ಭಾರತದ ಮಹತ್ವದ ಮೈಲಿಗಲ್ಲು: ಹೊಸ ಕೊರೋನಾ ಪ್ರಕರಣದಲ್ಲಿ ಭಾರಿ ಕುಸಿತ
ನವದೆಹಲಿ: ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಭಾರತವು ಒಂದು ಮಹತ್ವದ ಮೈಲಿಗಲ್ಲನ್ನು ದಾಟಿದೆ. ಸುಮಾರು ಏಳು ತಿಂಗಳ ನಂತರ ಜನವರಿ 12ರಂದು 12,584 ದೈನಂದಿನ ಹೊಸ ಪ್ರಕರಣಗಳು ದಾಖಲಾಗಿದೆ. ಅಂದರೆ ಅತ್ಯಂತ ಕಡಿಮೆ ಪ್ರಕರಣ ದಾಖಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹೇಳಿಕೆಯ ಪ್ರಕಾರ, 2020 ರ ಜೂನ್ 18 ರಂದು ದೈನಂದಿನ ಹೊಸ ಪ್ರಕರಣ 12,881 ಆಗಿತ್ತು. ಜನವರಿ 12 ರಂದು ಭಾರತದ ಸಕ್ರಿಯ ಪ್ರಕರಣ 2,16,558 ಕ್ಕೆ ಇಳಿದಿದೆ. ಒಟ್ಟು ಸಕಾರಾತ್ಮಕ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪಾಲು 2.07% ಆಗಿದೆ.
ಕಳೆದ 24 ಗಂಟೆಗಳಲ್ಲಿ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ 5,968 ಪ್ರಕರಣಗಳ ಕುಸಿತ ದಾಖಲಾಗಿದೆ. ಹೆಚ್ಚುತ್ತಿರುವ ಚೇತರಿಕೆ ಮತ್ತು ದೈನಂದಿನ ಹೊಸ ಪ್ರಕರಣಗಳ ಕುಸಿತದೊಂದಿಗೆ, ಭಾರತದ ಚೇತರಿಕೆ ಸಂಖ್ಯೆ 1.01 ಕೋಟಿಗೆ ಹತ್ತಿರದಲ್ಲಿದೆ ಎಂದು ಸಚಿವಾಲಯ ತಿಳಿಸಿದೆ.
“ಒಟ್ಟು ಚೇತರಿಸಿಕೊಂಡ ಪ್ರಕರಣಗಳು ಇಂದು 1.01 ಕೋಟಿ ದಾಟಿದೆ, 96.49% ರ ಚೇತರಿಕೆ ದರ ಇದೆ. ಚೇತರಿಸಿಕೊಂಡ ಪ್ರಕರಣಗಳು ಮತ್ತು ಸಕ್ರಿಯ ಪ್ರಕರಣಗಳ ನಡುವಿನ ಅಂತರವು ಬೆಳೆಯುತ್ತಲೇ ಇದೆ ಮತ್ತು ಪ್ರಸ್ತುತ 98,94,736 ರಷ್ಟಿದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.