ದೇಶದ ಎಲ್ಲಾ ಜನರಿಗೆ ಉಚಿತ ಲಸಿಕೆ ನೀಡಲು ಜಿಲ್ಲಾ ಕಾಂಗ್ರೆಸ್ ಒತ್ತಾಯ

 

ತುಮಕೂರು:ದೇಶದ ಎಲ್ಲಾ ಜನರಿಗೆ ಉಚಿತವಾಗಿ ಕೋರೋನ ಲಸಿಕೆ ಹಾಕಬೇಕೆಂದು ಒತ್ತಾಯಿಸಿ ಇಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

 

ಎಐಸಿಸಿ ಮತ್ತು ಕೆ.ಪಿಸಿಸಿ ಅಧ್ಯಕ್ಷರುಗಳ ಸೂಚನೆಯ ಮೇರೆಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ಮಾಜಿ ಶಾಸಕರಾದ ಡಾ.ರಫೀಕ್ ಅಹಮದ್, ಎಸ್.ಷಪಿಅಹಮದ್, ಆರ್.ನಾರಾಯಣ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಆಟೋ ರಾಜು, ಮೆಹಬೂಬ್,ಪಾಲಿಕೆ ಸದಸ್ಯರಾದ ನಯಾಜ್ ಅಹಮದ್,ಮಹೇಶ್,ಮುಖಂಡರಾದ ಸಂಜೀವ್‌ಕುಮಾರ್, ಹೆಚ್.ಸಿ. ಹನುಮಂತಯ್ಯ,ಮoಜುನಾಥ್,ಸುಜಾತ,ಪುಟ್ಟರಾಜು,ತರುಣೇಶ್,ಜಿಯಾ,ರೇವಣ್ಣಸಿದ್ದಯ್ಯಅವರುಗಳು,ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು.

ಇದೇ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ,ಕೋವಿಡ್ ಸೋಂಕಿನಿoದ ದೇಶ ಮುಕ್ತವಾಗಬೇಕಾದರೆ ದೇಶದ ಪ್ರತಿಯೊಬ್ಬ ಪ್ರಜೆಗೂ ಕೋವಿಡ್ ವಿರುದ್ದದ ಲಸಿಕೆ ಸಿಗುವಂತಾಗಬೇಕು ಎಂಬುದು ಕಾಂಗ್ರೆಸ್ ಪಕ್ಷದ ಪ್ರಮುಖ ಹೋರಾಟ ವಾಗಿದೆ.ಈ ನಿಟ್ಟಿನಲ್ಲಿ ಈಗಾಗಲೇ ಕಾಂಗ್ರೆಸ್ ಪಕ್ಷದ ಮುಖಂಡರು ಸರಕಾರ ನೀಡುವ ಶಾಸಕರ ಅನುದಾನವನ್ನು ಬಳಕೆ ಮಾಡಿಕೊಂಡು ೧೦೦ ಕೋಟಿ ರೂಗಳಲ್ಲಿ ಲಸಿಕೆ ಖರೀದಿ ಮಾಡಲು ಮುಂದಾಗಿ ಸರಕಾರದ ಅನುಮಿತಿಗೆ ಪತ್ರ ಬರೆದಿದ್ದರೂ ಸರಕಾರ ಇದುವರೆಗು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಆರೋಪಿಸಿದರು.

 

