ಇಂದು ತುಮಕೂರು ನಗರದ ದಿಬ್ಬೂರು ದೇವರಾಜು ಅರಸು ಬಡಾವಣೆಯ ಗೃಹ ಮತ್ತು ಬೀಡಿ ಕಾರ್ಮಿಕರಿಗೆ ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಹಾಗೂ ಸ್ಲಂ ಜನಾಂದೋಲನಾ ಕರ್ನಾಟಕ ಮತ್ತು ಎಪಿಪಿಐ ಬೆಂಬಲದೊoದಿಗೆ ದಿನಸಿಕಿಟ್ ವಿತರಣೆ ಮಾಡಲಾಯಿತು.
ಆಹಾರ ಕಿಟ್ ವಿತರಿಸಿ ಮಾತನಾಡಿದ ಸ್ಲಂ ಜನಾಂದೋಲನಾ ಕರ್ನಾಟಕ ಸಂಚಾಲಕರಾದ ಎ,ನರಸಿಂಹಮೂರ್ತಿ ಕೊರೊನಾ ೨ನೇ ಅಲೆ ಲಾಕ್ ಡೌನ್ ಸಂಕಷ್ಟಕ್ಕೆ ಸಿಲುಕಿರುವ ಗೃಹ ಕಾರ್ಮಿಕರಿಗೆ ಇಂದು ಮನೆಗಳಿಗೆ ಬಿಟ್ಟಿಕೊಳ್ಳದಿರುವುದರಿಂದ ಕಳೆದ ಎರಡು ತಿಂಗಳಿನಿoದ ಸಂಕಷ್ಟಕ್ಕೆ ಸಿಲುಕಿರುತ್ತಾರೆ ಮನೆಯ ಮಾಲೀಕರು ಕೆಲಸ ನೀಡದಿರುವಿದರಿಂದ ಸಾಕಷ್ಟು ಗೃಹಕಾರ್ಮಿಕರು ಸಮಸ್ಯೆಗೆ ಸಿಲುಕಿದ್ದು ಮೈಕ್ರೋಫೈನಾನ್ಸ್ ಕಂಪನಿಗಳಿoದ ಪಡೆದಿರುವ ಸಾಲದ ಕಂತುಗಳನ್ನು ತೀರಿಸಲಾಗದೇ ಕೂಲಿಯೂ ಸಿಗದೇ ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿದ್ದು ಅನ್ಲಾಕ್ ಪ್ರಾರಂಭವಾದರು ಗೃಹಕಾರ್ಮಿಕರಿಗೆ ಕೆಲಸಕ್ಕೆ ಸೇರಿಸಿಕೊಳ್ಳುವುದು ಅನುಮಾನ ಇನ್ನು ರಾಜ್ಯ ಸರ್ಕಾರ ಘೋಷಿಸಿರುವ ಆರ್ಥಿಕ ಪ್ಯಾಕೇಜ್ ಪಡೆಯಲು ಕಾರ್ಮಿಕ ಇಲಾಖೆಯ ಗುರುತಿನ ಚೀಟಿಗಳೇ ಇರುವುದಿಲ್ಲ ಬೀಡಿ ಕಾರ್ಮಿಕರ ಕನಿಷ್ಠ ಕೂಲಿ ಸಿಗದೇ ಲಾಕ್ಡೌನ್ ನಿಂದ ಬೀಡಿ ಮಾಲಿಕರು ಸರಿಯಾಗಿ ಕೂಲಿ ನೀಡದಿರುವುದರಿಂದ ಇವರು ಸಹ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವೊಂದು ಧಾನಿಗಳಿಂದ ಈಗಾಗಲೇ ಚಿಂದಿ ಆಯುವವರಿಗೆ ದಿನಸಿ ಕಿಟ್ಗಳನ್ನು ದೊರಕಿಸಿ ಕೊಡಲಾಗಿದೆ. ೨ನೇ ಅಲೆ ಇಳಿಕೆಯಾಗುತ್ತಿದ್ದು ನಾವು ಮೈಮರೆತರೆ ೩ನೇ ಅಲೆಯಲ್ಲಿ ಮಕ್ಕಳ ಮೇಲೆ ಪರಿಣಾಮ ಬೀರುವುದರಿಂದ ಇದರಿಂದ ಪಾರಾಗಬೇಕೆಂದರೆ ಪ್ರತಿಯೋಬ್ಬರು ಮಾಸ್ಕ್ ,ದೈಹಿಕ ಅಂತರ ಹಾಗೂ ಲಸಿಕೆ ಪಡೆಯುವುದನ್ನು ಕಡ್ಡಾಯವಾಗಿ ಪಾಲಿಸಬೇಕೆಂದರು.
ದಿನಸಿ ಕಿಟ್ ಪಡೆದ ಬೀಡಿ ಕಾರ್ಮಿಕರಾದ ನಸ್ರೀನ್ತಾಜ್ ೨ ತಿಂಗಳಿoದ ಬೀಡಿ ಕಾರ್ಮಿಕರನ್ನು ಯಾರು ಕೂಡ ಬಂದು ಸಂಕಷ್ಟ ಕೇಳಲಿಲ್ಲ ಆದರೆ ತುಮಕೂರು ಜಿಲ್ಲಾ ಕೊಳಗೇರಿ ಸಮಿತಿ ಹಾಗೂ ಎಪಿಪಿಐ ಸಂಸ್ಥೆ ನಿಜಕ್ಕೂ ನಮ್ಮಂತ ಬಡವರಿಗೆ ಆಹಾರ ಕಿಟ್ ವಿತರಿಸಿ ಇನ್ನೂ ೧೫ ದಿನಗಳ ಕಾಲ ಹಸಿವಿನಿಂದ ಬಳಲುವ ತೊಂದರೆಯಿoದ ಪಾರು ಮಾಡಿದೆ. ರಾಜಕೀಯ ಪಕ್ಷಗಳು ಬರಿ ಎಲೆಕ್ಷನ್ ಸಂದರ್ಭದಲ್ಲಿ ಜನರನ್ನು ಬಂದು ಮತ ಬಿಕ್ಷೆ ಕೇಳುತ್ತಾರೆ ಆದರೆ ಜನರು ಹಸಿವಿನಿಂದ ಇದಾರೆ ಎಂದು ದಿಬ್ಬೂರಿಗೆ ಒಬ್ಬರೂ ಬಂದು ನೋಡಿರಲಿಲ್ಲ ನಮಗೆ ದಿನಸಿ ಕಿಟ್ ನೀಡಿದಕ್ಕೆ ಸ್ಲಂ ಸಮಿತಿಗೆ ತುಂಬಾ ಅಭಿನಂದನೆಗಳು ಎಂದರು.
ಈ ಸಂದರ್ಭದಲ್ಲಿ ತುಮಕೂರು ಸ್ಲಂ ಸಮಿತಿಯ ಕಣ್ಣನ್, ಅರುಣ್, ಶಂಕರಯ್ಯ ತಿರುಮಲಯ್ಯ, ಮೋಹನ್.ಟಿಆರ್, ಚಕ್ರಪಾಣಿ,ಶೃತಿ,ಪದ್ಮ, ಸುಬ್ಬ ಮುಂತಾದವರು ಪಾಲ್ಗೊಂಡಿದ್ದರು.