ಕನ್ನಡದ ಉದಯೋನ್ಮುಖ ನಟ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ {38} ಹಿಂದೂ 3.34 ಕ್ಕೆ ನಿಧನರಾಗಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಅಪಘಾತಕ್ಕೀಡಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಜಯ ಅವರ ತಲೆಗೆ ತೀವ್ರ ಪೆಟ್ಟಾಗಿ ಕೋಮಾದಲ್ಲಿದ್ದರು ವೈದ್ಯರು ಸಾಕಷ್ಟು ಪ್ರಯತ್ನಪಟ್ಟರೂ ಚಿಕಿತ್ಸೆ ಫಲಕಾರಿಯಾಗದೆ ಹಾಗೂ ಚಿಕಿತ್ಸೆಗೆ ಸ್ಪಂದಿಸದೆ ಇಂದು ಮುಂಜಾನೆ ಅಸುನೀಗಿದ್ದಾರೆ.
ಅವರು ನಟಿಸಿದ “ನಾನು ಅವನಲ್ಲ ಅವಳು” ಚಿತ್ರದ ಅಭಿನಯಕ್ಕೆ ಉತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದರು. ಎರಡು ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದರು.
ಕಳೆದ ಮೂರು ದಿನಗಳ ಹಿಂದೆ ಸಂಭವಿಸಿದ ಬೈಕ್ ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟಾಗಿದ್ದು ಕೋಮಾದಲ್ಲಿದ್ದ ಇವರು ಬದುಕುವ ಲಕ್ಷಣ ಬಹಳ ಕ್ಷೀಣ ಎಂದು ವೈದ್ಯರು ತಿಳಿಸಿದರು. ಇದನ್ನು ಅರಿತ ಅವರ ಕುಟುಂಬಸ್ಥರು ಅವರ ಅಂಗಾಂಗಗಳನ್ನು ದಾನ ನೀಡುವ ಮೂಲಕ ಮಾದರಿಯಾಗಿದ್ದಾರೆ.
ನಾನು ಅವನಲ್ಲ ಅವಳು ,ಕಿಲ್ಲಿಂಗ್ ವೀರಪ್ಪನ್,ಸಿನಿಮಾ ಮೈ ಡಾರ್ಲಿಂಗ್, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಬಲೆ ಜೋಡಿ ,ವರ್ತಮಾನ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದರು.
ಇಂದು ಚಿಕ್ಕಮಂಗಳೂರು ಜಿಲ್ಲೆ ಕಡೂರು ತಾಲೂಕಿನ ಪಂಚನಹಳ್ಳಿ ಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.
ಇನ್ನು ಸಂಚಾರಿ ವಿಜಯ್ ನಿಧನಕ್ಕೆ ರಾಜ್ಯದ ಹಲವು ನಟ-ನಟಿಯರು ಸೇರಿದಂತೆ ಹಲವರು ಸಂಚಾರಿ ವಿಜಯ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಹಲವು ಕನಸುಗಳನ್ನು ಇಟ್ಟು ಬಣ್ಣದ ಲೋಕಕ್ಕೆ ಬಂದಿದ್ದ ನಾಯಕನಟ ಸಂಚಾರಿ ವಿಜಯ್ ಬಹಳ ಉದಯೋನ್ಮುಖ ನಟರಾಗಿದ್ದರು, ಸಂಚಾರಿ ವಿಜಯ್ ನಿಧನಕ್ಕೆ ಕನ್ನಡ ಚಿತ್ರ ಚಿತ್ರರಂಗ ಕಂಬನಿ ಮಿಡಿದಿದೆ.