ಮಾಜಿ ಶಾಸಕ ಡಾ.ರಫೀಕ್ ಅಹಮದ್ ಮಾತನಾಡಿ,ಸರಕಾರ ಲಸಿಕೆ ನೀಡುವಲ್ಲಿಯೂ ತಾರತಮ್ಯ ನೀತಿ ಅನುಸರಿಸುತ್ತಿದೆ. ದಿನಗಟ್ಟಲೆ ಸರತಿ ಸಾಲಿನಲ್ಲಿ ನಿಂತರೂ ಸರಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ದೊರೆಯುತ್ತಿಲ್ಲ.ಆದರೆ ಖಾಸಗಿ ಆಸ್ಪತ್ರೆಗಳಲ್ಲಿ ೨೦೦೦ದಿಂದ ೨೫೦೦ ರೂಗಳಿಗೆ ಒಂದು ಡೋಸ್ ಲಸಿಕೆ ಮಾರಾಟವಾಗುತ್ತಿದೆ.ಮೊದಲೇ ಕೋವಿಡ್ ಸಂಕಷ್ಟದಲ್ಲಿರುವ ಬಡವರು,ಕೂಲಿ ಕಾರ್ಮಿಕರು ಇಷ್ಟು ಹಣ ಖರ್ಚು ಮಾಡಿ ಲಸಿಕೆ ಪಡೆಯಲು ಸಾಧ್ಯವಿಲ್ಲ.ಹಾಗಾಗಿ ಸರಕಾರ ಕೂಡಲೇ ಲಸಿಕೆ ಕಾರ್ಯಕ್ರಮವನ್ನು ಸಾರ್ವತ್ರಿಕರಣಗೊಳಿಸಿ,೧೮ ವರ್ಷ ಮೇಲ್ಪಟ್ಟ ಎಲ್ಲಾ ಜನರಿಗೆ ಉಚಿತವಾಗಿ ಲಸಿಕೆ ನೀಡಲು ಮುಂದಾಗಬೇಕೆAಬುದು ಕಾಂಗ್ರೆಸ್ ಪಕ್ಷದ ಆಗ್ರಹವಾಗಿದೆ.ಅಲ್ಲದೆ ಲಸಿಕೆಯನ್ನು ಹೊರದೇಶಗಳಿಗೆ ರಫ್ತು ಮಾಡುವುದನ್ನು ತಡೆಹಿಡಿಯಬೇಕೆಂದರು.

 

 

 

ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಸ್.ಷಪಿ ಅಹಮದ್ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮ ಸಂಪೂರ್ಣ ವಿಫಲವಾಗಿದೆ.ಲಸಿಕಾ ಕೇಂದ್ರದ ಮುಂದೆ ಸಾವಿರ ಗಟ್ಟಲೆ ಜನರು ಸರತಿ ಸಾಲಿನಲ್ಲಿ ನಿಂತು,ವ್ಯಾಕ್ಸಿನೇಷನ್ ಸಿಗದೆ ಹಿಂದಿರುಗುತ್ತಿದ್ದಾರೆ.ನಗರ ಪ್ರದೇಶದಲ್ಲಿ ಒಂದು ವಾರ್ಡಿನಲ್ಲಿ ಐದು ಕಡೆ, ಗ್ರಾಮೀಣ ಭಾಗದಲ್ಲಿ ಕನಿಷ್ಠ ಎರಡು ಕಡೆ ಜಿಲ್ಲಾಡಳಿತ ಲಸಿಕಾ ಕೇಂದ್ರ ತೆರೆದು ಅಗತ್ಯವಿರುವ ಜನರಿಗೆ ಲಸಿಕೆ ನೀಡಬೇಕು.ಈಗಾಗಲೇ ದಾವಣಗೆರೆಯಲ್ಲಿ ಕಾಂಗ್ರೆಸ್ ಮುಖಂಡರಾದ ಶಿವಶಂಕರಪ್ಪ ಅವರು ೪ ಕೋಟಿ ರೂಗಳ ನೀಡಿ, ಲಸಿಕೆ ಖರೀದಿಸಿ, ಉಚಿತವಾಗಿ ನೀಡಲು ನೀಡಿದ್ದಾರೆ. ಇತರೆ ಕಡೆಗಳಲ್ಲಿಯೂ ಅವಕಾಶ ಕಲ್ಪಿಸಬೇಕೆಂದರು.

Leave a Reply

Your email address will not be published. Required fields are marked *

You cannot copy content of this page

error: Content is protected !!