ದಾಸೋಹ ವ್ಯವಸ್ಥೆಯ ಸಹಕರಿಸಿದವರಿಗೆ ಅಭಿನಂದನೆ ಸಲ್ಲಿಸಿದ ಕ್ರಿಬ್ಕೋ ನಿರ್ದೇಶಕ ಆರ್ರಾಜೇಂದ್ರ

 

ಮಧುಗಿರಿ : ದಾಸೋಹ ವ್ಯವಸ್ಥೆಯನ್ನು ಪಕ್ಷಾತೀತ ಜತ್ಯಾತೀತವಾಗಿ ಕಳೆದ 22 ದಿನಗಳ ಕಾಲ ಯಶಸ್ವಿಯಾಗಿ ನಡೆಸಲು ಸಹಕರಿಸಿದ ಪ್ರತಿಯೊಬ್ಬರಿಗೂ ಅಭಿನಂದನೆಗಳು ಎಂದು ಕ್ರಿಬ್ಕೋ ನಿರ್ದೇಶಕ ಆರ್. ರಾಜೇಂದ್ರ ತಿಳಿಸಿದರು.

ಪಟ್ಟಣದ ಎಂಜಿಎಂ ಫ್ರೌಡಶಾಲೆಯಲ್ಲಿ ಕೆಎನ್‍ಆರ್ ಹಾಗೂ ಆರ್‍ಆರ್ ಅಭಿಮಾನಿ ಬಳಗ ಮತ್ತು ತಾಲ್ಲೂಕು ಕಾಂಗ್ರಸ್ ಸಮಿತಿ ವತಿಯಿಂದ ಕಳೆದ 22 ದಿನಗಳಿಂದ ಆಯೋಜಿಸಿದ್ದ ಉಚಿತ ಊಟ ಹಾಗೂ ನೀರಿನ ವಿತರಣೆಯ ಮುಕ್ತಾಯ ಸಮಾರಂಭದಲ್ಲಿ ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದÀರು, ಮನುಷ್ಯನಿಗೆ ಕಷ್ಟ ಹೇಳಿ ಕೇಳಿ ಬರುವುದಿಲ್ಲಾ ಅಂತಹ ಸಂಧರ್ಭದಲ್ಲಿರುವವರನ್ನು ಕೈ ಹಿಡಿಯುವವರ ಜನರ ಸಂಖ್ಯೆ ಬಹಳ ಕಡಿಮೆ ಇದೆ.

ಕ್ಷೇತ್ರದ ಮಾಜಿ ಶಾಸಕರಾದ ಕೆ.ಎನ್.ರಾಜಣ್ಣ ನವರ ಸೂಚನೆ ಮೇರೆಗೆ ಇಂತಹ ಕಠಿಣ ಪರಿಸ್ಥಿತಿಯಲ್ಲಿ ಜನರಿಗೆ ಅನೂಕೂಲ ಮಾಡಿಕೊಡುವ ಉದ್ದೇಶದಿಂದ ತಾಲ್ಲೂಕಿನಲ್ಲಿನ ಜನರಿಗೆ ಅಭಿಮಾನಿ ಬಳಗದ ಸಹಕಾರದಿಂದ ಕರೊನಾ ನಿಯಂತ್ರಣಕ್ಕಾಗಿ ಹಲವಾರು ಕಾರ್ಯಕ್ರಮ ಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇವೆ.

ಇನ್ನೂ ಉಚಿತವಾಗಿ ನೀರಿನ ಪ್ಯಾಕೆಟ್ ಹಾಗೂ ಊಟದ ವ್ಯವಸ್ಥೆಯ ಕಾರ್ಯಕ್ರಮವನ್ನು ಪ್ರತಿಯೊಬ್ಬರು ಅಭಿನಂದಿಸಿದ್ದಾರೆ. ಮುಂದಿನ ದಿನಗಳಲ್ಲಿ ರಾಜಣ್ಣನವರ ನೇತೃತ್ವದಲ್ಲಿ ಈ ಕಾರ್ಯಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ಅಭಿನಂದಿಸಿ ಗೌರವಿಸಲಾಗುವುದು ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು ಮಾತನಾಡಿ, ಕೆಎನ್ ರಾಜಣ್ಣನವರಿಗೆ ಹಸಿವಿನ ಅರಿವು ಇರುವುದರಿಂದ ಕರೊನಾ ಸಂಕಷ್ಟ ಸಮಯದಲ್ಲಿ ತಾಲ್ಲೂಕಿನ ಜನತೆಗೆ 2 ಅಂಬುಲೈನ್ಸ್, ಮಾಸ್ಕ್, ಸ್ಯಾನಿಟೈಜರ್, ಆಕ್ಸಿಜನ್ ಸಿಲಿಂಡರ್, 35 ಟನ್ ತರಕಾರಿ ಹಾಗೂ 13000 ಜನರಿಗೆ ಊಟದ ವ್ಯವಸ್ಥೆ ಕಲ್ಪಿಸಿಕೊಟ್ಟು ಜನರ ಕಷ್ಟಗಳಲ್ಲಿ ಭಾಗಿಯಾಗಿದ್ದಾರೆ. ಪ್ರತಿ ಕಾರ್ಯಕ್ರಮಗಳಲ್ಲೂ ಅಭಿಮಾನಿಗಳು ಜಾಗರೂಕತೆ ವಹಿಸಿ ಅಚ್ಚುಕಟ್ಟಾಗಿ ಯಶಸ್ವಿಗೊಳಿಸಲು ಸಹಕರಿಸಿದ್ದಾರೆ ಎಂದರು.

