ಕ್ಷೇತ್ರದ ಜನತೆಗೆ ಓಳಿತಾಗಲಿ: ಕ್ರಿಬ್ಕೋ ನಿರ್ದೇಶಕ ಆರ್ ರಾಜೇಂಧ್ರ

 

ಮಧುಗಿರಿ: ಮಳೆಗಾಲ ಆರಂಭವಾಗಿದ್ದು ಕೊರೋನಾ ಎರಡನೇ ಅಲೆ ಜನಸಾಮಾನ್ಯರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಕ್ಷೇತ್ರದ ಜನತೆಗೆ ಓಳಿತಾಗಲಿ ಎಂದು ಇಂದು ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದು ರಾಷ್ಟ್ರೀಯ ಕ್ರಿಬ್ಕೋ ನಿರ್ದೇಶಕ ಆರ್. ರಾಜೇಂದ್ರ ತಿಳಿಸಿದರು.

 

ತಾಲೂಕಿನ ಕೊಂಡವಾಡಿ ಗ್ರಾಮ ದೇವತೆ ಬನಶಂಕರಿ ದೇವಿ ಹಾಗೂ ಕಾಟಮಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು. ಧಾರ್ಮಿಕ ಕ್ಷೇತ್ರವಾಗಿರುವ ಕೊಂಡವಾಡಿಯಲ್ಲಿ ಕರೋನಾದಿಂದ ಕಳೆದ ಎರಡು ವರ್ಷಗಳಿಂದ ಜಾತ್ರೆ ನಡೆಯದ ಕಾರಣ ಭಕ್ತರಲ್ಲಿ ನಿರಾಸೆ ಉಂಟಾಗಿದೆ. ಕೊರೋನಾ ರಾಷ್ಟ್ರವ್ಯಾಪ್ತಿಯಲ್ಲಿ ಸದ್ದು ಮಾಡುತ್ತಿದ್ದು ಪ್ರಜ್ಞಾವಂತರು ಆಯಾ ಗ್ರಾಮಗಳಲ್ಲಿ ಪ್ರತಿಯೊಬ್ಬರಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಅರಿವು ಮೂಡಿಸಬೇಕು. ಮುಂದಿನ ದಿನಗಳಲ್ಲಿ ಹಿಂದಿನಂತೆ ಧಾರ್ಮಿಕ ಕಾರ್ಯಕ್ರಮಗಳು ಜಾತ್ರೆಗಳು ನಡೆಯಲಿ ಎಂದು ಆಶಯ ವ್ಯಕ್ತಪಡಿಸಿದರು.

 

 

ತಾಲೂಕಿನಲ್ಲಿ ಬರಗಾಲ ತಾಂಡವಾಡುತ್ತಿದ್ದು ಕ್ಷೇತ್ರದ ಜನತೆಗೆ ಓಳಿತು ಮಾಡಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿಲಾಗಿದೆ. ಕಲ್ಪತರು ನಾಡಿನಲ್ಲಿ ಪ್ರತಿ ಹೋಬಳಿಗೊಂದು ಡಿಸಿಸಿ ಬ್ಯಾಂಕ್ ಮತ್ತು ಪ್ರತಿ ಗ್ರಾಪಂಗೆ ಒಮದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸ್ಥಾಪಿಸುವುದು ಸಹಕಾರಿ ರತ್ನ ಕೆ.ಎನ್ ರಾಜಣ್ಣನವರ ಗುರಿಯಾಗಿದೆ. ಸಹಕಾರಿ ಕ್ಷೇತ್ರದಲ್ಲಿ ತುಮಕೂರು ಜಿಲ್ಲೆ ಮಾಧರಿಯಾಗಿದೆ. ಸಹಕಾರಿ ಕ್ಷೇತ್ರವು ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ಗ್ರಾಮೀಣಾ ಪ್ರದೇಶದ ರೈತರ ಪರವಾಗಿ ಕೆಲಸ ಮಾಡಿ ಪ್ರಗತಿ ಸಾಧಿಸಲಿದೆ ಎಂದರು.

