ನಾಡು ಕಂಡ ಅಪ್ರತಿಮ ರಾಜರಲ್ಲಿ ಕೆಂಪೇಗೌಡರ ಅಗ್ರಸ್ಥಾನದಲ್ಲಿ ಇರುವರು ನಾಡು ನುಡಿ ಸಂಸ್ಕೃತಿ ಗೆ ಅತ್ಯಂತ ಮಹತ್ವ ಕೊಟ್ಟು ಕನ್ನಡನಾಡಿನ ಏಳಿಗೆಗೆ ಮಹತ್ತರ ಕೊಡುಗೆ ನೀಡಿದ ಮಹನೀಯರಲ್ಲಿ ಕೆಂಪೇಗೌಡರ ಪಾತ್ರ ದೊಡ್ಡದು ಎಂದು ಜೆಡಿಎಸ್ ನ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ದಯಾನಂದ ಗೌಡರವರು ತಿಳಿಸಿದರು.
ತುಮಕೂರಿನ ಎಂ ಜಿ ರಸ್ತೆಯಲ್ಲಿ ನಾಡಪ್ರಭು ಕೆಂಪೇಗೌಡರ 512 ಜಯಂತ್ಯೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು, ಕೆಂಪೇಗೌಡರು, ಅಂಬೇಡ್ಕರ್ ರವರು , ಮಹಾತ್ಮ ಗಾಂಧೀಜಿರವರು, ಬಸವಣ್ಣನವರು ಇಂತಹ ಮಹನೀಯರು ಒಂದು ಜಾತಿಗೆ ಸೀಮಿತವಾದ ವ್ಯಕ್ತಿಗಳಲ್ಲ ಇಂತಹ ಮಹಾನ್ ನಾಯಕರು ವಿಶ್ವಮಾನವ ತತ್ವವನ್ನು ಅಳವಡಿಸಿಕೊಂಡ ಮಹನೀಯರು .
ಕೆಂಪೇಗೌಡರು ದೇಶಕ್ಕೆ ಮಾದರಿಯಾಗಿದ್ದು 500 ವರ್ಷಗಳ ಹಿಂದೆಯೇ ಬೆಂಗಳೂರಿನಂತಹ ಬೃಹತ್ ನಗರವನ್ನ ಕಟ್ಟಿ ಬೆಳೆಸುವುದರಲ್ಲಿ ಮಹತ್ತರ ಪಾತ್ರ ವಹಿಸಿದ್ದರು ಇಂದು ಅವರು ನಿರ್ಮಿಸಿದಂತ ಬೆಂಗಳೂರು ನಗರ ವಿಶ್ವವೇ ತಿರುಗಿ ನೋಡುವಂತೆ ಬೆಳೆದು ಬೃಹತ್ ನಗರವಾಗಿದೆ. ಆಗಿನ ರಾಜರು ಕೇವಲ ನಾಡು-ನುಡಿ ಸಂಸ್ಕೃತಿ ಪರಂಪರೆಗಳಿಗೆ ಹೆಚ್ಚು ಮಹತ್ವ ನೀಡುವಂತಹ ವ್ಯಕ್ತಿಗಳಾಗಿದ್ದರು ಇಂತಹ ಮಹನೀಯರ ಜಯಂತಿಯನ್ನು ಪ್ರತಿಯೊಬ್ಬರು ಆಚರಿಸುವಂತಾಗಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕರವೇ ಮುಖಂಡರಾದ ಯಲ್ಲೇಶ್ ಗೌಡ, ಸುಧಾಕರ್ ಗೌಡ ದಿಲೀಪ್, ಕಿರಣ್ ಗೌಡ, ನಿರಂಜನ್ ಸೇರಿದಂತೆ ಹಲವರು ಭಾಗವಹಿಸಿದ್ದರು.