ಇಂದಿನ ಮಕ್ಕಳು ವಯೋವೃದ್ಧರು ಹಾಗೂ ಯುವ ಪೀಳಿಗೆಗೆ ಪೌಷ್ಟಿಕಾಂಶವುಳ್ಳ ಆಹಾರ ಅತ್ಯಗತ್ಯವಾಗಿದ್ದು ಅಂತ ಆಹಾರಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯ ಪಡೆಯಲು ಸಹಕಾರಿಯಾಗಲಿದೆ ಎಂದು ಶ್ರೀಗಳು ತಿಳಿಸಿದರು.
ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಸೌಖ್ಯ ನ್ಯಾಚುರಲ್ಸ್ ಫುಡ್ ಅಂಡ್ ಬೇವೇರೇಜಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ತಯಾರಿಸಲಾಗಿದ್ದ ಮಹತ್ವ ಹೆಲ್ತಿ ಮಿಕ್ಸ್ ಮಿಲ್ಲೇಟ್ (ಹರ್ಬಲ್) ಅನ್ನು ತುಮಕೂರಿಗೆ ಅಧಿಕೃತವಾಗಿ ಸಿದ್ದಗಂಗಾ ಶ್ರೀಗಳು ಬಿಡುಗಡೆಗೊಳಿಸಿದರು .
ಇನ್ನು ಸಂಸ್ಥೆಯ ಉತ್ಪನ್ನಗಳು ಮಾರುಕಟ್ಟೆಗೆ ಪರಿಚಯಿಸುವ ಮುನ್ನ ಕೋವಿಡ್ ವಾರಿಯರ್ಸ್ ಗಳಾದ ವೈದ್ಯಕೀಯ ಸಿಬ್ಬಂದಿಗಳು ,ಪೊಲೀಸರು ಹಾಗೂ ಪೌರಕಾರ್ಮಿಕರಿಗೆ ಉಚಿತವಾಗಿ ಹೆಲ್ದಿ ಮಿಕ್ಸ್ ನನ್ನು ವಿತರಿಸಲಾಯಿತು .
ಮಹತ್ವ ಹೆಲ್ತಿ ಮಿಲ್ಲೆಟ್ ಮಿಕ್ಸ್ ಅನ್ನು ಸಿರಿಧಾನ್ಯ ,ದ್ವಿದಳ ಧಾನ್ಯ, ಒಣಹಣ್ಣು, ಖಾದ್ಯ ಬೀಜಗಳು ಮತ್ತು ಆಯುರ್ವೇದಿಕ್ ಗಿಡ ಮೂಲಿಕೆಗಳಿಂದ ತಯಾರಿಸಲಾಗಿದ್ದು.
ಯಾವುದೇ ಕಲಬೆರಕೆ ಕೆಮಿಕಲ್ಸ್ ಹಾಗೂ ಪ್ರಿಸರ್ವೇಟಿವ್ ರಹಿತವಾಗಿದ್ದು 100% ನ್ಯಾಚುರಲ್ ಹೆಲ್ತಿ ಮಿಕ್ಸ್ ಆಗಿದ್ದು ಇದನ್ನು ಎಲ್ಲಾ ವರ್ಗದವರು ಬಳಸಬಹುದು ಎಂದು ಸಂಸ್ಥೆಯ ಸಿಇಒ ಜಗದೀಶ್ ರವರು ತಿಳಿಸಿದರು.
ಇನ್ನು ಮಹತ್ವ ಹೆಲ್ತ್ ಮಿಕ್ಸ್ ನಲ್ಲಿ ಶುದ್ಧ ಗಿಡಮೂಲಿಕೆಗಳ ತುಳಸಿ ಶುಂಠಿ ಅಶ್ವಗಂಧ ಅಮೃತಬಳ್ಳಿ ಇವುಗಳನ್ನು ಬಳಸಲಾಗಿದೆ ಇದರಿಂದ ನಮ್ಮ ದೇಹದಲ್ಲಿನ ಇಮ್ಯೂನಿಟಿ ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ಸಂಸ್ಥೆಯ ಮ್ಯಾನೇಜರ್ ಕಲ್ಯಾಣಿ ಜಗದೀಶ್ ರವರು ತಿಳಿಸಿದರು
ಇದೇ ಸಂದರ್ಭದಲ್ಲಿ ಕೆ ಕೆ ಆರ್ಕಿಟೆಕ್ಟ್ ನ ಕೃಷ್ಣಕುಮಾರ್, ಮನೋಹರ್, ಚೇತನ್, ನವೀನ್ ಸೇರಿದಂತೆ ಇತರರು ಹಾಜರಿದ್ದರು.