ರಾಜ್ಯಾದ್ಯಂತ ಕೊರನ ಹಿನ್ನೆಲೆ ಲಾಕ್ಡೌನ್ ಘೋಷಣೆಯಾಗಿದ್ದು ಸರ್ಕಾರದ ನಿಯಮಾವಳಿಯಂತೆ ಅಂಗಡಿ ಮುಂಗಟ್ಟುಗಳಿಗೆ ಕೆಲ ನಿರ್ದಿಷ್ಟ ಸಮಯವನ್ನು ನೀಡುವ ಮೂಲಕ ವ್ಯಾಪಾರಕ್ಕೆ ಅನುವು ಮಾಡಿಕೊಟ್ಟಿದೆ ಸರ್ಕಾರ. ಆದರೆ ಕೆಲ ವೈನ ಸ್ಟೋರ್ ಹಾಗೂ ಬಾರ್ ಗಳ ಮುಂದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ.
ಇದಕ್ಕೆ ಪುಷ್ಟಿ ನೀಡುವಂತೆ ತುಮಕೂರಿನ ಸದಾಶಿವನಗರದಲ್ಲಿ ವ್ಯಕ್ತಿಯೊಬ್ಬ ಹಲವು ದಿನಗಳಿಂದ ಅಕ್ರಮವಾಗಿ ಹೆಚ್ಚಿನ ಹಣಕ್ಕೆ ಮದ್ಯ ಮಾರಾಟವನ್ನು ಮಾಡುತ್ತಿರುವುದು ಕಂಡುಬಂದಿದೆ. ಇಷ್ಟೆಲ್ಲ ಮಾಹಿತಿ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಇಲ್ಲದಂತೆ ಕಾಣುತ್ತಿದೆ. ಇನ್ನು ವೈನ್ ಸ್ಟೋರ್ ಗಳಿಗೆ ಬೆಳಗ್ಗೆ ಆರರಿಂದ ಬೆಳಗ್ಗೆ 10 ಗಂಟೆಯವರೆಗೆ ವ್ಯಾಪಾರಕ್ಕೆ ಸರ್ಕಾರ ಸಮಯ ನಿಗದಿ ಮಾಡಿದ್ದರು ಕೂಡ ಇಂತಹ ಅಕ್ರಮವಾಗಿ ಮದ್ಯ ಮಾರಾಟ ಮಾಡುವವರ ಮೇಲೆ ಕ್ರಮ ಕೈಗೊಳ್ಳಬೇಕಾಗಿದೆ .
ಇದು ಕೇವಲ ಒಂದು ಬಡಾವಣೆಯ ಚಿತ್ರಣವಲ್ಲ ಹಲವು ನಗರಗಳಲ್ಲಿ ಹೀಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಕರೋನ ಸಂಕಷ್ಟ ಕಾಲದಲ್ಲಿ ಸಾರ್ವಜನಿಕರಿಗೆ ಜೀವನ ನಡೆಸುವುದು ಕಷ್ಟವಾಗಿದೆ ಕುಟುಂಬಗಳಿಗೆ ಅನ್ನ ಆಹಾರ ಒದಗಿಸುವಲ್ಲಿ ಕುಟುಂಬಗಳೇ ಹೈರಾಣಾಗಿದ್ದಾರೆ ಆದರೆ ಇಂತಹ ಸಂದರ್ಭದಲ್ಲಿ . ಹೆಚ್ಚಿನ ಹಣ ತೆತ್ತು ಕುಡಿಯುವ ಕುಡುಕರ ಕುಟುಂಬ ಬೀದಿಗೆ ಬೀಳುವುದರಲ್ಲಿ ಯಾವುದೇ ಅನುಮಾನವಿಲ್ಲ ಇನ್ನಾದರೂ ಸಂಬಂಧಪಟ್ಟ ಇಲಾಖೆಗಳು ಕ್ರಮ ಕೈಗೊಳ್ಳಬೇಕಾಗಿದೆ.