ಶೌರ್ಯ ವಿಪತ್ತು ನಿರ್ವಹಣೆ ತಂಡದಿಂದ ನೆರೆಗೆ ಸಿಕ್ಕ ಗೋ ರಕ್ಷಣೆ

ಶೌರ್ಯ ವಿಪತ್ತು ನಿರ್ವಹಣೆ ತಂಡದಿಂದ ನೆರೆಗೆ ಸಿಕ್ಕ ಗೋ ರಕ್ಷಣೆ

ಕುಮಟಾ: ಧರ್ಮಸ್ಥಳ ಯೋಜನೆಯ ಶೌರ್ಯ ವಿಪತ್ತು ನಿರ್ವಹಣೆಯ ತಂಡವು ನೆರೆಯಿಂದ ಪ್ರಾಣಾಪಾಯದಲ್ಲಿರುವ ಜಾನುವಾರಗಳ ರಕ್ಷಣೆ ಮಾಡುವ ಮೂಲಕ ಗೋ ಪ್ರೇಮ ಮೆರೆದಿದೆ.

10 ಜನ ಕಾರ್ಯಕರ್ತರು 7 ಆಕಳುಗಳನ್ನು ನೆರೆ ಪ್ರದೇಶದಿಂದ ಸ್ಥಳಾಂತರಿಸುವ ಸಂದರ್ಭದಲ್ಲಿ ಆಕಳು ಕಾಲು ಬಡಿದು ದೋಣಿ ಮುಗುಚಿದ್ದರಿಂದ 2 ಆಕಳು ನೀರು ಪಾಲಾಗಿತ್ತು. ತಕ್ಷಣ 5 ದನ ಕರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ ತಂಡವು ನೀರು ಪಾಲಾದ 2 ಗೋವುಗಳ ರಕ್ಷಣೆಗಾಗಿ ನೀರಿನಲ್ಲಿ ಧುಮುಕಿದಾಗ ನಾಲ್ವರು ನೀರು ಪಾಲಾಗುವ ಸ್ಥಿತಿ ಎದುರಾಗಿತ್ತು. ಅಷ್ಟರಲ್ಲಿ ಜಾಗೃತರಾದ ತಂಡದ ಇತರೆ ಸದಸ್ಯರು, ತಮ್ಮ ಸಹಚರರ ಜೊತೆಗೆ ಆ ಎರಡು ಗೋವುಗಳನ್ನು ರಕ್ಷಣೆ ಮಾಡುವ ಮೂಲಕ ಸಾಹಸ ಮೆರೆದಿದ್ದಾರೆ.

ಈ ರಕ್ಷಣಾ ಕಾರ್ಯದಲ್ಲಿ ಧರ್ಮಸ್ಥಳ ಯೋಜನೆಯ ಶೌರ್ಯ ವಿಪತ್ತು ನಿರ್ವಹಣೆಯ ಮನೋಜ ನಾಯಕ, ದಿನೇಶ ನಾಯಕ, ಹರೀಶ ನಾಯಕ, ಮಂಜು ನಾಯಕ, ಉದಯ ನಾಯಕ, ವಿನಯ ನಾಯಕ ಸೇರಿದಂತೆ ಇತರರು ಇದ್ದರು.

 

Leave a Reply

Your email address will not be published. Required fields are marked *

You cannot copy content of this page

error: Content is protected !!