯ ಕಾಲು ಮುರಿದ ಪರಿಣಾಮ ಬಂಡೆಯ ಮೇಲೆ ಬಿದ್ದ ಪ್ರಕಾಶ್ ಅವರ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದು ಪ್ರಜ್ಞೆ ತಪ್ಪಿದ್ದಾರೆ.ತಕ್ಷಣವೇ ಅವರನ್ನು ತುಮಕೂರಿನ ಶ್ರೀದೇವಿ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಗುರುವಾರವೇ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು.ಆದರೆ ಶುಕ್ರವಾರ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಪ್ರಕಾಶ್ ಮೃತಪಟ್ಟಿದ್ದಾರೆ.ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಪ್ರಕಾಶ್ ರವರು ಸುಮಾರು 18 ವರ್ಷಗಳಿಂದ ನೀರಿನ ವಾಟರ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದು ಇವರು ಕುಟುಂಬದ ಆಧಾರ ಸ್ತಂಭವಾಗಿದ್ದ ವಾಟರ್ ಮ್ಯಾನ್ ಪ್ರಕಾಶ್ ಅವರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.ಈ ಘಟನೆಯ ಸಂಬಂಧ ಕೊರಟಗೆರೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.