ತುಮಕೂರು ನಗರದ ನಿಕಟಪೂರ್ವ ಶಾಸಕರಾದ ಡಾ.ರಫೀಕ್ ಅಹ್ಮದ್ ರವರು ಇಂದು ಕೊಳಗೇರಿಗಳಲ್ಲಿ ಜಾಗೃತಿ ಮೂಡಿಸಿ ಸೋಂಕಿನ ಪ್ರಮಾಣ ಇಳಿಕೆಗೆ ಶ್ರಮಿಸಿದ ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯ ಕಾರ್ಯಕರ್ತರಿಗೆ ಹಾಗೂ ಸಂಪಾಧನೆ ಮಠದ ಸ್ಲಂ ನಿವಾಸಿಗಳಿಗೆ ದಿನಸಿ ಕಿಟ್ ನೀಡಿದ್ದಾರೆ.
ದಿನಸಿ ಕಿಟ್ ವಿತರಿಸಿ ಮಾತನಾಡಿದ ಡಾ.ರಫೀಕ್ ಅಹ್ಮದ್ ತುಮಕೂರು ಕೊಳಗೇರಿ ಸಮಿತಿ ಕಾರ್ಯಕರ್ತರ ತಂಡ ಕೊರೊನಾ ೨ನೇ ಅಲೆಯಲ್ಲಿ ತನ್ನ ಸಮುದಾಯಗಳನ್ನು ರಕ್ಷಿಸಿಕೊಳ್ಳಲು ಹಗಲಿರುಳು ಶ್ರಮಿಸಿದ್ದು ಇದರಿಂದ ಹಲವಾರು ಸ್ಲಂಗಳಲ್ಲಿ ಸೋಂಕಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ ಸಂಕಷ್ಟದಲ್ಲಿರುವ ಬಡವರಿಗೆ ಮತ್ತು ಸೋಂಕಿಗೆ ಒಳಪಟ್ಟರವರಿಗೆ ಜಾಗೃತಿ ಮೂಡಿಸಿ ಲಸಿಕೆಗಳನ್ನು ಪಡೆಯುವಂತೆ ಮಾಡಿರುವುದು ಪ್ರಶಂಸನೀಯ ಹಸಿವಿನಿಂದಿರುವವರಿಗೆ ಆಹಾರ ಕಿಟ್‌ಗಳನ್ನು ಸಂಗ್ರಹಿಸಿ ನೀಡುತ್ತಿರುವುದು ಈ ಸಂದರ್ಭದಲ್ಲಿ ನಗರದಲ್ಲಿರುವ ವಂಚಿತ ಸಮುದಾಯಗಳಿಗೆ ಅನುಕೂಲವಾಗಿದೆ ನನ್ನ ಅವಧಿಯಲ್ಲಿ ಸಮಿತಿಯ ಸಹಕಾರದೊಂದಿಗೆ ಹಲವಾರು ಸ್ಲಂಗಳನ್ನು ಮಾದರಿ ಸ್ಲಂಗಳಾಗಿ ಪರಿವರ್ತಿಸಲಾಗಿದೆ. ಈಗೀನ ಸಂದರ್ಭದಲ್ಲಿ ಕೊಳಗೇರಿಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಪಡೆದು ಕೊರೊನಾ ಸೋಂಕಿನಿAದ ಪಾರಾಗಬೇಕಿದ್ದು ಕೇಂದ್ರ ಮತ್ತು ರಾಜ್ಯಸರ್ಕಾರಗಳು ಎಲ್ಲರಿಗೂ ಉಚಿತ ಲಸಿಕೆ ದೊರಕುವಂತೆ ಮಾಡಬೇಕು ಹಾಗೂ ಲಾಕ್‌ಡೌನ್ ಸಂಕಷ್ಟದಲ್ಲಿರುವ ಸ್ಲಂ ಜನರಿಗೆ ಬಿಪಿಎಲ್ ಕಾರ್ಡ್ ಅನ್ವಯ ೧೦ ಸಾವಿರ ಆರ್ಥಿಕ ಪ್ರೋತ್ಸಾಹಧನ ನೀಡಬೇಕೆಂದರು.
ಸ್ಲಂ ಜನಾಂದೋಲನ ಕರ್ನಾಟಕ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ ನಮ್ಮ ಕಾರ್ಯಕರ್ತರ ಮತ್ತು ಸಂಘಟನೆಯ ಕೆಲಸವನ್ನು ಗುರುತಿಸಿ ಸಂಕಷ್ಟದಲ್ಲಿರುವ ಮುಂಚೂಣಿ ಕಾರ್ಯಕರ್ತರಿಗೆ ಮತ್ತು ಸಂಪಾಧನೆ ಮಠ ಸ್ಲಂ ನಿವಾಸಿಗಳಿಗೆ ದಿನಸಿ ಕಿಟ್‌ನ್ನು ನೀಡಿದ್ದು ಲಾಕ್‌ಡೌನ್ ಅವಧಿಯಲ್ಲಿ ಪ್ರತಿನಿತ್ಯ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ದಿಬ್ಬೂರು ಅಲೆಮಾರಿಗಳಿಗೆ ಇಸ್ಮಾಯಿಲ್ ನಗರ ಹಂದಿಜೋಗಿಗಳಿಗೆ ಹಾಗೂ ಪಡಿತರ ಚೀಟಿ ಇಲ್ಲದವರಿಗೆ ನೀಡಿದ್ದು ರಫೀಕ್ ಅಹ್ಮದ್ ಶಾಸಕರಾಗಿದ್ದ ಅವಧಿಯಲ್ಲಿ ಸಮಿತಿಯ ಪ್ರಮುಖ ಒತ್ತಾಯಗಳನ್ನು ಈಡೇರಿಸಿದ್ದು ಇಂದು ತುಮಕೂರು ನಗರದಲ್ಲಿ ಕೊಳಗೇರಿಗಳ ಅಭಿವೃದ್ಧಿಗೆ ರಫೀಕ್ ಅಹ್ಮದ್‌ರವರ ಕೊಡುಗೆ ಪ್ರಮುಖವಾಗಿದೆ ಮುಂದೆಯು ಸಹಾ ಅವರು ನಮ್ಮೊಂದಿಗೆ ಹೋರಾಟಗಳ ಜೊತೆ ಇರುತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಆಟೋ ರಾಜು ಮತ್ತು ಸಮಿತಿಯ ಪದಾಧಿಕಾರಿಗಳಾದ ಅರುಣ್, ಶಂಕರಯ್ಯ, ಹಯಾತ್‌ಸಾಬ್, ಕಣ್ಣನ್, ಮೋಹನ್, ಟಿಆರ್, ಶಾರದಮ್ಮ, ರಂಗನಾಥ್, ಶಾಬುದ್ಧಿನ್, ಕೆಂಪಣ್ಣ, ಸಂಪಧಾನೆ ಮಠ ಶಾಖಾ ಸಮಿತಿಯ ಗೌರಮ್ಮ, ಮಹಾದೇವಮ್ಮ, ರಂಗ, ದೇವರಾಜ್, ಜಗ ಮುಂತಾದವರು ಪಾಲ್ಗೊಂಡಿದ್ದರು.