ಶಾಪಿಂಗ್ ಮಾಲ್ ನಿರ್ಮಾಣ ನಿರ್ಧಾರ ಕೈಬಿಟ್ಟದ್ದಕ್ಕೆ ಸಿಹಿ ಹಂಚಿ ಸಂಭ್ರಮಿಸಿದ ವರ್ತಕರು.

 

 

ತುಮಕೂರು ನಗರದ ಶ್ರೀ ಸಿದ್ಧಿವಿನಾಯಕ ಮಾರುಕಟ್ಟೆ ಜಾಗದಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಪಿಪಿಪಿ ಮಾದರಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ ಬಹುಮಹಡಿ ಕಾರು ಪಾರ್ಕಿಂಗ್ ಬಹುಪಯೋಗಿ ಮಾಲ್ ಕಾಮಗಾರಿಯ ಯೋಜನೆಯನ್ನು ಕೈ ಬಿಡಲಾಗುವುದು ಎಂದು ತುಮಕೂರು ನಗರ ಶಾಸಕರಾದ ಜಿಬಿ ಜ್ಯೋತಿ ಗಣೇಶ್ ರವರು ತಿಳಿಸಿದ ಬೆನ್ನಲ್ಲೇ ತುಮಕೂರಿನ ತರಕಾರಿ ಹಾಗೂ ಮಂಡಿ ವರ್ತಕರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

 

 

ತುಮಕೂರು ನಗರದ ಮಂಡಿ ವರ್ತಕರು ಹಾಗೂ ತರಕಾರಿ ವರ್ತಕರು ಹಲವು ವರ್ಷಗಳಿಂದ ಇದಕ್ಕೆ ಸಂಬಂಧಿಸಿದಂತೆ ವಿರೋಧ ವ್ಯಕ್ತಪಡಿಸುತ್ತಿದ್ದರೂ ಆದರೂ ಕೂಡ ತುಮಕೂರು ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಇಲಾಖೆ ವತಿಯಿಂದ ಬಹುಮಹಡಿ ಶಾಪಿಂಗ್ ಮಾಲ್ ನಿರ್ಮಾಣ ಮಾಡಲು ಮುಂದಾಗಿತ್ತು ಆದರೆ ಕೊನೆಕ್ಷಣದಲ್ಲಿ ಶಾಪಿಂಗ್ ಮಾಲ್ ನಿರ್ಮಾಣ ಕಾಮಗಾರಿ ಇರುವುದೆಂದು ತುಮಕೂರಿನ ಸಿದ್ಧಿ ವಿನಾಯಕ ಮಾರುಕಟ್ಟೆ ಜಾಗದಲ್ಲಿ ವರ್ತಕರು ಸಂಭ್ರಮ ವ್ಯಕ್ತಪಡಿಸಿದ್ದಾರೆ.

 

ಇದೆ ಸಮಯದಲ್ಲಿ ಪ್ರತಿಕ್ರಿಯಿಸಿದ ನವೀನ್ ಕುಮಾರ್ ರವರು ತುಮಕೂರಿನ ಸಿದ್ಧಿ ವಿನಾಯಕ ಮಾರುಕಟ್ಟೆ ಜಾಗ ಖಾಸಗಿಯವರಿಗೆ ನೀಡಿ ಖಾಸಗಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡುವ ಯೋಜನೆ ಸಂಬಂಧಪಟ್ಟಂತೆ ಇಲಾಖೆಗಳು ನಿರ್ಮಾಣ ಮಾಡುವ ನಿರ್ಧಾರವನ್ನ ಕೈಬಿಟ್ಟಿರುವುದು ಸಂತೋಷದ ವಿಷಯವಾಗಿದೆ ಎಂದರು.

 

ಇನ್ನು ಗುಜರಾತ್ ಮಾದರಿಯ ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ಮಾಣ ಮಾಡುವ ಮೂಲಕ ಈ ಭಾಗದ ರೈತರು ಹಾಗೂ ವರ್ತಕರಿಗೆ ಅನುಕೂಲ ಮಾಡಿಕೊಡಬೇಕು ಆದರೆ ಶಾಪಿಂಗ್ ಮಾಲ್ ಮಾಡುವದರಿಂದ ಯಾರಿಗೂ ಉಪಯೋಗವಾಗುವುದಿಲ್ಲ ಇನ್ನು ಈ ಭಾಗದ ರೈತರು ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ಮಾಣವಾಗಿದೆ ಆದಲ್ಲಿ ಈ ಭಾಗದ ರೈತರಿಗೆ ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಅನುಕೂಲವಾಗುವುದು ಎಂದರು.

 

ಈ ಭಾಗದ ಸಾರ್ವಜನಿಕರು ಹಾಗೂ ವರ್ತಕರು ಬೇಡಿಕೆ ಈ ಭಾಗದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಮಾತ್ರ ನಿರ್ಮಾಣ ಮಾಡಬೇಕು ಅದನ್ನು ಹೊರತುಪಡಿಸಿ ತರಹದ ಯೋಜನೆ ಕೈಹಾಕಿದ್ದೆ ಹಾಗದಲ್ಲಿ ಮುಂದಿನ ದಿನದಲ್ಲಿ ಹೋರಾಟ ಮಾಡಲಾಗುವುದು ಆದ್ದರಿಂದ ಕೂಡಲೇ ಈ ಭಾಗದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ಮಾಣವಾಗಬೇಕು ಇದರ ಮೂಲಕ ಈ ಭಾಗದ ರೈತರು ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯ ಮಾಡಿದ್ದಾರೆ.

 

ಇದೇ ಸಂದರ್ಭದಲ್ಲಿ ಡ್ರೈವಿಂಗ್ ಸ್ಕೂಲ್ ನ ಪರಮೇಶ್, ತರಕಾರಿ ಮಾರಾಟಗಾರ ಸಂಘದ ಅಧ್ಯಕ್ಷರಾದ ಗೋಪಾಲ್, ಗಣೇಶ್, ಶ್ರೀಧರ್, ರವಿಕುಮಾರ್ ,ಉಮೇಶ್ ,ನರಸಿಂಹಮೂರ್ತಿ ಸೇರಿದಂತೆ ಹಲವು ವರ್ತಕರು ಹಾಗೂ ಸಾರ್ವಜನಿಕರು ಸಂಭ್ರಮ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!