ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳಕ್ಕೆ ಕಡಿವಾಣ ಹಾಕಲು ಎಎಪಿ ಒತ್ತಾಯ

ತುಮಕೂರು:ಖಾಸಗಿ ಶೈಕ್ಷಣಿಕ ಸಂಸ್ಥೆಗಳಿAದ ಪೋಷಕರ ಮೇಲಾಗುತ್ತಿರುವ ಶುಲ್ಕ ದಬ್ಬಾಳಿಕೆಗೆ ಸರಕಾರ ಕಡಿವಾಣ ಹಾಕಬೇಕು,ಹಾಗೆಯೇ ಖಾಸಗಿ ಶಿಕ್ಷಕರ ವೇತನವನ್ನೇ ಸರಕಾರವೇ ಭರಿಸುವ ಮೂಲಕ ಅವರ ನೇರವಿಗೆ ಬರಬೇಕೆಂದು ಆಗ್ರಹಿಸಿ ಇಂದು ಅಮ್ ಆದ್ಮಿ ಪಕ್ಷದ ಕಾರ್ಯಕರ್ತರು ಟೌನ್‌ಹಾಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಎಎಪಿಯ ತುಮಕೂರು ಜಿಲ್ಲಾ ಉಸ್ತುವಾರಿ ಬಿ.ಟಿ.ನಾಗಣ್ಣ ಅವರ ನೇತೃತ್ವದಲ್ಲಿ ಹತ್ತಾರು ಕಾರ್ಯಕರ್ತರು ನಗರದ ಟೌನ್‌ಹಾಲ್ ವೃತ್ತದಲ್ಲಿ ಸಮಾವೇಶಗೊಂಡು ಶಿಕ್ಷಣ ಸಚಿವ ಸುರೇಶ್‌ಕುಮಾರ್ ಹಾಗೂ ಸರಕಾರದ ಅವೈಜ್ಞಾನಿಕ ಶೈಕ್ಷಣಿಕ ನಡೆಗಳ ವಿರುದ್ದ ಘೋಷಣೆ ಕೂಗಿದರು.ಈ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಬಿ.ಟಿ.ನಾಗಣ್ಣ, ಕೋವಿಡ್ ಸಂದರ್ಭದಲ್ಲಿ ಅನೇಕ ಕುಟುಂಬಗಳು ಆರ್ಥಿಕವಾಗಿ ಸಾಕಷ್ಟು ಸಂಕಷ್ಟು ಅನುಭವಿಸುತಿದ್ದಾರೆ.ಇಂತಹ ವೇಳೆ ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳಕ್ಕೆ ಸಂಬAಧಪಟ್ಟ ಮಂತ್ರಿಗಳು ಅನುವು ಮಾಡಿಕೊಟ್ಟಿರುವುದು ಸರಿಯಲ್ಲ. ಇದರಿಂದ ಜನಸಾಮಾನ್ಯರು ಮಕ್ಕಳ ದುಬಾರಿ ಶುಲ್ಕ ಭರಿಸಲಾಗದೆ ಶಾಲೆಯನ್ನೇ ಬಿಡುವ ಸಾಧ್ಯತೆ ಇದೆ.ಹಾಗಾಗಿ ಕೂಡಲೇ ಸರಕಾರ ಖಾಸಗಿ ಶಾಲೆಗಳು ಶುಲ್ಕವನ್ನು ಮರುಪರಿಶೀಲಿಸಿ ಆದೇಶ ಹೊರಡಿಸಬೇಕು ಎಂಬುದು ಎಎಪಿಯ ಆಗ್ರಹವಾಗಿದೆ ಎಂದರು.

Leave a Reply

Your email address will not be published. Required fields are marked *

You cannot copy content of this page

error: Content is protected !!