ರಾಜ್ಯ ಸಹಕಾರ ಮಹಾ ಮಂಡಲದ ಮಾಜಿ ಅಧ್ಯಕ್ಷ ಎನ್.ಗಂಗಣ್ಣ ಮಾತನಾಡಿ, ಕರೊನಾ 2 ನೇ ಅಲೆಯ ಸಂಧರ್ಭದಲ್ಲಿ ತಾಲ್ಲೂಕಿನ ಜನತೆಗೆ ಕೆಎನ್‍ಆರ್ ಮತ್ತು ಆರ್ ರಾಜೇಂದ್ರ ರವರು ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಮೂಲಕ ಜನರ ಕೈ ಹಿಡಿದು ಧೈರ್ಯ ತುಂಬಿದ್ದಾರೆ. ಕಳೆದ 22 ದಿನಗಳಿಂದ ಪಟ್ಟಣದ 3 ಕಡೆ ಉಚಿತ ಊಟ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಿ ಕೊಟ್ಟು ಅಶಕ್ತರಿಗೆ ನೆರವು ನೀಡಿದ್ದರೆ ಅವರ ಕಾರ್ಯ ಜನಪರವಾಗಿದೆ ಎಂದರು.

ಮುಖಂಡ ಎಂ.ಎಸ್. ಶಂಕರನಾರಾಯಣ ಮಾತನಾಡಿ, ರಾಜಣ್ಣ ನವರು ಶಾಸಕರಾಗಿದ್ದ ಅವಧಿಯಲ್ಲಿ ನಮ್ಮ ಶಾಲೆಗೆ ಅಡುಗೆ ಕೋಣೆ ನಿರ್ಮಾಣಕ್ಕೆ ಅನುದಾನ ನೀಡಿದ್ದರು ಇಂದೂ ನಮ್ಮ ಶಾಲೆಯಲ್ಲಿ ಉಚಿತ ದಾಸೋಹ ವ್ಯವಸ್ಥೆ ಕಾರ್ಯಕ್ರಮಕ್ಕೆ ಚಾಲನೆ ನೀಡಿರುವುದು ನಮಗೆ ಸಾರ್ಥಕವೆನಿಸಿದೆ ಎಂದರು.

ಮಾಜಿ ಪುರಸಭಾಧ್ಯಕ್ಷ ಎಂ.ಕೆ.ನಂಜುಂಡರಾಜು, ಪುರಸಭಾ ಸದಸ್ಯರಾದ ಲಾಲಪೇಟೆ ಮಂಜುನಾಥ್, ಮಂಜುನಾಥ್ ಆಚಾರ್, ಗ್ರಾಪಂ ಅಧ್ಯಕ್ಷ ಪಂಚಾಕ್ಷರಯ್ಯ, ಪಿಕಾರ್ಡ್ ಅಧ್ಯಕ್ಷ ಸೀತರಾಂ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸಿದ್ದಾಪುರ ರಂಗಾಶ್ಯಾಮಣ್ಣ, ಯವ ಕಾಂಗ್ರಸ್ ತಾಲ್ಲೂಕು ಅಧ್ಯಕ್ಷ ಎಸ್.ಡಿ.ಕೆ.ವೆಂಕಟೇಶ್, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ತಿಮ್ಮರಾಜು, ಮಾಜಿ ಪುರಸಭಾ ಸದಸ್ಯ ಎಂ.ಜಿ.ರಾಮು, ಮುಖಂಡರಾದ ಜಿ.ಎಸ್.ಜಗದೀಶ್, ರಘು, ರಾಜೇಶ್, ಮಂಜು,ದೀಪಕ್, ಗಂಗರಾಜು, ನಾಗರಾಜು, ರಾಜೇಶ್ ದೊಡ್ಮನೆ, ಗುತ್ತಿಗೆದಾರ ನಾಗರಾಜು, ಆನಂದ್ ಕೃಷ್ಣ, ಅಬೂಬಕರ್ ಸಿದ್ದಿಕ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನರಸಿಂಹಮೂರ್ತಿ, ಮತ್ತಿತರರು ಇದ್ದರು

ಪೋಟೋ ಶೀರ್ಷಿಕೆ 13 ಮಧುಗಿರಿ 01: ಮಧುಗಿರಿ ಪಟ್ಟಣದ ಎಂಜಿಎಂ ಫ್ರೌಡಶಾಲೆ ಯಲ್ಲಿ ಕೆಎನ್‍ಆರ್. ಹಾಗೂ ಆರ್‍ಆರ್ ಅಭಿಮಾನಿ ಬಳಗ ತಾಲ್ಲೂಕು ಕಾಂಗ್ರಸ್ ಸಮಿತಿ ವತಿಯಿಂದ ಕಳೆದ 22 ದಿನಗಳಿಂದ ಆಯೋಜಿಸಿದ್ದ ಉಚಿತ ಊಟ ವಿತರಣೆ ಕಾರ್ಯಕ್ರಮ ಮುಕ್ತಾಯ ಸಮಾರಂಭದಲ್ಲಿ ಅಭಿಮಾನಿಗಳು ಆರ.ರಾಜೇಂದ್ರರವರನ್ನು ಸನ್ಮಾನಿಸಿದರು.

Leave a Reply

Your email address will not be published. Required fields are marked *

You cannot copy content of this page

error: Content is protected !!