ಜಾವಾ ಬೈಕ್ ಏರಿ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ ಮಾಜಿ ಸಚಿವ ಟಿಬಿಜೆ.

 

ಮಾಜಿ ಸಚಿವರು ಹಾಗೂ ಶಿರಾ ಕ್ಷೇತ್ರದ ಮಾಜಿ ಶಾಸಕರಾದ ಟಿಬಿ ಜಯಚಂದ್ರ ರವರು ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿ ಕೊಟ್ಟಿ ಗ್ರಾಮದ ಕಾಂಗ್ರೆಸ್ ಮುಖಂಡ ಅಶೋಕ್ ರವರ ಮನೆಗೆ ಭೇಟಿ ನೀಡಿದರು ಇದೇ ಸಂದರ್ಭದಲ್ಲಿ ಅಶೋಕ್ ರವರ ಪುತ್ರನ ನೂತನ ವಿನ್ಯಾಸದ ಜಾವಾ ಬೈಕ್ ಮಾಜಿ ಸಚಿವ ಜಯಚಂದ್ರ ಅವರ ಕಣ್ಣಿಗೆ ಬಿದ್ದಿತ್ತು.

ಕೂಡಲೇ ಜಾವಾ ಬೈಕ್ ನ ವಿನ್ಯಾಸಕ್ಕೆ ಮನಸೋತ ಜಯಚಂದ್ರ ರವರಿಗೆ ಬಾಲ್ಯದ ನೆನಪು ಅವರನ್ನು ಕಾಡತೊಡಗಿತು ಕೊಡಲೆ ಜಾವಾ ಬೈಕ್ ನ ಬಳಿ ಬಂದ ಜಯಚಂದ್ರ ರವರು ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದರು.

 

 

ಇದೇ ಸಂದರ್ಭದಲ್ಲಿ ತನ್ನ ಮೊದಲ ಚುನಾವಣೆಯನ್ನು ಜಾವಾ ಬೈಕ್ ನಲ್ಲಿ ಹಳ್ಳಿಹಳ್ಳಿ ಸುತ್ತಿದ್ದನ್ನು ಸ್ಮರಿಸಿದ ಅವರು ಈಗಿನ ಯುವಕರು ಹಳೆಯಕಾಲದ ಬೈಕ್ ಮಾಡೆಲ್ ಕಡೆ ಒಲವು ತೋರಿಸುತ್ತಿರುವ ಟ್ರೆಂಡ್ ನಿಂದಾಗಿ ರಸ್ತೆಯಲ್ಲಿ ಬೈಕ್ ನೋಡಿದಾಗ ನನಗಿನ್ನೂ ವಯಸ್ಸು ಆಗಿಲ್ಲ ಎನಿಸುತ್ತಿದೆ ಎನ್ನುವ ಮೂಲಕ ತಮ್ಮ ಬಾಲ್ಯದ ದಿನಗಳನ್ನು ನೆನಪು ಹಾಕಿ ಬೈಕೇರಿ ಒಂದು ಸುತ್ತು ಪೋಸು … ನೀಡಿರುವ ವಿಡಿಯೋಸ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ

Leave a Reply

Your email address will not be published. Required fields are marked *

You cannot copy content of this page

error: Content is protected !!