 

ಮಳೆಗಾಲ ಆರಂಭವಾಗಿದ್ದು ಕಳೆದ ವರ್ಷಕ್ಕಿಂತ ಈ ವರ್ಷ ಮಳೆ ಪ್ರಮಾಣ ಕಡಿಮೆಯಾಗಿದ್ದು ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ರೈತರು ದೃತಿಗೆಡಬಾರದು. ಲಾಖ್ ಡೌನ್ ಮುಗಿದು ಕೋವಿಡ್ ನಿಯಂತ್ರಣಕ್ಕೆ ಬಂದ ನಂತರ ಕರೋನಾ ಇಂದ ಮೃತಪಟ್ಟವರ ಮನೆ ಖುದ್ಧು ರಾಜಣ್ಣನವರು ಭೇಟಿ ನೀಡಿ ಸಾಂತ್ವಾನ ಹೇಳುವ ಕೆಲಸ ಮಾಡಲಿದ್ದಾರೆ.ಕಾಂಗ್ರೇಸ್ ಪಕ್ಷ ಮತ್ತು ಕೆ.ಎನ್ ರಾಜಣ್ಣನವರು ಸದಾ ಕ್ಷೇತ್ರದ ಜನತೆ ಪರವಾಗಿ ಇರುತ್ತಾರೆ ಎಂದರು.

 

ಎಪಿಎಂಸಿ ಉಪಾಧ್ಯಕ್ಷ ರಾಜಕುಮಾರ್ ಮಾತನಾಡಿ ಕೋವಿಡ್ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಬಡವರಿಗೆ ಅನ್ನದಾಸೋಹ ಮಧುಗಿರಿ ಕ್ಷೇತ್ರದಲ್ಲಿ ಆಂಬುಲೆನ್ಸ್ ಸೇವೆಯನ್ನು ಉಚಿವಾಗಿ ನೀಡಿರುವ ಕ್ರಿಬ್ಕೋ ನಿರ್ದೇಶಕ ನಮ್ಮ ಗ್ರಾಮಕ್ಕೆ ಮೊದಲ ಬಾರಿ ಭೇಟಿ ನೀಡಿದ್ದು ಅವರ ಸೇವೆ ನಮಗೆಲ್ಲಾ ಮಾರ್ಗದರ್ಶನವಾಗಿದೆ ಮುಂದಿನ ದಿನಗಳಲ್ಲಿ ನಾವೆಲ್ಲಾ ಸೇರಿ ಅವರಿಗೆ ರಾಜಕೀಯವಾಗಿ ಶಕ್ತಿ ತುಂಬ ಕೆಲಸ ಮಾಡುತ್ತೇವೆ ಎಂದರು. ನಂತರ ಕೆ.ಎನ್.ಆರ್ ಅಭಿಮಾನಿಯೊಬ್ಬರ ಮದುವೆಯಲ್ಲಿ ಭಾಗವಹಿಸಿ ನವ ದಂಪತಿಗಳಿಗೆ ಶುಭ ಹಾರೈಸಿದರು.

 

ಈ ಸಂದರ್ಭದಲ್ಲಿ ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಬಿ ನಾಗೇಶ್ ಬಾಬು, ಎಪಿಎಂಸಿ ನಿರ್ದೇಶಕಿ ರಮಾಬಾಯಿ, ನಿವೃತ್ತ ಪಿಎಸೈ ನಾಗಣ್ಣ, ಮಾಜಿ ತಾಪಂ ಸದಸ್ಯ ತಿಪ್ಪಯ್ಯ, ಹುಣಸವಾಡಿ ಮಲ್ಲಿಕಾರ್ಜುನ್, ವಿಎಸ್ಸೆಸ್ಸೆಎನ್ ಅಧ್ಯಕ್ಷ ಶಿವಶಂಕರ್, ನಿರ್ದೇಶಕ ಅಶ್ವತ್ಥಯ್ಯ, ಗ್ರಾಪಂ ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷೆ ಸಾಕಮ್ಮ, ಗ್ರಾಪಂ ಸದಸ್ಯರಾದ ರವಿ ಕುಮಾರ್, ವಿನಯ್, ಕುಮಾರ್, ಶಂಕರ್, ರಾಘವೇಂಧ್ರ, ಅನ್ನಪೂರ್ಣ ಜಗದೀಶ್, ಕಾಂತರಾಜು, ಸಿದ್ದೇಶ್, ಮುದ್ದರಂಗಪ್ಪ, ಮಾಜಿ ಗ್ರಾಪಂ ಅಧ್ಯಕ್ಷ ವಿ.ಆರ್ ಭಾಸ್ಕರ್,ಕೋಡ್ಗದಾಲ ನಾಗರಾಜು, ಮುಖಂಡರಾದ ತಿಪ್ಪೇಸ್ವಾಮಿ, ಉಮೇಶ್, ರಾಜೇಂದ್ರ, ರಘುಪತಿ, ಪುನಿತ್, ಅರವಿಂದ್, ರಜನಿಕಾಂತ್, ಮಾಜಿ ಗ್ರಾಪಂ ಅಧ್ಯಕ್ಷ ಪೂಜರಾಹಳ್ಳಿ ರಾಜಶೇಖರ್, ಶರತ್, ಲಕ್ಷ್ಮಿಕಾಂತ್ ಹಾಜರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!