ಬಾಗಲಕೋಟೆ.
ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ಕಾರ್ಯಕರ್ತರ ಪಡೆ ಇರುತ್ತದೆ.ಮುಖ್ಯಮಂತ್ರಿ ಆಗುವ ಬಗ್ಗೆ ಅವರ ಅವರ ಅಭಿಮಾನಿ ಯಿಂದಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ,ಆದರೆ ಅಂತಿಮವಾಗಿ ಚುನಾವಣೆ ಬಳಿಕ ಹೈ ಕಮಾಂಡ ನಿರ್ಧಾರ ಮಾಡುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ.
ಅವರು ಬಾಗಲಕೋಟೆ ನಗರದಲ್ಲಿ ಮಾತನಾಡುತ್ತಾ,ಮುಖ್ಯಮಂತ್ರಿ ಆಗುವ ವಿಚಾರ ದಲ್ಲಿ ಹೇಳಿಕೆ ಯಿಂದಾಗಿ ಪಕ್ಷಕ್ಕೆ ಯಾವುದೇ ಡ್ಯಾಮಜ್ ಆಗಲ್ಲ.ಏಕೆಂದರೆ ಚುನಾವಣೆಯಲ್ಲಿ
113 ಸೀಟು ಬಂದ ಮೇಲೆ ಆಗ ಹೈಕಮಾಂಡ ವಿಚಾರ ಮಾಡುತ್ತದೆ.ಅದಕ್ಕೂ ಮುಂಚೆ,ಸಿದ್ದರಾಮಯ್ಯನವರ, ಡಿಕೆ ಶಿವಕುಮಾರ, ಜಿ.ಪರಮೇಶ್ವರ, ಖರ್ಗೆ ಅವರ ಸಹ ಆಕಾಂಕ್ಷೆ ಇದ್ದಾರೆ.ಯಾವಾಗಲೂ ಮುಖ್ಯಮಂತ್ರಿ ಸ್ಥಾನಕ್ಕೆ ಇಬ್ಬರು,ಮೂವರು ಆಕಾಂಕ್ಷೆಗಳು ಇರುತ್ತಾರೆ. ಇದು ಎಲ್ಲ ಪಕ್ಷದಲ್ಲಿ ಸಾಮಾನ್ಯ ವಾಗಿ ಇರುತ್ತದೆ.ನಾನು ಈಗ ಏನು ಮುಖ್ಯಮಂತ್ರಿ ಆಕಾಂಕ್ಷೆ ಅಲ್ಲ,ಈಗ ಇರುವವರ ಬಗ್ಗೆ ಮುಗಿಯಲಿ ಮುಂದೆ ನೋಡೊಣ,ಇನ್ನು ವಯಸ್ಸು ಇದೆ.ಮುಂದೆ ಮುಖ್ಯಮಂತ್ರಿ ಬಗ್ಗೆ ನೋಡೋಣ ಎಂದು ಹೇಳಿದರು. ಇದೇ ಸಮಯದಲ್ಲಿ ,ಜಮೀರ ಅಹಮ್ಮದ್,ಬಗ್ಗೆ ಪ್ರತಿಕ್ರಿಯೆ ನೀಡಿ, ನಮ್ಮ ಪಕ್ಷದಲ್ಲಿ ಸಿಕ್ಸರ್ ಭಾರಿಸುತ್ತಾ ಇರುತ್ತಾರೆ.ಕ್ರಿಕೆಟ್ ದಲ್ಲಿ ಸಿಕ್ಸರ್ ಭಾರಿಸಿದ ಬಳಿಕ ಗೆಲವು ಆಗುವ ಹಾಗೆ ಅವರು ಸಿಕ್ಸರ್ ಭಾರಿಸುತ್ತಾ ಇರುತ್ತಾರೆ ಎಂದು ತಿಳಿಸಿದರು,ಮುಂದಿನ ಲೋಕಸಭಾ ಚುನಾವಣೆಯ ವಿಚಾರವಾಗಿ ಮಾತನಾಡಿ,ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ನಾನು ಸ್ಪರ್ಧೆ ಮಾಡಬೇಕು,ಇಲ್ಲವೇ ನಮ್ಮ ಮಕ್ಕಳು ಸ್ಪರ್ಧೆ ಮಾಡಬೇಕು,ಈಗ ಹಾಗೆ ಆಗಿದೆ.ಏಕೆಂದರೆ ಇನ್ನು ಯಾರೂ ಸ್ಪರ್ಧೆ ಮಾಡಲು ಮುಂದೆ ಬರಲ್ಲ,ಅದಕ್ಕೆ ನಮ್ಮ ಮಕ್ಕಳನ್ನು ರಾಜಕೀಯ ತರವುದು ಅನಿವಾರ್ಯವಾಗುತ್ತದೆ ಎಂದರು.ರಮೇಶ ಜಾರಕಿಹೊಳಿ ಅವರ ರಾಜಿನಾಮೆ ಬಗ್ಗೆ ಪ್ರತಿಕ್ರಿಯೆ ನೀಡಿ,ಅದು ಅವರಿಗೆ ಸಂಭಂಧಪಟ್ಟ ವಿಷಯ ಅವರೇ ಪ್ರತಿಕ್ರಿಯೆ ನೀಡಬೇಕು,ನಾನು ಹೇಗೆ ಹೇಳಬೇಕು ಎಂದರು.