ಕೊರೋನ ಮುಕ್ತ ಗ್ರಾಮಾಂತರ ಮಾಡಲು ಪಣತೊಟ್ಟ ಶಾಸಕ ಡಿಸಿ ಗೌರಿಶಂಕರ್
ಕೋರನ ಮೂರನೆ ಅಲೆ ಆಗಮಿಸುತ್ತಿರುವ ಪ್ರಯಕ್ತ ಮುಂಜಾಗ್ರತಾ ಕ್ರಮವಾಗಿ ಇಂದು ತುಮಕೂರು ಗ್ರಾಮಾಂತರ ಜನಪ್ರಿಯ ಶಾಸಕರಾದ ಡಿಸಿ ಗೌರಿಶಂಕರ್ ಅವರು ಬಳ್ಳಗೆರೆಯ ತಮ್ಮ ನಿವಾಸದಲ್ಲಿ ಉಚಿತವಾಗಿ 10 ಸಾವಿರ ಕೋವಿಡ್ ಶೀಲ್ಡ್ ವ್ಯಾಕ್ಸಿನೇಷನ್ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಇಂದು ಸುಮಾರು 5 ಸಾವಿರಕ್ಕೂ
ಹೆಚ್ಚು ಸಾರ್ವಜನಿಕರು ಲಸಿಕೆ ಪಡೆದುಕೊಂಡರು, ಸುಮಾರು 7 ರಿಂದ 8 ಸಾವಿರ ಜನಗಳಿಗೆ ಐದರಿಂದ ಆರು ವಿವಿಧ ಬಗೆಯ ತಿನಿಸುಗಳ (ಊಟದ) ವ್ಯವಸ್ಥೆಯನ್ನು ಸ್ವತಹ ಶಾಸಕರೇ ಕಲ್ಪಿಸಿ, ಸುಮಾರು ಒಂದು ಎಕರೆಯಲ್ಲಿ ಶಾಮಿಯಾನ ಹಾಕಿಸಿ ವ್ಯಾಕ್ಸೀನ್ ತೆಗೆದುಕೊಳ್ಳಲು ಬಂದಂತಹ ಎಲ್ಲರಿಗೂ ಕೂರಲು ಕುರ್ಚಿಯ ವ್ಯವಸ್ಥೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಿ ಶಾಸಕರ ಮನೆಯ ಆವರಣದಲ್ಲಿ ಇಂದು ಹಬ್ಬದ ವಾತಾವರಣವೇ ಸೃಷ್ಟಿಯಾಗಿತ್ತು, ಬಹಳ ದಿನಗಳಿಂದ
ಕೋವಿಡ್ ಲಸಿಕೆ ಸಿಗದೆ ಪರದಾಡುತ್ತಿದ್ದವರಿಗೆ ಶಾಸಕರ ಪರಿಶ್ರಮದಿಂದ ಇಷ್ಟು ಸುಲಭವಾಗಿ ವ್ಯಾಕ್ಸಿನ್ ಸಿಕ್ಕಿದ್ದು ಸಾರ್ವಜನಿಕರ ಸಂತೋಷಕ್ಕೆ ಪರವೇ ಇರಲಿಲ್ಲ.
ಈಗಾಗಲೇ ಸೋಂಕು ಹೆಚ್ಚಾಗುತ್ತಿದ್ದು, ಮೂರನೇ ಮುಂಜಾಗ್ರತ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದ್ದು, ಕ್ಷೇತ್ರದ ಜನರ ಆರೋಗ್ಯ ದೃಷ್ಟಿಯಿಂದ ಲಸಿಕೆ ಅಭಿಯಾನ ಕೈಗೊಂಡಿರುವ ಶಾಸಕರ ಕಾರ್ಯಕ್ಕೆ ಸಾರ್ವಜನಿಕರು ತುಂಬು ಹೃದಯದ ಮೆಚ್ಚುಗೆ ವ್ಯಕ್ತಪಡಿಸಿದರು.