ಸಿದ್ದಲಿಂಗಯ್ಯ ಯಾವುದೇ ಸಮಾಜಕ್ಕೆ ಮೀಸಲಾದ ವ್ಯಕ್ತಿಯಲ್ಲ _ಕೆ ಎನ್ ರಾಜಣ್ಣ

 

ಮಧುಗಿರಿ :ನಾಡೋಜ ಸಿದ್ದಲಿಂಗಯ್ಯ ನವರು ವಿಧಾನ ಪರಿಷತ್ ಸದಸ್ಯರಾಗಿದ್ದ ಸಂದರ್ಭದಲ್ಲಿ ಕಲಾಪದಲ್ಲಿನ ಅವರ ಚರ್ಚೆಯ ನಡಾವಳಿಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಮೂಲಕ ಹೋರಾಟದ ಮನಸ್ಸನ್ನು ಬೆಳಸಬೇಕಾಗಿದೆ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.

ಪಟ್ಟಣದ ಎಂ.ಎನ್.ಕೆ ಸಮುದಾಯಭವನದಲ್ಲಿ ಸೋಮವಾರ ಕೆ.ಎನ್.ಆರ್ ಹಾಗೂ ಆರ್.ಆರ್.ಅಭಿಮಾನಿ ಬಳಗದ ವತಿಯಿಂದ ದರೈಸ್ರೀ ಕಲ್ಚರಲ್ ಟ್ರಸ್ಟ್ ದಲಿತ ಮತ್ತು ಪ್ರಗತಿ ಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಅಯೋಜಿಸಿದ್ದ ದಲಿತ ಕವಿ ಹಾಗೂ ಚಿಂತಕ ನಾಡೋಜ ಡಾ.ಸಿದ್ದಲಿಂಗಯ್ಯ ನವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಿ ಮಾತನಾಡಿದರು, ಸಿದ್ದಲಿಂಗಯ್ಯನವರ ಆಸಕ್ತಿ, ಅಭಿಪ್ರಾಯ, ಭಾವನೆ, ಧ್ಯೇಯ ಧೋರಣೆಗಳನ್ನು ಯುವ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ನಡಾವಳಿಗಳನ್ನು ಪುಸ್ತಕ ರೂಪದಲ್ಲಿ ಮುದ್ರಿಸಿ ಉಚಿತವಾಗಿ ಮಕ್ಕಳಿಗೆ ವಿತರಿಸುವ ಕೆಲಸ ಮಾಡುತ್ತೇನೆ. ಅವರ ಆದರ್ಶ ಹೋರಾಟದ ಮನೋಭಾವ ಮಕ್ಕಳಲ್ಲಿ ಬರುವಂತೆ ಪ್ರೇರೇಪಿಸಬೇಕಿದೆ ಎಂದರು.

ಸಿದ್ದಲಿಂಗಯ್ಯ ನವರು ಯಾವುದೇ ಸಮಾಜಕ್ಕೆ ಸೀಮಿತವಾದ ವ್ಯಕ್ತಿಯಲ್ಲ ಶೋಷಣೆ ವಿರುಧ್ದ ಹೋರಾಡಿ ಅಸಹಾಯಕರನ್ನು ಸಂಘಟಿಸಿ ಅವರಲ್ಲಿ ಧೈರ್ಯ ತುಂಬಿ ಬದುಕು ಕಟ್ಟಿ ಕೊಟ್ಟವರು ಎಂದರು.

ಪ್ರಗತಿ ಪರ ಚಿಂತಕ ಕೊಟ್ಟಶಂಕರ್ ಮಾತನಾಡಿ, ಸಿದ್ದಲಿಂಗಯ್ಯ ನವರು ಹಟ್ಟಿಯ ಭಾμÉಗೆ ಸಾಹಿತ್ಯದ ರೂಪ ಕೊಟ್ಟ ಕ್ರಾಂತಿಕಾರಿ ಕವಿಯಾಗಿದ್ದು ಬುದ್ದನ ತತ್ವ, ಬಸವಣ್ಣ ನವರ ಆದರ್ಶ ಹಾಗೂ ಅಂಬೇಡ್ಕರ್ ರವರ ಸಿದ್ದಾಂತಗಳನ್ನು ಅಳವಡಿಸಿಕೊಂಡು ಬೇರೆ ಬೇರೆ ಅಯಾಮಗಳಲ್ಲಿ ದುಡಿದ ಜನ ಮನದ ಕವಿ ಎಂದರು.

ಸಾಹಿತಿ ಮ.ಲ.ನ ಮೂರ್ತಿ ಮಾತನಾಡಿ, ಸಿದ್ದಾಪುರ ಸಿದ್ಧಲಿಂಗಯ್ಯನವರು ಕನ್ನಡ ಸಾಹಿತ್ಯದ ಜನಮನದ ಕವಿ , ಸಮ ಸಮಾಜದ ಘೋಷಣೆಗಳಲ್ಲಿ ಗುಡುಗು ಸಿಡಿಲಿನ ಶಕ್ತಿಯಿದೆ .ಅವರ ಕವಿತೆಗಳಲ್ಲೂ ಭೂಕಂಪನದ ತಾಕತ್ತಿದ್ದು, ಪ್ರಾಚೀನ ಸಾಮಾಜಿಕ ಧಾರ್ಮಿಕ ವ್ಯವಸ್ಥೆಯನ್ನು ಬುಡಮೇಲು ಮಾಡುವ ಪ್ರಯತ್ನ ಇವರ ಬರಹದಲ್ಲಿ ಕಾಣಬಹುದು ಎಂದರು.

