ಬಲಿಜ ಸೇವಾ ಸಮಿತಿ ವತಿಯಿಂದ ಬಲಿಜ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ.

 

ಮಧುಗಿರಿ : ಸಮುದಾಯದವರು ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ತಾಲೂಕು ಬಲಿಜ ಸಂಘದ ಅಧ್ಯಕ್ಷ ಎಂ.ಎಸ್.ಶಂಕರನಾರಾಯಣ್(ಜಗ್ಗಣ್ಣ) ತಿಳಿಸಿದರು.

ಪಟ್ಟಣದ ಎಂ.ಎಸ್. ರಾಮಯ್ಯ ಸಮುದಾಯ ಭವನದಲ್ಲಿ ಬಲಿಜ ಸೇವಾ ಸಮಿತಿ ವತಿಯಿಂದ ಬಲಿಜ ಸಮುದಾಯದ ಬಡ ಕುಟುಂಬಗಳಿಗೆ ದಿನಸಿ ಕಿಟ್ ಗಳನ್ನು ವಿತರಿಸಿ ಮಾತನಾಡಿದ ಅವರು, ನಮ್ಮ ಸಮುದಾಯದ ವಿಧ್ಯಾರ್ಥಿಗಳ ಶಿಕ್ಷಣಕ್ಕಾಗಿ ಎಂ.ಎಸ್.ರಾಮಯ್ಯ ಕುಟುಂಬದವರು ಪತ್ರಿ ವರ್ಷ ೨೫ ಲಕ್ಷ ರೂ. ಗಳ ವಿಧ್ಯಾರ್ಥಿವೇತನವನ್ನು ನೀಡುತ್ತಿದ್ದಾರೆ. ಇದಲ್ಲದೇ ಉನ್ನತ ಶಿಕ್ಷಣ ಪಡೆಯುವ ವಿಧ್ಯಾರ್ಥಿಗಳಿಗೆ ಎಂ.ಎಸ್.ರಾಮಯ್ಯ ವಿಧ್ಯಾ ಸಂಸ್ಥೆಯಲ್ಲಿ ರಿಯಾಯಿತಿ ನೀಡುತ್ತಿದ್ದಾರೆ. ಬೆಂಗಳೂರು ಹಾಗೂ ತುಮಕೂರು ನಗರಗಳಲ್ಲಿ ಹಾಸ್ಟಲ್ ಸೌಲಭ್ಯವಿದ್ದು ಇದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.

ರಾಜ್ಯ ಸಹಕಾರ ಮಹಮಂಡಳದ ಮಾಜಿ ಅಧ್ಯಕ್ಷ ಎನ್.ಗಂಗಣ್ಣ ಮಾತನಾಡಿ, ಈ ಹಿಂದೆ ನಮ್ಮ ಸುಮದಾಯವನ್ನು ೩ ಎ ಗೆ ಸೇರಿಸಲಾಗಿತ್ತು ಇದರಿಂದ ಉದ್ಯೋಗದಲ್ಲಿ ಮಿಸಲಾತಿ ಸಿಗುತ್ತಿಲ್ಲ ನಮ್ಮ ಸಮುದಾಯವನ್ನು ೨ ಎ ಗೆ ಸೇರ್ಪಡೆ ಮಾಡುವಂತೆ ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದರು.

