ಮದಲೂರು ಕೆರೆಗೆ ನೀರು ಹರಿಸಲು ಜಿಲ್ಲಾಧಿಕಾರಿಗಳ ಭೇಟಿ ಮಾಡಿದ ಸಿರಾ ಶಾಸಕ ರಾಜೇಶ್ ಗೌಡ.

ಮದಲೂರು ಕೆರೆಗೆ ನೀರು ಹರಿಸಲು ಜಿಲ್ಲಾಧಿಕಾರಿಗಳ ಭೇಟಿ ಮಾಡಿದ ಸಿರಾ ಶಾಸಕ ರಾಜೇಶ್ ಗೌಡ.

ಬರಪೀಡಿತ ಪ್ರದೇಶಗಳಲ್ಲಿ ಒಂದಾದ ಸಿರಾ ಸೀಮೆಯ ಮದಲೂರು ಕೆರೆಗೆ ನೀರು ಹರಿಸುವ ಸಲುವಾಗಿ ತುಮಕೂರು ಜಿಲ್ಲಾಧಿಕಾರಿಗಳನ್ನು ಸಿರಾ ಶಾಸಕ ರಾಜೇಶ್ ಗೌಡ ಹಾಗೂ ಶಿರಾ ತಾಲೂಕಿನ ಬಿಜೆಪಿ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿದರು.

 

ಇದೇ ವೇಳೆ ಪತ್ರಕರ್ತರಿಗೆ ಪ್ರತಿಕ್ರಿಯಿಸಿದ ಶಾಸಕ ರಾಜೇಶ್ ಗೌಡರವರು ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು ಅದಕ್ಕೆ ಅನುಗುಣವಾಗಿ ಈಗ ಹೇಮಾವತಿ ಜಲಾಶಯದಿಂದ ಎಸ್ಕೇಪ್ ಕೆನಾಲ್ ಮೂಲಕ ಶಿರಾ ಕೆರೆಗೆ ನೀರು ಹರಿಸಲಾಗುತ್ತಿದೆ ಈಗಾಗಲೇ ನೀರು ಶೇಖರಣೆಗೊಂಡು ತುಂಬುವ ಹಂತಕ್ಕೆ ಬಂದಿದೆ ನಂತರ ಸಿರಾ ಕೆರೆಗೆ ನೀರು ಹರಿಸುವುದು ವಾಡಿಕೆ .ಅದರಂತೆ ಈ ಬಾರಿ ಮದಲೂರು ಕೆರೆಗೆ ಸಹ ನೀರು ಹರಿಸಬೇಕೆಂದು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು.

 

ಕಳೆದ ಬಾರಿ ಚಿಕ್ಕನಾಯಕನಹಳ್ಳಿಗೆ ಅಲೋ ಕೇಶನ್ ಆಗಿದ್ದ ನೀರನ್ನು ಮದಲೂರು ಕೆರೆಗೆ ಹರಿಸಿರುವುದಾಗಿ ಮಾಹಿತಿ ನೀಡಿದರು. ಈಗಾಗಲೇ ಸಿಎಂ ಹಾಗೂ ಮಾಜಿ ಸಿಎಂ ಯಡಿಯೂರಪ್ಪನವರನ್ನು ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು ಅದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು. ಅದರಂತೆ ಈಗ ಹರಿಯುತ್ತಿರುವ ನೀರು ರೊಟೇಷನ್ ಪ್ರಕಾರ ಜಿಲ್ಲೆಯ ಇತರ ತಾಲ್ಲೂಕುಗಳಿಗೆ ಸುಮಾರು ಇಪ್ಪತ್ತು ದಿನಗಳವರೆಗೆ ನೀರು ಹರಿಯಲಿದೆ.ತದನಂತರ ಕುಣಿಗಲ್ ಕೆರೆಗೆ ನೀರು ಹರಿಯುವುದು ಪುನಹ ನಮ್ಮ ಸರತಿ ಬಂದಾಗ ಮದಲೂರು ಕೆರೆಗೆ ನೀರು ಹರಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ ಎಂದರು.