ಭಾμÉಯನ್ನು ಕಠೋರವಾಗಿ ಬಳಸಿದರೂ ಸಿದ್ದಲಿಂಗಯ್ಯ ನವರ ಮನಸ್ಸು ಮೃದುವಾಗಿತ್ತು. ಸಮ ಸಮಾಜ ನಿರ್ಮಾಣದ ಗುರಿ ಹೊಂದಿದ್ದ ಅವರು ಸಮಾಜದಲ್ಲಿನ ತಾರತಮ್ಯ ತೊಲಗಿಸಲು ಹೋರಾಡಿದರು ಎಂದರು.

ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ನಾ ಮಾಲಿಂಗೇಶ್ ಮಾತನಾಡಿ ಗರ್ಭಗುಡಿ ಸಂಸ್ಕøತಿ ಯಿಂದ ಹಿಂದುಳಿದ ವರ್ಗಗಳಲ್ಲಿ ಮೀಸಲಾತಿ ಹೋರಾಟವನ್ನು ತಂದಿಟ್ಟು ಇಂದು ಬಿರುಕು ಉಂಟಾಗಿ ಸಂಘಟನೆಯೊಳಗೆ ಧಕ್ಕೆ ಉಂಟಾಗಿದೆ ಎಂದು ವಿμÁದ ವ್ಯಕ್ತಪಡಿಸಿದರು.

ಮಧುಗಿರಿ ತಾಲ್ಲೂಕಿನ ಸಿದ್ದಾಪುರ ಬಳಿಯಿರುವ ದರ್ಗಾದ ಸ್ಥಳ ಐತಿಹ್ಯವನ್ನು ಕುರಿತಂತೆ ವಿಡಂಬನಾತ್ಮಕವಾಗಿ ಕತ್ತೆ ಮತ್ತು ಧರ್ಮ ಎಂಬ ಕವಿತೆಯನ್ನು ರಚಿಸಿ ಸ್ಥಳೀಯ ಐತಿಹ್ಯವನ್ನು ಕುರಿತು ಮೌಡ್ಯವನ್ನು ವಿಡಂಬಿಸಿದ್ದಾರೆಂದು ಉಪನ್ಯಾಸಕ ಬಂದ್ರೆಹಳ್ಳಿ ಕುಮಾರ್ ತಿಳಿಸಿದರು.

ತಹಶೀಲ್ಧಾರ್ ವೈ.ರವಿ, ರಾಜ್ಯ ಸಹಕಾರ ಮಹಾಮಂಡಲದ ಮಾಜಿ ಅಧ್ಯಕ್ಷ ಎನ್. ಗಂಗಣ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್‍ಬಾಬು. ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ, ಉಪನ್ಯಾಸಕ ರಂಗಪ್ಪ, ಪೆÇ್ರೀ.ಸಿ.ಕೃಷ್ಣಪ್ಪ, ಜಿ.ಪಂ.ಮಾಜಿ ಸದಸ್ಯ ಎಸ್.ಡಿ. ಕೃಷ್ಣಪ್ಪ, ತಾ.ಪಂ. ಮಾಜಿ ಸದಸ್ಯ ರಂಗನಾಥ್, ಸರ್ವಜ್ಞ ವೇದಿಕೆಯ ಅಧ್ಯಕ್ಷ ವೆಂಕಟರಮಣಪ್ಪ, ಉಪನ್ಯಾಸಕ ರಾಮಚಂದ್ರಪ್ಪ, ಕ.ಸಾ.ಪ ಮಹಿಳಾ ಅಧ್ಯಕ್ಷೆ ಬಿ.ಜಿ.ಶಾಂತಮ್ಮ, ಮುಖಂಡರಾದ ಕಣಿಮಯ್ಯ, ಚಿಕ್ಕಮ್ಮ, ಸಂಜೀವಯ್ಯ ಜೀವಕ ಮಂಜುನಾಥ್, ಮಾದಿಗ ದಂಡೊರ ತಾಲೂಕು ಅಧ್ಯಕ್ಷ ಸಿದ್ದಾಪುರ ರಂಗಶ್ಯಾಮಯ್ಯ, ಇದ್ದರು.

ಪೆÇೀಟೋ ಶೀರ್ಷಿಕೆ 14 ಮಧುಗಿರಿ 01 : ಮಧುಗಿರಿ ಪಟ್ಟಣದ ಎಂ.ಎನ್.ಕೆ ಸಮುದಾಯಭವನದಲ್ಲಿ ನಡೆದ ದಲಿತ ಕವಿ ಹಾಗೂ ಚಿಂತಕ ಡಾ.ಸಿದ್ದಲಿಂಗಯ್ಯ ಅವರಿಗೆ ಮಾಜಿ ಶಾಸಕ ಕೆ.ಎನ್.ರಾಜಣ್ಣ ಹಾಗೂ ಮುಖಂಡರು ನುಡಿ ನಮನ ಸಲ್ಲಿಸಿದರು.

Leave a Reply

Your email address will not be published. Required fields are marked *

You cannot copy content of this page

error: Content is protected !!