ಬೆಂಗಳೂರು : ಬೆಂಗಳೂರಿನಲ್ಲಿ ಬಿಜೆಪಿ ಎಂಎಲ್ಸಿ ಎಚ್ ವಿಶ್ವನಾಥ್ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಕೆಲವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ, ನೀರಾವರಿ ಇಲಾಖೆಯ 20 ಸಾವಿರ ಕೋಟಿ ಟೆಂಡರ್ ನಲ್ಲಿ ಭಾರಿ ಅಕ್ರಮ, ಭದ್ರಾಮೇಲ್ದಂಡೆ ಇದರಲ್ಲಿ ಅಕ್ರಮ ನಡೆದಿದೆ ಸಂಬಂಧಪಟ್ಟ ದಾಖಲೆ ರಿಲೀಸ್ ಮಾಡಿದ ಎಚ್ ವಿಶ್ವನಾಥ್ ಮತ್ತು ಕಾವೇರಿ ನೀರಾವರಿ ನಿಗಮ ಯೋಜನೆಯಲ್ಲಿ ಅಕ್ರಮ ವಾಗಿದೆ, ಯಡಿಯೂರಪ್ಪ ಪುತ್ರ ವಿಜಯೇಂದ್ರ ಇದರ ಮಧ್ಯೆ ಪ್ರವೇಶಿಸಿರುವುದು ಏಕೆ ಇವರ ವಿರುದ್ಧ ಇಡಿಯಲ್ಲಿ ಪ್ರಕರಣ ಇದೆ ಆದರೂ ಮುಂದುವರಿದಿದ್ದಾರೆ, ಎಲ್ಲಾ ಇಲಾಖೆಯಲ್ಲಿ ಹಸ್ತಕ್ಷೇಪ ವಿದೆ, ಯಡಿಯೂರಪ್ಪ ಮಕ್ಕಳಿಂದ ಜೈಲಿಗೆ ಹೋಗಿದ್ದರು, ಮತ್ತೆ ಅವರು ಜೈಲಿಗೆ ಹೋಗಬಾರದು ಎಂದು ನಮ್ಮ ಆತಂಕ, ಗುತ್ತಿಗೆದಾರರ ಕೇಂದ್ರೀಕೃತವಾದ ಸರ್ಕಾರ ಹಾಗಿದೆ, ನಿನ್ನೆ ಇವರ ವಿರುದ್ದ ಮಾತನಾಡಿದ ಕೆಲವರಿಗೆ ಅವರುಗಳ ಬಗ್ಗೆ ಟಾಂಗ್ ಕೊಟ್ಟರು, ನಾನು ಎಲ್ಲವನ್ನು ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಅವರ ಬಳಿ ಎಲ್ಲವನ್ನು ಹೇಳಿದ್ದೇನೆ,ಆದರೆ ಅವರು ಹೊರಬಂದು ಹೇಳುವುದೇ ಬೇರೆ ಆಗಿದೆ ಎಂದು ಈಗತಾನೆ ಮಾಧ್ಯಮದ ಮುಂದೆ ಬೆಂಗಳೂರಿನಲ್ಲಿ ಮಾತನಾಡಿದರು.
ಬಿಜೆಪಿ ಸರ್ಕಾರ ಕಾಂಟ್ರಾಕ್ಟ್ ಓರಿಯೆಂಟೆಡ್ ಸರ್ಕಾರನ? ಇನ್ನು ಬಿವೈ ವಿಜಯೇಂದ್ರ ಎಲ್ಲ ಇಲಾಖೆಗಳನ್ನು ಹಸ್ತಕ್ಷೇಪ ನಡೆಸುತ್ತಿದ್ದರಿಂದ ಸಚಿವರು ಸ್ವತಂತ್ರವಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ.
ಎಂದು ದಾಖಲೆ ಸಮೇತ ಇಂದು ಪತ್ರಿಕಾಗೋಷ್ಠಿ ನಡೆಸುವ ಮೂಲಕ ಮತ್ತೆ ವಾಗ್ದಾಳಿ ನಡೆಸಿದ್ದು ಬಿಜೆಪಿ ಪಾಳಯಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಇನ್ನು ಬಿಜೆಪಿ ವರಿಷ್ಠರು ಸರ್ಕಾರಕ್ಕೆ ಮುಜುಗರವಾಗುವ ರೀತಿ ಯಾರು ಕೂಡ ಹೇಳಿಕೆ ನೀಡದಂತೆ ನಿರ್ದೇಶನ ನೀಡಿದ್ದರು ಎಂದು ಹೆಚ್ ವಿಶ್ವನಾಥ್ ರವರು ನಡೆಸಿರುವ ಪತ್ರಿಕಾಗೋಷ್ಠಿ ಎಲ್ಲರ ಹುಬ್ಬೇರುವಂತೆ ಮಾಡಿದೆ .ಇನ್ನೂ ಯಾವ ರೀತಿ ಪಕ್ಷದ ವರಿಷ್ಠರು ಹೆಜ್ಜೆ ಇಡುತ್ತಾರೆ ಎಂದು ಕಾದುನೋಡಬೇಕಾಗಿದೆ.