ತುಮಕೂರಿನ ಹಳೆ ಸಿದ್ಧಿ ವಿನಾಯಕ ಮಾರುಕಟ್ಟೆಯಲ್ಲಿ ಇದ್ದ ದೇವಸ್ಥಾನವನ್ನು ಕಳೆದ ರಾತ್ರಿ ತುಮಕೂರು ಮಹಾನಗರ ಪಾಲಿಕೆಯ ಕಮಿಷನರ್ ನೇತೃತ್ವದಲ್ಲಿ ರಾತ್ರಿ ತೆರವು ಕಾರ್ಯಾಚರಣೆಯನ್ನು ಕೈಗೊಂಡಿದ್ದರು ಇದರ ವಿರುದ್ಧ ತುಮಕೂರಿನ ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವರಾದ ಸೊಗಡು ಶಿವಣ್ಣ ಪಾಲಿಕೆಯ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲವು ವರ್ಷಗಳಿಂದ ಈ ಜಾಗದಲ್ಲಿ ಇದ್ದ ದೇವಸ್ಥಾನಕ್ಕೆ ಪುರೋಹಿತರು ಹಾಗೂ ಸಾರ್ವಜನಿಕರ ನೇತೃತ್ವದಲ್ಲಿ ಪ್ರತಿದಿನ ಪೂಜೆ ಸಲ್ಲಿಸಲಾಗುತ್ತಿತ್ತು ಹಾಲಿ ಸ್ಥಳದಲ್ಲಿ ಇದ್ದ ದೇವಸ್ಥಾನ ಈಗ ಎಪಿಎಂಸಿ ಹಾಗೂ ಕಾರ್ಪೊರೇಷನ್ ಇಬ್ಬರಿಗೂ ಸೇರಿದ ಜಾಗವಾಗಿದ್ದು ಇದಕ್ಕೆ ಸಂಬಂಧಿಸಿದಂತೆ ಹಳೆ ಮಾರುಕಟ್ಟೆಯಲ್ಲಿ ಇದ್ದ ದೇವಸ್ಥಾನವನ್ನು ಯಾರಿಗೂ ತಿಳಿಸದೆ ನೋಟಿಸ್ ನೀಡದೆ ರಾತ್ರೋರಾತ್ರಿ ದೇವಸ್ಥಾನ ತರವು ಕಾರ್ಯಾಚರಣೆ ಕೈಗೊಳ್ಳಲಾಗಿತ್ತು ಇದರ ಮಾಹಿತಿ ಅರಿತ ಮಾಜಿ ಸಚಿವರು ಸ್ಥಳಕ್ಕೆ ಭೇಟಿ ನೀಡುವ ವೇಳೆ ಪಾಲಿಕೆ ಅಧಿಕಾರಿಗಳು ಹಾಗೂ ಜೆಸಿಬಿ ಯಂತ್ರದೊಂದಿಗೆ ನಾವು ಅಲ್ಲಿಗೆ ತೆರಳುವ ವೇಳೆಗೆ ಎಲ್ಲರೂ ಪಲಾಯನ ಮಾಡಿದ್ದಾರೆ ಎಂದು ಶಿವಣ್ಣ ಆರೋಪಿಸಿದ್ದಾರೆ.
ಇನ್ನು ಕೂಡಲೇ ಜಿಲ್ಲಾಧಿಕಾರಿಗಳು ,ಪೊಲೀಸ್ ಅಧಿಕಾರಿಗಳು ಹಾಗೂ ಉಸ್ತುವಾರಿ ಸಚಿವರ ಗಮನಕ್ಕೆ ತಂದಿರುವುದಾಗಿ ತಿಳಿಸಿದ ಮಾಜಿ ಸಚಿವ ಸೊಗಡು ಶಿವಣ್ಣ, ದೇವಸ್ಥಾನದ ಮೂರ್ತಿಗಳಿಗೆ ಧಕ್ಕೆಯುಂಟಾಗಿದ್ದು ಹಲವು ಆಭರಣಗಳು ಕಾಣುತ್ತಿಲ್ಲ ಹಾಗೂ ದೇವಸ್ಥಾನ ತೆರವಿಗೆ ಬಂದಿರುವುದು ಅಕ್ಷಮ್ಯ ಅಪರಾಧ, ಪಾಲಿಕೆಯ ಅಧಿಕಾರಿಗಳು ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳು ತುಮಕೂರು ನಗರದ ಜನತೆಯ ಭಾವನೆಗಳಿಗೆ ಪದೇಪದೇ ದಕ್ಕೆ ಉಂಟು ಮಾಡುತ್ತಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಒಳಗಾಗಿದ್ದಾರೆ ಎಂದು ಸೊಗಡು ಶಿವಣ್ಣ ತಿಳಿಸಿದ್ದಾರೆ .
ಕಳೆದ ರಾತ್ರಿ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಪುರೋಹಿತರನ್ನು ಹೆದರಿಸಿ ಪೂಜೆ ಸಲ್ಲಿಸಿ ನಂತರ ತೆರವು ಮಾಡಿದ್ದಾರೆ ಹಾಗಾದರೆ ಇವರಿಗೆ ತೆರವು ಮಾಡುವ ಅಧಿಕಾರ ಯಾರು ನೀಡಿದರು ಯಾವ ಆದೇಶದ ಮೇಲೆ ತೆರವು ಮಾಡಿದರು ಹೀಗೆ ಆದರೆ ನಮ್ಮ ದೇಶದ ನಾಗರಿಕರ ಪಾಡೇನು, ಹಾಗಾಗಿ ಪದೇಪದೇ ಸಾರ್ವಜನಿಕರ ಭಾವನೆಗಳಿಗೆ ದಕ್ಕೆ ಉಂಟಾಗುತ್ತಿದೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಬೇಕು, ಇದಕ್ಕೆ ಸಂಬಂಧಿಸಿದಂತೆ ನಾವುಗಳು ಕೂಡಲೇ ಪಾಲಿಕೆ ಅಧಿಕಾರಿಗಳ ವಿರುದ್ಧ ಪೊಲೀಸ್ ಠಾಣೆಗೆ ತೆರಳಿ ದೂರು ನೀಡುತ್ತಿರುವುದಾಗಿ ಸೊಗಡು ಶಿವಣ್ಣ ತಿಳಿಸಿದ್ದಾರೆ.