ಮಧುಗಿರಿ : ಪತ್ರಿಕೆ ಹಂಚುವ ಹುಡುಗರ ಬಗ್ಗೆ ಸಮಾಜ ಕಾಳಜಿ ವಹಿಸ ಬೇಕು ಎಂದು ಪಾವಗಡ ರಾಮಕೃಷ್ಣ ಅಧ್ಯಕ್ಷರಾದ ಜಪಾನಂದ ಶ್ರೀಗಳು ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಶ್ರಮ ಮತ್ತು ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಪತ್ರಿಕೆ ಹಂಚುವ ಹುಡುಗರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದ ಅವರು, ಮನೆಯಲ್ಲಿ ಬಡತನ ವಿರುವ ಕಾರಣ ಮಕ್ಕಳು ಪತ್ರಿಕೆ ಹಾಕಲು ಬರುತ್ತಾರೆ ಬೆಳಗಿನ ಜಾವ ಚಳಿ, ಮಳೆ ಎನ್ನದೆ ಪತ್ರಿಕೆಯನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಮಾಡುತ್ತಾರೆ ಆರ್ಥಿಕ ಮುಗ್ಗಟ್ಟಿನಿಂದಾಗಿ ಕೆಲವರು ವಿಧ್ಯಾಭ್ಯಾಸ ವನ್ನು ಅರ್ಧದಲ್ಲೇ ಮೊಟಕುಗೊಳಿಸುತ್ತಿದ್ದು ಇದಕ್ಕೆ ಅವಕಾಶ ಕೊಡದೆ ಅವರ ವಿಧ್ಯಾಭ್ಯಾಸ ಪೂರ್ಣಗೊಳಿಸಲು ಆಶ್ರಮದ ವತಿಯಿಂದ ಎಲ್ಲಾ ಸೌಕರ್ಯಗಳನ್ನು ಕಲ್ಪಿಸಲಾಗುವುದು. ರೋಟರಿಯಂತಹ ಸೇವಾ ಸಂಘ ಸಂಸ್ಥೆಗಳೂ ಸಹಾಯ ಹಸ್ತ ಚಾಚ ಬೇಕು ಎಂದರು.
ತಹಶೀಲ್ಧಾರ್ ವೈ.ರವಿ ಮಾತನಾಡಿ ಪತ್ರಿಕೆ ವಿತರಿಸುವ ಹುಡುಗರು ತಮ್ಮ ವೃತ್ತಿಯ ಬಗ್ಗೆ ಕೀಳರಿಮೆ ಹೊಂದಬಾರದು ನಮ್ಮ ರಾಷ್ಟ್ರ ಪತಿಗಳಾಗಿದ್ದ ಡಾ. ಎ.ಪಿ.ಜೆ.ಅಬ್ದುಲ್ ಕಲಾಮ್ ರವರು ಕೂಡ ಬಾಲಕನಾಗಿದ್ದಾಗ ಪತ್ರಿಕೆ ಹಂಚುತ್ತಾ ವಿಧ್ಯಾಭ್ಯಾಸವನ್ನು ಮುಂದುವರಿಸಿ ಶ್ರೇಷ್ಠ ವಿಜ್ಞಾನಿಗಳಾದರು ನಿಮಗೆಲ್ಲ ಕಲಾಮ್ ರವರು ಮಾದರಿಯಾಗಿದ್ದು ನೀವು ಕೂಡ ಉನ್ನತ ಶಿಕ್ಷಣ ಪಡೆಯಬೇಕು ಎಂದರು.
ರೋಟರಿ ಅಧ್ಯಕ್ಷ ಎಂ.ಶಿವಲಿಂಗಪ್ಪ, ಕಾರ್ಯದರ್ಶಿ ಜಿ.ಜಯರಾಮಯ್ಯ, ಖಜಾಂಚಿ ಎಂ. ವೆಂಕಟರಾಮು, ಯುವ ಮುಖಂಡ ಬಿ.ಎನ್.ನಾಗಾರ್ಜುನ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ಪ್ರಸನ್ನ ಕುಮಾರ್ ಕಾರ್ಯದರ್ಶಿ ಎಂ.ಎಸ್. ಸತೀಶ್, ವಿತರಕರ ಸಂಘದ ಅಧ್ಯಕ್ಷ ಕೆ.ಶೇಖರ್ನಾಯ್ಕ್ ಇದ್ದರು.