ಬಿಜೆಪಿ ವ್ಯವಸ್ಥಿತವಾಗಿ ದೇಶದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣ ಮಾಡುತ್ತಿದೆ_ವೈ ಎಸ್ ವಿ ದತ್ತ

 

ಹುಬ್ಬಳ್ಳಿ: ಬಿಜೆಪಿ ವ್ಯವಸ್ಥಿತವಾಗಿ ದೇಶದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣ ಮಾಡುತ್ತಿದ್ದು, ಈ ವೇಳೆ ಮತ್ತೊಮ್ಮೆ ಎಲ್ಲ ವಿರೋಧ ಪಕ್ಷಗಳು ತಾತ್ವಿಕ ಸಿದ್ದಾಂತಗಳ ಆಧಾರದ ಮೇಲೆ ಒಂದಾಗುವ ಕಾಲಘಟ್ಟ ನಿರ್ಮಾಣವಾಗಿದೆ ಎಂದು ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ದತ್ತಾ ಹೇಳಿದರು.

 

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಏರ್ಪಡಿಸಿ ಮಾತನಾಡಿದ ಅವರು, 1970 ರ ದಶಕದಲ್ಲಿ ದೇಶದಲ್ಲಿ ಕಾಂಗ್ರೆಸ್ ನೇರವಾಗಿ ತುರ್ತುಪರಿಸ್ಥಿತಿಗೆ ಕಾರಣವಾಗಿತ್ತು‌. ಆಗ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ ನೇತೃತ್ವದಲ್ಲಿ ಜನತಾ ಪರಿವಾರದಲ್ಲಿ ಎಲ್ಲ ನಾಯಕರು ಒಂದಾಗಿ ಹೊಸ ಯುಗಾಂತ್ಯಾಕ್ಕೆ ಕಾರಣರಾದರು. ಅದರಂತೆ ಇದೀಗ ಬಿಜೆಪಿ ವಿರುದ್ಧ ಎಲ್ಲ ವಿರೋಧ ಪಕ್ಷಗಳು ಧ್ರುವಿಕರಣ ಅನಿವಾರ್ಯ ಆಗಿದೆ ಎಂದರು.

 

ಸರ್ಕಾರದಿಂದ ಪೆಗಾಸಿಸ್ ದುರ್ಬಳಕೆ:

ರಾಜ್ಯದ ರಾಜಕಾರಣದಲ್ಲಿ ಹೊಸ ಅಲೆಗೆ ಕಾರಣವಾಗಿರುವ ಪೆಗಾಸಿಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯೇ ಭಾರತ ಸರ್ಕಾರ ತಮ್ಮ ತಂತ್ರಾಂಶ ಖರೀದಿ ಮಾಡಿದೆ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ದೇಶದ 50 ಕ್ಕೂ ಹೆಚ್ಚು ಪ್ರಮುಖ ವ್ಯಕ್ತಿಗಳ ಫೋನ್ ಕದ್ದಾಲಿಕೆ ನಡೆದಿರುವಕ್ಕೆ ಕಾರಣವಾಗಿದೆ. ಇನ್ನೂ ಒಂದು ತಂತ್ರಾಂಶಕ್ಕೆ 700 ಕೋಟಿ ಖರ್ಚಾಗಲಿದ್ದು ಅದರಂತೆ 50 ಅಂದರೆ 2500 ಕೋಟಿ ಜನರ ತೆರಿಗೆ ಹಣವನ್ನು ಸರ್ಕಾರ ದುರುಪಯೋಗ ಪಡಿಸಿಕೊಂಡಿದೆ ಎಂದು ಆರೋಪಿಸಿದರು.

 

ಪತ್ರಿಕಾಗೋಷ್ಠಿಯಲ್ಲಿ ರಾಜೇಶ್ವರಿ ಹೆಗಡೆ, ರಾಜು ಅಂಬುರೆ, ಸಾಧಿಕ್ ಹಕ್ಕಿಂ, ಗಜಾನನ ಅನ್ವೇಕರ ಸೇರಿದಂತೆ ಮುಂತಾದವರು ಇದ್ದರು.

ನುತನ ಸಿಎಂಗೆ ಅಭಿನಂದನೆ

ಬಸವರಾಜ ಬೊಮ್ಮಾಯಿ ಅವರು ರಾಜ್ಯದ ನೂತನ ಸಿಎಂ ಆಗಿದ್ದಾರೆ. ಅವರು ಮೂಲತಃ ಜನತಾ ಪರಿವಾರದವರು. ಈ ಹಿನ್ನೆಲೆಯಲ್ಲಿ ಅವರು ಸಿಎಂ ಆಗಿರುವುದಕ್ಕೆ ಖುಷಿತಂದಿದೆ. ಅವರಿಗೆ ಪಕ್ಷದ ವತಿಯಿಂದ ಅಭಿನಂದನೆ ಎಂದರು. ಬಸವರಾಜ ಬೊಮ್ಮಾಯಿ ಮೃದ್ದು ಸ್ವಭಾವ ವ್ಯಕ್ತಿಯಾಗಿದ್ದಾರೆ. ಇದೀಗ ರಾಜ್ಯದಲ್ಲಿ ಯುದ್ಧದ ಪರಿಸ್ಥಿತಿ ಇದೆ. ಹಾಗಾಗಿ ಅವರ ಮುಂದೆ ಸಾಲು ಸಾಲು ಸವಾಲುಗಳಿಗೆ‌ ಇವುಗಳನ್ನು ಅವರು ಯಾವ ರೀತಿ ಎದುರಿಸಿ ಕೆಲಸ ಮಾಡುತ್ತಾರೆ ಎಂಬುದನ್ನು ಕಾದು ನೋಡೋಣಾ ಎಂದು ವೈ.ಎಸ್.ದತ್ತಾ ಹೇಳಿದರು.

Leave a Reply

Your email address will not be published. Required fields are marked *

You cannot copy content of this page

error: Content is protected !!