ತುಮಕೂರು: ತುಮಕೂರು ನಗರದ ೧೪ನೇ ವಾರ್ಡ್ ನ ವ್ಯಾಪ್ತಿಯಲ್ಲಿರುವ ವಿನಾಯಕ ಮಾರುಕಟ್ಟೆಯಲ್ಲಿನ ವಿನಾಯಕ ದೇವಸ್ಥಾನವನ್ನ ಯಾವುದೇ ಮಾಹಿತಿ ನೀಡದೆ ತೆರವುಗೊಳಿಸಿರುವ ಮಹಾನಗರ ಪಾಲಿಕೆ ಸಿಬ್ಬಂಧಿಗಳ ನಡೆಯನ್ನು ಮಾಜಿ ಶಾಸಕ ಡಾ.ರಫೀಕ್ ಅಹ್ಮದ್ ಪ್ರಶ್ನಿಸಿದ್ದಾರೆ.
ಈ ಹಿಂದೆ ವಿನಾಯಕ ದೇವಸ್ಥಾನವಿರುವ ಜಾಗ ಎ.ಪಿ.ಎಂ.ಸಿ ಮತ್ತು ಮಹಾನಗರ ಪಾಲಿಕೆಯ ಇವೆರಡರ ಮಧ್ಯೆ ವಿವಾದವೇರ್ಪಟ್ಟು ನ್ಯಾಯಾಲಯದ ಮೊರೆಹೋಗಲಾಗಿತ್ತು. ಪ್ರಕರಣದ ಸತ್ಯಾಸತ್ಯತೆ ಪರಿಶೀಲನೆ ನಂತರ ನ್ಯಾಯಾಲಯದ ತೀರ್ಪಿನಂತೆ ಈ ವಿವಾಧಿತ ಜಾಗ ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟಿರುತ್ತದೆ ಎಂದು ಆದೇಶವಾಗಿದೆ.
ಈ ಆದೇಶದಂತೆ ಮಹಾನಗರ ಪಾಲಿಕೆ ಅಧಿಕಾರಿಗಳು ದೇವಸ್ಥಾನವನ್ನು ತೆರವುಗೊಳಿಸುವಾಗ ಅನುಸರಿಸಬೇಕಾದ ಸೂಕ್ತ ಕ್ರಮಗಳನ್ನು ಗಾಳಿಗೆ ತೂರಿ ಸ್ಥಳೀಯರಿಗೆ ಯಾವುದೇ ಮಾಹಿತಿ ನೀಡದೆ ರಾತ್ರೋ ರಾತ್ರಿ ದೌಡಾಯಿಸಿ ಮನಸೋ ಇಚ್ಚೆ ದೇವಸ್ಥಾನದ ತೆರವುಗೊಳಿಸಿರುವು ಮಾಡಿರುವುದು ಅನುಮಾನಕ್ಕೆಡೆ ಮಾಡಿದೆ ಎಂದು ತಿಳಿಸಿದ್ದಾರೆ.
ಹಲವು ವರ್ಷಗಳಿಂದ ಪೂಜಿಸಲ್ಪಟ್ಟ ದೇವರ ವಿಗ್ರಹವನ್ನು ಸಾಂಪ್ರದಾಯಿಕವಾಗಿ ಸ್ಥಳಾಂತರ ಮಾಡುವುದು ಅಧಿಕಾರಿಗಳ ಮತ್ತು ಸಂಬAಧಪಟ್ಟವರ ಕರ್ತವ್ಯವಾಗಿರುತ್ತದೆ. ಆದರೆ ತರಾತುರಿಯಲ್ಲಿ ತೆರಳಿ ದೇವಸ್ಥಾನ ತೆರವುಗೊಳಿಸುವ ಅವಶ್ಯಕತೆಯಾದರು ಏನಿತ್ತು ಎಂದು ಸಾರ್ವಜನಿಕರಿಗೆ ತಿಳಿಸಬೇಕೆಂದು ಒತ್ತಾಯಿಸಿದ್ದಾರೆ ಹಾಗೂ ಅಧಿಕಾರಿಗಳ ಕರ್ತವ್ಯ ಲೋಪವನ್ನು ಡಾ.ರಫೀಕ್ ಅಹ್ಮದ್ ರವರು ಖಂಡಿಸಿದ್ದಾರೆ.