 

 

ಸಚಿವ ಮಾಧುಸ್ವಾಮಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನೀರು ಹರಿಸಬೇಕಾಗಿದೆ

ಇದಕ್ಕೆ ಸಂಬಂಧಿಸಿದಂತೆ ಸಚಿವ ಮಾಧುಸ್ವಾಮಿ ರವರು ಈಗಾಗಲೇ ಹೇಳಿಕೆ ನೀಡಿದ್ದು ಯಾವ ರೀತಿಯ ತಾಂತ್ರಿಕ ಸಮಸ್ಯೆ ಎದುರಾಗಲಿದೆ ಎಂದು ತಿಳಿಸಿದ್ದಾರೆ ಅದರಂತೆ ಕಳೆದ ಬಾರಿ ಚುನಾವಣೆ ಸಮಯದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಚುನಾವಣೆ ಸಂದರ್ಭದಲ್ಲಿ ನೀರು ಹರಿಸುವ ಬಗ್ಗೆ ಮಾತು ನೀಡಿದರು ಅದರಂತೆ ಕಳೆದ ಬಾರಿ ಮದಲೂರು ಕೆರೆಗೆ ನೀರು ಸಹ ಹರಿದುಬಂದಿದೆ ಅದರಂತೆ ಈ ಬಾರಿಯೂ ಸಹ ನೀರು ಹರಿಸಲು ಯಡಿಯೂರಪ್ಪನವರನ್ನು ಭೇಟಿ ಮಾಡಿದ್ದು ಅವರು ಕೂಡ ಸಕಾರಾತ್ಮವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದ್ದಾರೆ .

 

ಸಚಿವ ಮಾಧುಸ್ವಾಮಿ ರವರ ಮೇಲೆ ವಿಶ್ವಾಸವಿದೆ ಮದಲೂರು ಕೆರೆಗೆ ನೀರು ಹರಿಸುವ ಸಲುವಾಗಿ ಮಾಧುಸ್ವಾಮಿ ಅವರು ಸ್ಪಂದಿಸಲಿದ್ದಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು ಇನ್ನು ಈ ಪ್ರಕ್ರಿಯೆಯಲ್ಲಿ ತಾಂತ್ರಿಕ ಸಮಸ್ಯೆ ಉಂಟಾದಾಗ ಅದಕ್ಕೆ ಪರಿಹಾರ ಕೂಡ ಹುಡುಕುವ ಜವಾಬ್ದಾರಿ ನಮ್ಮ ಮೇಲೆ ಇರುತ್ತದೆ ಎಂದರು.

 

ಇನ್ನು ಮಾಧುಸ್ವಾಮಿ ರವರು ಹಿರಿಯ ಸಚಿವರಾಗಿದ್ದು ಕಾನೂನು ಮತ್ತು ಸಂಸದೀಯ ಸಚಿವರಾಗಿದ್ದಾರೆ ಹಾಗೂ ಸರ್ಕಾರ ಕೂಡ ನಮ್ಮದೇ ಇರುವುದರಿಂದ ನೀರು ಹರಿಸುವ ಪ್ರಕ್ರಿಯೆಯಲ್ಲಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಇನ್ನು ಮದಲೂರು ಕೆರೆ ದೊಡ್ಡಕೆರೆ ಅಲ್ಲ ಹಾಗಾಗಿ ನೀರು ಮದಲೂರು ಕೆರೆಗೆ ಹರಿದರೆ ಯಾವುದೇ ಸಮಸ್ಯೆ ಉದ್ಭವವಾಗುವುದಿಲ್ಲ.

 

ಇನ್ನು ಸಿರಾ ಪ್ರದೇಶ ಬರಪೀಡಿತ ಪ್ರದೇಶವಾಗಿದೆ ಅಂತರ್ಜಲಮಟ್ಟ ತೀರ ಹದಗೆಟ್ಟಿದ್ದು ಮದಲೂರು ಕೆರೆಗೆ ನೀರು ಹರಿದರೆ ಆಭಾಗದ ಸರಿಸುಮಾರು 40 ಹಳ್ಳಿಗಳಿಗೆ ಕುಡಿಯುವ ನೀರಿಗೆ ಆಶ್ರಯ ವಾಗಲಿದೆ ಅದರಿಂದ ಅಂತರ್ಜಲ ಮಟ್ಟ ವೃದ್ಧಿಯಾಗಲಿದೆ ಎಂದರು .

 

ಇನ್ನು ಕುಡಿಯುವ ನೀರಿನ ಸಲುವಾಗಿ ನೀರು ಹರಿದರೆ ಯಾವುದೇ ಕಾನೂನು ಸಮಸ್ಯೆ ಉಂಟಾಗುವುದಿಲ್ಲ ಎಂದು ಶಾಸಕ ರಾಜೇಶ್ ಗೌಡ ತಿಳಿಸಿದ್ದಾರೆ.

 

ಇದೇ ಸಂದರ್ಭದಲ್ಲಿ ಮದಲೂರು ಮೂರ್ತಿ ಮಾಸ್ಟರ್, ಸೇರಿದಂತೆ ಸ್ಥಳೀಯ ಬಿಜೆಪಿ ನಾಯಕರು ಹಾಗೂ ಪದಾಧಿಕಾರಿಗಳು, ಹಾಜರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!