ಕೊರಟಗೆರೆ – ತಾಲೂಕಿನ ಹೊಳವನಹಳ್ಳಿಯ KPS ಶಾಲೆಯಲ್ಲಿ ಮಂಗಳವಾರದಂದು NTSE ಮತ್ತು NMMS ಪರೀಕ್ಷೆಗಳ ಪೂರ್ವ ಸಿದ್ದತಾ ಕಾರ್ಯಗಾರದ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ NS ಸುಧಾಕರ್ ರವರು ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶದ ಮಕ್ಕಳು ಅತಿ ಹೆಚ್ಚಿನ ಅಂಕ ಪಡೆದು ರಾಜ್ಯ ಮಟ್ಟದಲ್ಲಿ ಹೆಸರು ಗಳಿಸುತ್ತಿದ್ದಾರೆ.ರಾಜ್ಯದಲ್ಲಿ ಈಗ ಶಾಲೆಗಳು ಪ್ರಾರಂಭವಾಗುತ್ತಿದ್ದು ಮಕ್ಕಳು ಯಾವುದೇ ತರಹದ ಭಯ ಪಡದೇ ಶಾಲೆಗೆ ಹಾಜರಾಗಬೇಕು ಮಕ್ಕಳು ತಪ್ಪದೇ ಸ್ಯಾನಿಟೈಸರ್ ಮತ್ತು ಮಾಸ್ಕನ್ನು ಬಳಸಬೇಕು .ಗ್ರಾಮವನ್ನು ಕೊರೋನಾ ರೋಗದಿಂದ ಮುಕ್ತವನ್ನಾಗಿ ಮಾಡಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರು .ವಿದ್ಯಾರ್ಥಿಗಳು ಹಾಜರಿದ್ದರು.