ಕೃತಜ್ಞತೆಗಳು ಮಧುಗಿರಿ ತಾಲ್ಲೂಕಿನ ಬಲಿಜ ಸಂಘ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಎಂ.ಎಸ್ .ರಾಮಯ್ಯನವರ ಕುಟುಂಬ ವರ್ಗದವರು ಸಹಕರಿಸಿದ್ದರು. ಈ ಸಮಯದಲ್ಲಿ ಅವರಿಗೆ ಕೃತಜ್ಞತೆ ಸಲ್ಲಿಸಿ ಬೆಂಗಳೂರಿನ ಆನೇಕಲ್ ತಿಮ್ಮಯ್ಯ ಟ್ರಸ್ಟ್ ನ ವತಿಯಿಂದ ನಡೆಯುತ್ತಿದ್ದ ಸಂಘ ವು ಸುಮಾರು ಹದಿನೆಂಟು ಕೋಟಿ ರೂ ಸಾಲವನ್ನು ಅಪೆಕ್ಸ್ ಬ್ಯಾಂಕ್ ನಿಂದ ಪಡೆದಿದ್ದರೂ ಈ ಹಣವನ್ನು ಎಂಎಸ್ ರಾಮಯ್ಯ ಕುಟುಂಬದ ಎಂಎಸ್ ಜಯರಾಂ ಮತ್ತು ಎಂಎಸ್ ಸೀತಾರಾಮರು ಸಂಪೂರ್ಣವಾಗಿ ಸ್ವಂತ ಹಣದ ಮೂಲಕ ಪಾವತಿ ಮಾಡಿದ್ದಲ್ಲದೆ ಮಾಜಿ ಶಾಸಕ ಹಾಗೂ ಅಂದಿನ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ ಎನ್ ರಾಜಣ್ಣ ಅವರು ಸುಮಾರು 18ಕೋಟಿ ರೂ ಗಳಷ್ಟು ಬಡ್ಡಿಯನ್ನು ಮನ್ನಾ ಮಾಡಿ ಸಮಾಜದ ಏಳಿಗೆಗೆ ಸಹಕರಿಸಿದ ಇವರೆಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಪುರಸಭೆ ಸದಸ್ಯ ಎಂ.ಆರ್.ಜಗನ್ನಾಥ್ ಮಾತನಾಡಿ, ನಮ್ಮ ಸಮುದಾಯದವರು ಆರ್ಥಿಕವಾಗಿ ಹಿಂದುಳಿದವರಿದ್ದು ಈ ಸಂಕಷ್ಟದ ಸಮಯದಲ್ಲಿ ಕಿಟ್ ಗಳನ್ನು ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತಿದೆ ಮುಂದಿನ ದಿನಗಳಲ್ಲಿ ಬಡ ವಿಧ್ಯಾರ್ಥಿಗಳ ವಿಧ್ಯಾಭ್ಯಾಸಕ್ಕೂ ಸಹಾಯ ಮಾಡುವುದಾಗಿ ತಿಳಿಸಿದರು.

ಪುರಸಭೆ ಮಾಜಿ ಅಧ್ಯಕ್ಷ ಕೆ.ಪ್ರಕಾಶ್ ಮಾತನಾಡಿ, ಸಮಿತಿಯ ಕಾರ್ಯ ಚಟುವಟಿಕೆಗಳು ತಾಲೂಕು ಮಟ್ಟಕ್ಕೂ ವಿಸ್ತರಿಸಲಿ ಎಂದರು.

ಪುರಸಭಾ ಸದಸ್ಯ ಶೋಭರಾಣಿ, ಮುಖಂಡರುಗಳಾದ ಶ್ರೀನಿವಾಸ್, ಆರ್.ಎ.ನಾರಾಯಣ್, ಅನಂತನಾರಾಯಣ್ ಬಾಬು, ಎಂ.ಜಿ.ಮoಜುನಾಥ್, ಎಂ.ಜಿ.ಉಮೇಶ್, ಎಸ್.ಬಿ.ಟಿ.ರಾಮು, ಲಕ್ಷ್ಮಿ ನಾರಾಯಣ್, ವೆಂಕಟರಂಗಾರೆಡ್ಡಿ, ಸಮಿತಿಯ ಸಂಚಾಲಕ ಟಿ.ಪ್ರಸನ್ನಕುಮಾರ್, ಉಮೇಶ್, ಮೂರ್ತಪ್ಪ, ಗುತ್ತಿಗೆದಾರ ಬಾಲಾಜೀ,ದೋಲಿಬಾಬು ಇದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!