ಶಾಸಕ ಎಲ್.ಎನ್.ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ
ಪುರಸಭೆಯ ಕೊಠಡಿಯಲ್ಲಿ ಅಧಿಕಾರಿಗಳ ಯೋಗ ಕಸರತ್ತು.
ಬೆಳಿಗ್ಗೆ, ಸಂಜೆ ಸಮಯ ಪ್ರಾಣಯಾಮ ಮಾಡುವುದರಿಂದ ಆರೋಗ್ಯ ಪ್ರಾಪ್ತಿ
ತಜ್ಞ ವಿದ್ಯಸಾಗರ್ ಅವರಿಂದ ಯೋಗ ತರಬೇತಿ, ಹಲವು ಅಧಿಕಾರಿಗಳ ಭಾಗಿ
ದೇವನಹಳ್ಳಿ ಪಟ್ಟಣದ ಪುರಸಭೆಯ ಕೊಠಡಿಯೊಂದರಲ್ಲಿ ಜಿಲ್ಲಾಮಟ್ಟದಲ್ಲಿ ಕೊರೊನಾ ಟ್ರೆಸ್‌ನಿಂದ ಅಧಿಕಾರಿಗಳು ಹೊರಬರಲು ಯೋಗ ತರಬೇತಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಪುರಸಭೆಯ ಕೊಠಡಿಯೊಂದರಲ್ಲಿ ಜಿಲ್ಲಾಮಟ್ಟದ ವಿವಿಧ ಇಲಾಖಾಧಿಕಾರಿಗಳು ಭಾಗಿಯಾಗುವುದರ ಮೂಲಕ ಯೋಗ ತರಬೇತಿಯನ್ನು ತಜ್ಞ ವಿದ್ಯಸಾಗರ್ ಅವರಿಂದ ಪಡೆದುಕೊಂಡರು.
ಶಾಸಕ ಎಲ್.ಎನ್.ನಾರಾಯಣಸ್ವಾಮಿ ಮಾತನಾಡಿ, ಜನರಿಗೆ ಏನು ಮುಖ್ಯ ಆರೋಗ್ಯ-ಆರೋಗ್ಯ ಚೆನ್ನಾಗಿದ್ದರೆ ಸಾಕು. ಕೋವಿಡ್‌ನಿಂದ ಬದುಕುಳಿಯಬೇಕಾದರೆ ಯೋಗಾಭ್ಯಾಸ, ಪ್ರಾಣಯಾಮದಂತಹವುಗಳನ್ನು ಜನರು ಮಾಡುವಂತೆ ಆಗಬೇಕು. ನಮ್ಮ ವೈಯಕ್ತಿಕ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಬೇಕು ಎಂದರು ಎಲ್.ಎನ್.ನಾರಾಯಣಸ್ವಾಮಿ
ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಮಾತನಾಡಿ, ಯೋಗಾಭ್ಯಾಸದಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಆರೋಗ್ಯವಾಗಿರಲು ದಿನನಿತ್ಯ ಯೋಗವನ್ನು ಮಾಡಬೇಕು ಎಂದರು.
ಯೋಗ ತಜ್ಞ ವಿದ್ಯಸಾಗರ್ ಮಾತನಾಡಿ ಪ್ರಾಣಯಾಮದ ಬಗ್ಗೆ ಮಾಹಿತಿ ಮತ್ತು ಅಧಿಕಾರಿಗಳಿಗೆ ತರಬೇತಿ ನೀಡಿದರು.
ಇನ್ನೂ ಈ ವೇಳೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್.ಕೆ.ನಾಯಕ್, ಜಿಲ್ಲಾ ಆಯೂಷ್ ಅಧಿಕಾರಿ ಡಾ.ಹಕೀಬ್, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.
ಗುರುಮೂರ್ತಿ ಬೂದಿಗೆರೆ
8861100990