ವಿಶ್ವವಿಖ್ಯಾತ ಜೀರ್ಣಾಂಗ ರೋಗ ತಜ್ಞ ಡಾ ಮನೋಯಿಲ್ ಗಾಲ್ವೋ ಅವರಿಂದ ರಾಜ್ಯದ ವೈದ್ಯರಿಗೆ ನೂತನ ಚಿಕಿತ್ಸಾ ವಿಧಾನದ ತರಬೇತಿ
• ಟ್ರಸ್ಟ್‌ವೆಲ್ ಆಸ್ಪತ್ರೆಯಲ್ಲಿ ವಿನೂತನ ಚಿಕಿತ್ಸಾ ವಿಧಾನದ ನೇರ ಪ್ರದರ್ಶನ ಹಾಗೂ ತರಬೇತಿ
• ವಿಶ್ವವಿಖ್ಯಾತ ಜೀರ್ಣಾಂಗ ರೋಗ ತಜ್ಞ ಡಾ ಮನೋಯಿಲ್ ಗಾಲ್ವೋ ಹಾಗೂ ಡಾ ಮೋಹಿತ್ ಭಂಡಾರಿ ಅವರಿಂದ ತರಬೇತಿ
ಬೆಂಗಳೂರು ಆಗಸ್ಟ್ 1, 2021: ವಿಶ್ವವಿಖ್ಯಾತ ಜೀರ್ಣಾಂಗ ರೋಗ ತಜ್ಞ ಡಾ ಮನೋಯಿಲ್ ಗಾಲ್ವೋ ಅವರು ಶಸ್ತ್ರಚಿಕಿತ್ಸೆ ಇಲ್ಲದೆ ತೂಕ ಇಳಿಸುವ ನೂತನ ಚಿಕಿತ್ಸಾ ವಿಧಾನದ ಬಗ್ಗೆ ರಾಜ್ಯದ ಜಠರಶಾಸ್ತ್ರಜ್ಞರುಗಳಿಗೆ ತರಬೇತಿಯನ್ನು ನೀಡಿದರು.
27 ರಿಂದ 35 ರ ವರೆಗಿನ ಬಾಡಿ ಮಾಸ್ ಇಂಡೆಕ್ಸ್ ಹೊಂದಿರುವ ಜನರು ಸುಲಭವಾಗಿ ತಮ್ಮ ದೇಹದ ತೂಕವನ್ನು ನಿಯಂತ್ರಣಕ್ಕೆ ತಂದುಕೊಳ್ಳಲು ಈ ಚಿಕಿತ್ಸಾ ವಿಧಾನ ಸಹಕಾರಿಯಾಗಿದೆ. ಶಸ್ತ್ರಚಿಕಿತ್ಸೆ ಇಲ್ಲದ ವಿಶೇಷ ಎಂಡೋಸ್ಕೋಪಿಕ್ ಯಂತ್ರವನ್ನು ಬಳಸುವ ಮೂಲಕ ಹೊಟ್ಟೆಯ (ಜಠರದ) ಗಾತ್ರವನ್ನು ಕಡಿಮೆ ಮಾಡಲಾಗುತ್ತದೆ. ಇದರಿಂದ ತೂಕ ಇಳಿಕೆಯಾಗುತ್ತದೆ. ಟ್ರಸ್ಟ್‌ವೆಲ್ ಆಸ್ಪತ್ರೆಯ ಗ್ಯಾಸ್ಟ್ರೋ ಸೈನ್ಸ್‌ಸ್ ವಿಭಾಗದ ಮುಖ್ಯಸ್ಥರಾದ ಡಾ ಮನೀಶ್ ಜೋಶಿ ಅವರ ಮುಂದಾಳತ್ವದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ವಿಶ್ವದಾದ್ಯಂತ ಇಂತಹ 2000 ಕ್ಕೂ ಹೆಚ್ಚು ಪ್ರಕ್ರಿಯೆಗಳನ್ನು ನಡೆಸಲಾಗಿದೆ. ಇದರಿಂದ ರೋಗಿಗಳಿಗೆ ಬಹಳಷ್ಟು ಅನುಕೂಲವಿದೆ. ಇದೊಂದು ಶಸ್ತ್ರಚಿಕಿತ್ಸೆ ಹೊರತಾದ ಚಿಕಿತ್ಸಾ ವಿಧಾನವಾಗಿದ್ದು, ಡೇ ಕೇರ್ ವಿಧಾನವಾಗಿದೆ. ಬೊಜ್ಜಿನಿಂದ ಬಳಲುತ್ತಿರುವ ಎಲ್ಲರಿಗೂ ಒಳ್ಳೆಯ ಚಿಕಿತ್ಸಾ ವಿಧಾನವಾಗಿದೆ. ಈ ಚಿಕಿತ್ಸಾ ವಿಧಾನದ ಸಂಶೋಧಕ ವಿಶ್ವವಿಖ್ಯಾತ ಜೀರ್ಣಾಂಗ ರೋಗ ತಜ್ಞ ಡಾ ಮೊನೊಯೀಲ್ ಗಾಲ್ವೋ ಅವರಿಂದ ನಮ್ಮ ಆಸ್ಪತ್ರೆಯ ಗ್ಯಾಸ್ಟ್ರೋಎಂಟ್ರೋಲೈಜಿಸ್ಟ್‌ಗಳು ತರಬೇತಿಯನ್ನು ಪಡೆದುಕೊಂಡಿರುವುದು ಬಹಳ ಸಂತಸದ ವಿಷಯವಾಗಿದೆ. ಈ ಚಿಕಿತ್ಸಾ ವಿಧಾನ ನಮ್ಮ ಟ್ರಸ್ಟ್‌ವೆಲ್ ಆಸ್ಪತ್ರೆ ಯಲ್ಲೂ ಲಭ್ಯವಿದ್ದು, ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬಹುದಾಗಿದೆ *ಎಂದು ಟ್ರಸ್ಟ್‌ವೆಲ್ ಹಾಸ್ಪಿಟಲ್ ನ ಸಿಎಂಡಿ ಡಾ. ಹೆಚ್ ವಿ ಮಧುಸೂಧನ್ ಹೇಳಿದರು*.
ಪ್ರಖ್ಯಾತ ಜೀರ್ಣಾಂಗ ರೋಗ ತಜ್ಞ ಡಾ ಮೊನೊಯೀಲ್ ಗಾಲ್ವೋ ಹಾಗೂ ಇಂದೋರ್ ನ ಡಾ ಮೋಹಿತ್ ಭಂಡಾರಿ ಅವರು ರಾಜ್ಯದ 15 ಜಠರಶಾಸ್ತ್ರಜ್ಞ ವೈದ್ಯರುಗಳಿಗೆ ತರಬೇತಿಯನ್ನು ನೀಡಿದರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಅಶೋಕ್ ಆರ್, ಮಾರ್ಕೇಟಿಂಗ್ ವಿಭಾಗದ ಮುಖ್ಯಸ್ಥರು
ಟ್ರಸ್ಟ್ ವೆಲ್ ಆಸ್ಪತ್ರೆ, ಮೊ: 91 99004 42219